For the best experience, open
https://m.hosakannada.com
on your mobile browser.
Advertisement

Mangaluru University : ಮಂಗಳೂರು ವಿವಿ ಘಟಿಕೋತ್ಸವ - ರಾಜ್ಯಪಾಲರ ರಾದ್ಧಾಂತಕ್ಕೆ ಕಣ್ಣೀರು ಹಾಕಿದ ಕುಲಪತಿ !!

10:55 PM Jun 15, 2024 IST | ಸುದರ್ಶನ್
UpdateAt: 10:55 PM Jun 15, 2024 IST
mangaluru university   ಮಂಗಳೂರು ವಿವಿ ಘಟಿಕೋತ್ಸವ   ರಾಜ್ಯಪಾಲರ ರಾದ್ಧಾಂತಕ್ಕೆ ಕಣ್ಣೀರು ಹಾಕಿದ ಕುಲಪತಿ

Mangaluru University ಘಟಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯದ ರಾಜ್ಯಪಾಲರು(Governor) ಮೊದಲೇ ರೂಪಿತವಾದ ಕಾರ್ಯಕ್ರಮವನ್ನು ತನಗೆ ಬೇಕಾದಂತೆ ರೂಪಿಸಿಕೊಂಡು, ಇಡೀ ಕಾರ್ಯಕ್ರಮವನ್ನು ಅಸ್ತವ್ಯಸ್ತಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೇದಿಕೆಯಲ್ಲಿಯೇ ವಿವಿಯ ಕುಲಪತಿಗಳಾದ ಡಾ. ಪಿ ಎಲ್ ಧರ್ಮ (Vice chancellor Dr P L Dharma) ಕಣ್ಣೀರು ಹಾಕಿದ್ದಾರೆ.

Advertisement

ಹೌದು, ಮಂಗಳೂರು ವಿವಿಯಲ್ಲಿ ಬೆಳಗ್ಗೆ 12 ಗಂಟೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 42ನೆ ಘಟಿಕೋತ್ಸವದ(Conversation Program) ಕಾರ್ಯಕ್ರಮ ಸುಂದರವಾಗಿ ರೂಪುಗೊಂಡಿತ್ತು. ಘಟಿಕೋತ್ಸವ ನಡೆಸಲು ಮಂಗಳೂರು ವಿವಿ ಎಲ್ಲಾಧಿಕಾರಿಗಳು ಪೂರ್ವಸಿದ್ದತೆ ನಡೆಸಿದ್ದರು. ಆದರೆ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thavar Chand Gehlot) ಅವರು ವಿಶ್ವವಿದ್ಯಾಲಯದ ಶಿಷ್ಟಚಾರವನ್ನು ಮುರಿದು ಇಡೀ ಕಾರ್ಯಕ್ರಮದ ಚಿತ್ರಣವನ್ನೇ ಬದಲಿಸಿ ತಮಗೆ ಬೇಕಾದ ಹಾಗೆ ಆಯೋಜಿಸಿದರು.

ಇಷ್ಟೇ ಅಲ್ಲದೆ ರಾಜ್ಯಪಾಲರು ವೇದಿಕೆಯಲ್ಲೇ ಕೂತು ಏರುಧ್ವನಿಯಲ್ಲೇ ಕಾರ್ಯಕ್ರಮದ ಕ್ರಮವನ್ನೇ ಬದಲು ಮಾಡಲು ನಿರ್ದೇಶಿಸುತ್ತಿದ್ದರು. ಒಂದುವರೆ ಗಂಟೆಯ ಇಡೀ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ವಿವಿಯ ಉಪ ಕುಲಪತಿ, ಪರೀಕ್ಷಾಂಗ ಕುಲಸಚಿವರಿಗೆ ಕೂತಲ್ಲೇ ನಿರ್ದೇಶನ ನೀಡುತ್ತಿದ್ದರು. ಇದು ಇಡೀ ಕಾರ್ಯಕ್ರಮವನ್ನು ಒಟ್ಟಾರೆ ಮಾಡಿಬಿಟ್ಟಿತು.

Advertisement

ಈ ಮಧ್ಯೆ ರಾಜ್ಯಪಾಲರ ಬಾಡಿ ಗಾರ್ಡ್ ಮಾಧ್ಯಮದ ಕ್ಯಾಮರಾಮನ್ ಒಬ್ಬರನ್ನು ವೇದಿಕೆಯಿಂದ ಕೆಳಗೆ ತಳ್ಳಿದ ಘಟನೆಯೂ ನಡೆಯಿತು. ರಾಜ್ಯಪಾಲರ ಈ ನಡೆಗೆ ವಿವಿಯ ಕುಲಪತಿಗಳು ಕಣ್ಣೀರು ಹಾಕಿದ್ದಾರೆ.

ಮಂಗಳೂರು ವಿವಿ ಸಭಾಂಗಣದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಮುಖಂಡರು ವಿವಿ ವಿದ್ಯಾರ್ಥಿಗಳು ರಾಜ್ಯಪಾಲರ ಈ ವಿಚಿತ್ರವಾದ ನಡೆ ಕಂಡು ಅವರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಮಂತ್ರಿ ಮಹಾಷಯರಾಗಿ, ರಾಜಕೀಯ ಬದುಕು ಸವೆಸಿ, ರಾಜ್ಯಪಾಲರಾಗಿ ಬರುವ ಅವರು ವಿಶ್ವವಿದ್ಯಾಲಯಗಳಲ್ಲಿ ಅದೇಕೆ ಈ ರೀತಿ ಅತಿರೇಕದ ವರ್ತನೆ ತೋರುತ್ತಾರೋ ಗೊತ್ತಿಲ್ಲ.

Advertisement
Advertisement
Advertisement