ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Vijayalakshmi Darshan: ದರ್ಶನ್ ಗೆ ಪತ್ನಿ ವಿಜಯಲಕ್ಷ್ಮೀ ಡಿವೋರ್ಸ್ ?!

Vijayalakshmi Darshan: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವಾತನ ಕೊಲೆಗೆ ಕಾರಣವಾದ ಆರೋಪದ ಮೇಲೆ ನಟ ದರ್ಶನ್‌ನನ್ನು ಬಂಧಿಸಲಾಗಿದ್ದು ದಿನದಿಂದ ದಿನಕ್ಕೆ ಹೊಸ ವಿಚಾರಗಳು ಬಯಲಾಗುತ್ತಿವೆ.
01:21 PM Jun 13, 2024 IST | ಸುದರ್ಶನ್
UpdateAt: 01:36 PM Jun 13, 2024 IST
Advertisement

Vijayalakshmi Darshan: ಪ್ರೇಯಸಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವಾತನ ಕೊಲೆಗೆ ಕಾರಣವಾದ ಆರೋಪದ ಮೇಲೆ ನಟ ದರ್ಶನ್‌ನನ್ನು ಬಂಧಿಸಲಾಗಿದ್ದು ದಿನದಿಂದ ದಿನಕ್ಕೆ ಹೊಸ ವಿಚಾರಗಳು ಬಯಲಾಗುತ್ತಿವೆ. ಈ ಬೆನ್ನಲ್ಲೇ ಗಂಡನಿಂದ ಭಾರೀ ಮನ ನೊಂದಿರುವ ಹೆಂಡತಿ ವಿಜಯಲಕ್ಷ್ಮೀ(Vijayalakshmi Darshan) ಅವರು ಪತಿ ದರ್ಶನ್ ಗೆ ವಿಚ್ಛೇದನ(Divorce)ನೀಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Advertisement

Temple Bell: ನಿಮಗಿದು ಗೊತ್ತಾ! ದೇವಾಲಯದಲ್ಲಿರುವ ಗಂಟೆಯಲ್ಲಿದೆ ವಿಶಿಷ್ಟ ದೈವರಹಸ್ಯ!

ಈಗಾಗಲೇ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಮ್‌(Instagram)ಖಾತೆಯಿಂದ ದರ್ಶನ್ ಅವರನ್ನು ಅನ್‍ಫಾಲೋ ಮಾಡಿದ್ದಾರೆ. ಅಲ್ಲದೇ ತಾವು ಫಾಲೋ ಮಾಡುತ್ತಿದ್ದ ಎಲ್ಲರನ್ನೂ ಅನ್‍ಫಾಲೋ ಮಾಡಿದ್ದಾರೆ. ಜೊತೆಗೆ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯ ಡಿಪಿಯನ್ನು ಕೂಡ ಡಿಲೀಟ್ ಮಾಡಿದ್ದಾರೆ. ಈ ಮೂಲಕ ವಿಜಯಲಕ್ಷ್ಮಿ ಮೌನಕ್ಕೆ ಶರಣಾಗಿದ್ದಾರೆ. ಈಗಾಗಲೇ ಪವಿತ್ರಾ ಗೌಡ(Pavitra Gowda) ಅವರ ವಿಚಾರದಲ್ಲಿ ಸಾಕಷ್ಟು ಬಾರಿ ಹಿಂಸೆ, ನೋವು, ಸಂಕಷ್ಟಗಳನ್ನು ಮೌನವಾಗಿಯೇ ಎದುರಿಸುತ್ತಾ ಬಂದಿರುವ ವಿಜಯಲಕ್ಷ್ಮೀ ಅವರಿಗೆ ದರ್ಶನ್‌ ಅವರ ಬಂಧನ ಪ್ರಕರಣ ದಿಕ್ಕು ತೋಚದಂತೆ ಮಾಡಿದೆ. ಹೀಗಾಗಿ ವಿಜಯಲಕ್ಷ್ಮಿ ಈ ಬಾರಿ ಪತಿಯಿಂದ ದೂರಾಗುವ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಆರೋಪ ಸಾಬೀತು ಆದರೆ ತಮ್ಮ ಪತಿ ದರ್ಶನ್‌ ಅವರಿಗೆ ವಿಜಯಲಕ್ಷ್ಮೀ ಅವರು ಡಿವೋರ್ಸ್‌ ಕೊಡುವುದು ಖಾತ್ರಿ ಎನ್ನಲಾಗುತ್ತಿದೆ.

Advertisement

ಹಿಂದೆ ಪತ್ನಿ ಮೇಲೂ ಹಲ್ಲೆ:
ಸೆಪ್ಟೆಂಬರ್ 8, 2011ರಲ್ಲಿ ನಟ ದರ್ಶನ್ ಪತ್ನಿಯ ಮೇಲೆ ಗಂಭೀರ ಹಲ್ಲೆ ಮಾಡಿದ್ದರು. ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದರು. ಅಷ್ಟೇ ಅಲ್ಲ ತಮ್ಮ ಮಗುವನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದರು ಎಂದು ಆರೋಪಿಸಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮರುದಿನ ದೂರು ದಾಖಲಾಗಿತ್ತು. ಆದರೆ ಕೊನೆಗೆ ಪತಿಯನ್ನು ಬಚಾವ್ ಮಾಡುವ ಕಾರಣ ವಿಚಾರಣೆ ಸಮಯದಲ್ಲಿ ವಿಜಯಲಕ್ಷ್ಮೀ ಅವರು "ತಮ್ಮ ಪತಿ ಸಿಗರೇಟ್ ಸೇದುವಾಗ ಆಕಸ್ಮಿಕವಾಗಿ ಅದು ತಮ್ಮ ಮುಖಕ್ಕೆ ತಗುಲಿತು, ಅವರು ಕಾರಿನ ಬಾಗಿಲು ತೆಗೆಯಬೇಕಾದರೆ ಆಕಸ್ಮಿಕವಾಗಿ ಮಗುವಿಗೆ ತಗುಲಿತು" ಎಂದು ಹೇಳಿದ್ದರು. ಮತ್ತಿಬ್ಬರು ಸಾಕ್ಷಿಗಳು ಕೂಡ ತಮ್ಮ ಹೇಳಿಕೆ ಬದಲಿಸಿ ಅಂದು ದರ್ಶನ್‌ ಸಂಕಷ್ಟದಿಂದ ಹೊರ ಬರುವಂತೆ ಮಾಡಿದ್ದರು.

ಈ ಘಟನೆ ನಡೆದು ಕೆಲವೇ ವರ್ಷಗಳಲ್ಲಿ ಅಂದರೆ 2016ರಲ್ಲಿ ಮತ್ತೆ ದರ್ಶನ್‌, ವಿಜಯಲಕ್ಷ್ಮೀ ಅವರ ಮೇಲೆ ಹಲ್ಲೆ ನಡೆಸಿದ ವಿಚಾರ ಸುದ್ದಿಯಾಗಿತ್ತು. ಈ ಪ್ರಕರಣವೂ ಕೂಡ ಪೊಲೀಸ್‌ ಠಾಣೆಯ ಮೆಟ್ಟಿಲೇರಿ ಕೊನೆಗೆ ರಾಜಿ ಸಂಧಾನದಲ್ಲಿ ಅಂತ್ಯವಾಗಿತ್ತು. ಈ ಬಳಿಕ ದರ್ಶನ್‌-ವಿಜಯಲಕ್ಷ್ಮೀ ದಂಪತಿ ಮನಸ್ತಾಪ ಮರೆತು ಜೊತೆಯಾಗಿದ್ದು, ಎಲ್ಲೆಡೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈ ನಡುವೆ ನಟಿ ಪವಿತ್ರ ಗೌಡ ಅವರೊಂದಿಗಿನ ದರ್ಶನ್‌ ಆಪ್ತತೆ, ವಿಜಯಲಕ್ಷ್ಮೀ ಅವರ ನೆಮ್ಮದಿ ಕೆಡಿಸುತ್ತಿತ್ತು.

ಶೀಘ್ರದಲ್ಲಿ ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ! ಸಂಪುಟ ಸಭೆಯಲ್ಲಿ ಮಹತ್ವ ನಿರ್ಧಾರ!

Related News

Advertisement
Advertisement