For the best experience, open
https://m.hosakannada.com
on your mobile browser.
Advertisement

Vidhana Parishath Election : ಕಾಂಗ್ರೆಸ್ ನಿಂದ 7 ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ !!

Vidhana Parishath Election : ಬಿಜೆಪಿ(BJP) ಪಟ್ಟಿ ಬಿಡುಗಡೆ ಬೆನ್ನಲ್ಲೇ ಕಾಂಗ್ರೆಸ್(Congress)ಕೂಡ 7 ಕ್ಷೇತ್ರಗಳಿಖೆ ಅಭ್ಯರ್ಥಿಗಳನ್ನು ಘೋಷಿಸಿದೆ.
10:52 AM Jun 03, 2024 IST | ಸುದರ್ಶನ್
UpdateAt: 11:05 AM Jun 03, 2024 IST
vidhana parishath election   ಕಾಂಗ್ರೆಸ್ ನಿಂದ 7 ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ

Vidhana Parishath Election: ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಕಾವು ಭಾರೀ ಜೋರಾಗಿದೆ. ಪಕ್ಷಗಳ ನಡುವೆ ಪೈಪೋಟಿ ಕೂಡ ರಂಗೇರಿದೆ. ಅಳೆದು ತೂಗಿ ಅಭ್ಯರ್ಥಿಗಳಘೋಷಣೆ ಕೂಡ ಆಗುತ್ತಿದೆ. ಅಂತೆಯೇ ಇದೀಗ ಬಿಜೆಪಿ(BJP) ಪಟ್ಟಿ ಬಿಡುಗಡೆ ಬೆನ್ನಲ್ಲೇ ಕಾಂಗ್ರೆಸ್(Congress)ಕೂಡ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

Advertisement

ಪರಿಷತ್ ಪರಿಷತ್‌(Vidhana Parishath Election) ಚುನಾವಣೆಗೆ ಟಿಕೆಟ್ ಹಂಚಿಕೆ ವಿಷಯ ಕಾಂಗ್ರೆಸ್‌ ಹೈಕಮಾಂಡ್‌ ಗೆ ಪಾಳಯಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಸಿದ್ದರಾಮಯ್ಯ(CM Siddaramaiah)ಹಾಗೂ ಡಿ ಕೆ ಶಿವಕುಮಾರ್‌(D K Shivkumar)ದೆಹಲಿಯಲ್ಲಿ ಹೈಕಮಾಂಡ್‌ ನಾಯಕರ ಜೊತೆಗೆ ಚರ್ಚಿಸಿದ್ದು ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ 7 ಜನರನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಸಂಖ್ಯಾಬಲದ ಮೇಲೆ ಒಟ್ಟು 11ರಲ್ಲಿ 7 ಸ್ಥಾನಗಳು ಕಾಂಗ್ರೆಸ್​ಗೆ ಸಿಗಲಿದ್ದು, ಆ ಸ್ಥಾನಗಳಿಗೆ ಇದೀಗ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.

ಇದನ್ನೂ ಓದಿ: Schoolarship: ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ರೂ.10 ಸಾವಿರ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ!

Advertisement

ಯಾರಿಗೆಲ್ಲಾ ಸಿಕ್ಕಿತು ಟಿಕೆಟ್?!
* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ,
* ಹಾಲಿ ಸಚಿವ ಎನ್.ಎಸ್.ಬೋಸರಾಜು
* ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು, * ವಸಂತಕುಮಾರ್,
* ಜಗದೇವ್ ಗುತ್ತೇದಾರ್
* ಐವನ್ ಡಿಸೋಜಾ
* ಬಿಲ್ಕಿಸ್ ಬಾನೊ

300 ಮಂದಿ ಇದ್ದ ಟಿಕೆಟ್‌ ಆಕಾಂಕ್ಷಿಗಳು
ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಚುನಾವಣೆ ನಡೆಯುತ್ತಿರುವ 7 ಸ್ಥಾನಗಳಿಗೆ ಬರೋಬ್ಬರು 300 ಮಂದಿ ಆಕಾಂಕ್ಷಿಗಳಿದ್ದರು. ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿ ಹೈಕಮಾಂಡ್‌ ಇತ್ತು ಅಂತಿಮವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಅಂದಹಾಗೆ ಒಟ್ಟು 11 ಸ್ಥಾನಗಳಲ್ಲಿ ಆಯಾ ಪಕ್ಷಗಳ ಶಾಸಕರ ಸಂಖ್ಯಾ ಬಲಕ್ಕೆ ಅನುಗುಣವಾಗಿ ಕಾಂಗ್ರೆಸ್ 7, ಬಿಜೆಪಿ 3 ಮತ್ತು ಜೆಡಿಎಸ್ ಒಂದು ಸ್ಥಾನ ಗೆಲ್ಲಲು ಅವಕಾಶವಿದೆ.

ಇದನ್ನೂ ಓದಿ: Vidhana Parishath Election : ಕಾಂಗ್ರೆಸ್ ನಿಂದ 7 ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ !!

Advertisement
Advertisement
Advertisement