Viral Video: ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ವ್ಯಕ್ತಿ! ವಿಡಿಯೋ ವೈರಲ್!
Viral Video: ಮಧ್ಯಾಹ್ನ ಊಟ ಮಾಡಿ ನಿದ್ದೆಗೆ ಜಾರಿದಂತಹ ಕಾರ್ಮಿಕನನ್ನು ಎಚ್ಚರಗೊಳಿಸುವ ಸಲುವಾಗಿ ವ್ಯಕ್ತಿಯೊಬ್ಬ ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ಮಲಗಿದ್ದ ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ಅಮಾನವೀಯ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ (Viral Video) ಆಗಿದೆ.
ಮಾಹಿತಿ ಪ್ರಕಾರ, ಈ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿನ ದುಬಗ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ರಾಜ್‌ಕುಮಾರ್ ರಾವತ್ ಎಂಬಾತ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಲೋಡ್ ಮಾಡುವ ಮತ್ತು ಇಳಿಸುವ ಕಾಯಕವನ್ನು ಮಾಡುತ್ತಿದ್ದ. ಈತ ಮಧ್ಯಾಹ್ನ ಊಟ ಮಾಡಿ ಹಾಯಾಗಿ ಮಲಗಿದ್ದನು. ನಿದ್ದೆಯಿಂದ ಈತ ಎಚ್ಚರಗೊಳ್ಳದಿದ್ದಾಗ ಸಂಜಯ್ ಮೌರ್ಯ ಎಂಬಾತ ಕೋಪದಿಂದ ಈತನ ಮುಖದ ಮೇಲೆಯೇ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ. ಜೊತೆಗೆ ದೈಹಿಕ ಹಲ್ಲೆಯನ್ನು ಕೂಡಾ ಮಾಡಿದ್ದಾನೆ ಎಂದು ಹೇಳಲಾಗಿದೆ.
ರಾಜ್‌ಕುಮಾರ್ ರಾವತ್ ಮತ್ತು ಸಂಜಯ್ ಮೌರ್ಯ ಇಬ್ಬರೂ ಪರಿಚಿತರು. ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಮಧ್ನಾಹ್ಯದ ಮೇಲೆ ಮದ್ಯ ಕುಡಿದು ಇಬ್ಬರೂ ಮಲಗಿದ್ದರು. ಇದೇ ನಶೆಯಲ್ಲಿ ಮೌರ್ಯ ಎಂಬಾತ ರಾವತ್ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಸದ್ಯ ಈ ಅಮಾನವೀಯ ಘಟನೆಯ ಬಳಿಕ ಜೂನ್ 02 ರಂದು ರಾಜ್‌ಕುಮಾರ್ ಪತ್ನಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿ ಆರೋಪಿಯನ್ನು ಬಂಧಿಸಿದ್ದಾರೆ.