For the best experience, open
https://m.hosakannada.com
on your mobile browser.
Advertisement

Vijayalakshmi Darshan: ಮತ್ತೆ ದರ್ಶನ್ ಭೇಟಿಗೆಂದು ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮೀ- ಹೆಂಡತಿ ಹೇಳಿದ ಆ ಮಾತು ಕೇಳಿ ದರ್ಶನ್ ಫುಲ್ ಶಾಕ್ !!

Vijayalakshmi Darshan: ವಿಜಯಲಕ್ಷ್ಮೀ ಅವರು ಎರಡನೇ ಬಾರಿಗೆ ದರ್ಶನ್ ಭೇಟಿಗಾಗಿ ತೆರಳಿದ್ದಾರೆ. ಈ ವೇಳೆ ಪತ್ನಿ ವಿಜಯಲಕ್ಷ್ಮೀ ಹೇಳಿದ್ದನ್ನು ಕೇಳಿ ದರ್ಶನ್(Darshan) ಅವರು ಶಾಕ್ ಆಗಿದ್ದಾರಂತೆ!!
01:00 PM Jul 16, 2024 IST | ಸುದರ್ಶನ್
UpdateAt: 01:00 PM Jul 16, 2024 IST
vijayalakshmi darshan  ಮತ್ತೆ ದರ್ಶನ್ ಭೇಟಿಗೆಂದು ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮೀ  ಹೆಂಡತಿ ಹೇಳಿದ ಆ ಮಾತು ಕೇಳಿ ದರ್ಶನ್ ಫುಲ್ ಶಾಕ್
Advertisement

Vijayalakshmi Darshan: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿಕೊಂಡಿದ್ದಾರೆ. ಕೆಲವು ದಿನಗಳ (ಜೂನ್ 24)ಹಿಂದಷ್ಟೇ ಅವರ ಪತ್ನಿ ವಿಜಯಲಕ್ಷ್ಮಿ, ದರ್ಶನ್(Vijayalakshmi Darshan) ಅವರನ್ನು ಭೇಟಿ ಮಾಡಿ ಬಂದಿದ್ದರು. ಇದೀಗ ಮತ್ತೆ ವಿಜಯಲಕ್ಷ್ಮೀ ಅವರು ಎರಡನೇ ಬಾರಿಗೆ ದರ್ಶನ್ ಭೇಟಿಗಾಗಿ ತೆರಳಿದ್ದಾರೆ. ಈ ವೇಳೆ ಪತ್ನಿ ವಿಜಯಲಕ್ಷ್ಮೀ ಹೇಳಿದ್ದನ್ನು ಕೇಳಿ ದರ್ಶನ್(Darshan) ಅವರು ಶಾಕ್ ಆಗಿದ್ದಾರಂತೆ!! ಹಾಗಿದ್ರೆ ವಿಜಯಲಕ್ಷ್ಮೀ ದರ್ಶನ್ ಗೆ ಹೇಳಿದ್ದೇನು?

Advertisement

Gauri Lankesh: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ; ಆರೋಪಿಗಳಿಗೆ ಜಾಮೀನು ಮಂಜೂರು

ಹೌದು! ದರ್ಶನ್‌ಗೆ ಜಾಮೀನು ಕೊಡಿಸಬೇಕು ಎಂದು ಪತ್ನಿ ವಿಜಯಲಕ್ಷ್ಮಿ ತುಂಬಾ ಕಷ್ಟ ಪಡುತ್ತಿದ್ದಾರೆ ಈಗಾಗಲೆ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ. ಆದರೂ ಸದ್ಯ ಜಾಮೀನು ಸಿಗುವುದು ಅಸಾಧ್ಯ ಎನ್ನಲಾಗಿದೆ. ಹೀಗಾಗಿ ಹಿನ್ನೆಲೆಯಲ್ಲಿ ಜುಲೈ 15ರಂದು ದರ್ಶನ್‌ರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ರೂಗೂದೀಪ ಮತ್ತು ಅಳಿಯ ಚಂದನ್ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗಂಡನೊಂದಿಗೆ ಮಾತನಾಡುತ್ತಾ ಸದ್ಯಕ್ಕೆ ಜಾಮೀನು ಸಿಗುವುದಿಲ್ಲ ಎಂದು ಎಂದು ವಿಜಯಲಕ್ಷ್ಮಿ ದರ್ಶನ್ ಗೆ ಹೇಳಿದ್ದಾರೆ. ಹೆಂಡತಿ ಹೇಳಿದ ಈ ವಿಚಾರ ಕೇಳಿ ದರ್ಶನ್ ಶಾಕ್ ಆಗಿದ್ದಾರೆ.

Advertisement

ಜೈಲೂಟ ಸೇವಿಸಿ ದರ್ಶನ್ ಗೆ ಅತಿಸಾರ !!
ಜೈಲಿನ ಊಟ ಸೇವಿಸಿ ದರ್ಶನ್‌ ಅತಿಸಾರದಿಂದ ಬಳಲುತ್ತಿದ್ದಾರೆ. ಜೈಲಿನಲ್ಲಿ ನೀಡುತ್ತಿರುವ ಆಹಾರದಿಂದ ದರ್ಶನ್‌ಗೆ ಫುಡ್ ಪಾಯಿಸನಿಂಗ್ ಆಗುತ್ತಿದೆ ಎಂದು ಜೈಲಿನ ವೈದ್ಯರೇ ಅಭಿಪ್ರಾಯ ನೀಡಿದ್ದಾರೆ. ಇದರಿಂದ ದರ್ಶನ್ ತುಂಬಾ ತೂಕ ಕಡಿಮೆಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆ ನಟ ದರ್ಶನ್‌ ಮನೆಯ ಆಹಾರ, ಹಾಸಿಗೆ ಮತ್ತು ಪುಸ್ತಕಗಳನ್ನು ಕೇಳಿದ್ದಾರೆ ಎಂದು ದರ್ಶನ್‌ ಪರ ವಕೀಲರು ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಅರ್ಜಿ ಪರಿಶೀಲಿಸಿದ ನಂತರ, ನಿಯಮವು ಎಲ್ಲರಿಗೂ ಸಾಮಾನ್ಯವಾಗಿದೆ. ಮತ್ತು ಈ ಪ್ರಕರಣವನ್ನು ಸಹ ಅದೇ ರೀತಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

Alchohal In Online: ಎಣ್ಣೆಪ್ರಿಯರಿಗೆ ಸಿಹಿ ಸುದ್ದಿ; ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಆನ್‌ಲೈನ್ನಲ್ಲಿ ಸಿಗಲಿದೆ ಆಲ್ಕೋಹಾಲ್

Advertisement
Advertisement
Advertisement