For the best experience, open
https://m.hosakannada.com
on your mobile browser.
Advertisement

Vehicle Rules: ದೇಶಾದ್ಯಂತ ಕಾರು ಹೊಂದಿರುವವರಿಗೆ ಬಂತು ಹೊಸ ರೂಲ್ಸ್ !!

08:06 AM Mar 18, 2024 IST | ಹೊಸ ಕನ್ನಡ
vehicle rules  ದೇಶಾದ್ಯಂತ ಕಾರು ಹೊಂದಿರುವವರಿಗೆ ಬಂತು ಹೊಸ ರೂಲ್ಸ್

Vehicle Rules: : ಭಾರತೀಯ ಸಾರಿಗೆ ಇಲಾಖೆಯು ವಾಹನಗಳಿಗೆ ಹಾಗೂ ರಸ್ತೆಯ ನಿಯಮಗಳಿಗೆ ಸಂಬಂಧಪಟ್ಟಂತೆ ಹೊಸ ಹೊಸ ಕಾನೂನು, ನಿಯಮಗಳನ್ನು(Vehicle Rules) ಜಾರಿಗೊಳಿಸುತ್ತದೆ. ಅಂತೆಯೇ ಇದೀಗ ದೇಶಾದ್ಯಂತ ಕಾರು ಹೊಂದಿರುವವರಿಗೆ ಹೊಸ ರೂಲ್ಸ್ ಜಾರಿಯಾಗಿದ್ದು ಎಲ್ಲಾ ಕಾರು ಮಾಲೀಕರು ಸದ್ಯದಲ್ಲೇ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಖಡಕ್ ಆದೇಶ ಮಾಡಲಾಗಿದೆ.

Advertisement

ಇದನ್ನೂ ಓದಿ: Daskhina Kannada (Mangaluru): ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥನ ಮನೆಗೆ ನುಗ್ಗಿ ದಾಂಧಲೆ; ಶಾಸಕನ ಬೆಂಬಲಿಗರಿಂದ ಜೀವ ಬೆದರಿಕೆ, ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲು

ಹೌದು, ಇತ್ತೀಚಿನ ದಿನಗಳಲ್ಲಿ ಅಧಿಕ ಪ್ರಮಾಣದಲ್ಲಿ ರಸ್ತೆ ಅಪಘಾತಗಳು ನಡೆಯುತ್ತಿವೆ. ಈ ರಸ್ತೆ (Road) ಅಪಘಾತ (Accident) ಕ್ಕೆ ಒಂದು ಚಾಲಕರ ನಿರ್ಲಕ್ಷ್ಯ, ಕಳಪೆ ರಸ್ತೆ ಕಾರಣವಾದ್ರೆ ಇನ್ನೊಂದು ಪ್ರಯಾಣಿಕ (Passenger) ರ ನಿರ್ಲಕ್ಷ್ಯವೂ ಸಹ ಕಂಡು ಬಂದಿದೆ. ಅದರಲ್ಲೂ ಕಾರಿನ ಪ್ರಯಾಣಿಕರಲ್ಲಂತೂ ನಿರ್ಲಕ್ಷವೇ ಎದ್ದು ಕಾಣುತ್ತದೆ.

Advertisement

ಇದನ್ನೂ ಓದಿ: Parliament Election : ದಕ್ಷಿಣ ಕನ್ನಡದಲ್ಲಿ ಪ್ರಬಲ ಸಮುದಾಯದ ಈ ವ್ಯಕ್ತಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್ !!

ಕಾರುಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಸೀಟ್ ಬೆಲ್ಟ್ (Seat Belt) ವರದಾನವಾಗಿದೆ. ಚಾಲಕ ಹಾಗೂ ಮುಂದಿನ ಸೀಟ್ ನಲ್ಲಿ ಕುಳಿತುಕೊಳ್ಳುವ ವ್ಯಕ್ತಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಸೀಟ್ ಬೆಲ್ಟ್ (Seat Belt) ಧರಿಸಿದ್ದರೆ ಅಪಘಾತದ ಸಂದರ್ಭದಲ್ಲಿ ಏರ್ ಬ್ಯಾಗ್ (Airbag) ಓಪನ್ ಆಗುವ ಕಾರಣ ಅನೇಕರ ಜೀವ ಉಳಿಯುತ್ತದೆ. ಆದರೆ ಕಾರಿನಲ್ಲಿ ಪ್ರಯಾಣಿಸುವ ಬಹುತೇಕರು ಹಿಂದಿನ ಸೀಟ್ ನಲ್ಲಿ ಕುಳಿತುಕೊಂಡಾಗ ಸೀಟ್ ಬೆಲ್ಟ್ ಧರಿಸುವುದಿಲ್ಲ. ಹಿಂಬದಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಅಗತ್ಯವಿಲ್ಲವೆಂದು ಪರಿಗಣಿಸಿಬಿಡುತ್ತಾರೆ. ಆದ್ರೆ ಇದು ತಪ್ಪು. ಈ ಸೀಟ್ ಬೆಲ್ಟ್ ಹಿಂಬದಿ ಸವಾರರ ಜೀವ ಉಳಿಸುತ್ತೆ ಎನ್ನುವ ಸತ್ಯ ಅನೇಕರಿಗೆ ತಿಳಿದಿಲ್ಲ.

ಹೀಗಾಗಿ ಪ್ರಯಾಣಿಕರ ಜೀವ ಉಳಿಸಲು ಈಗ ರಸ್ತೆ ಸಾರಿಗೆ ಸಚಿವಾಲಯ ಮಹತ್ವದ ತೀರ್ಮಾನ ಕೈಗೊಂಡಿದೆ. ಏಪ್ರಿಲ್ 1, 2025 ರಿಂದ ತಯಾರಿಸಲಾಗುವ ಎಲ್ಲಾ ಕಾರುಗಳಲ್ಲಿ ಹಿಂಬದಿ ಸೀಟ್ ಬೆಲ್ಟ್ ಅಲಾರಂ (Rear Seat Belt Alarm) ಒದಗಿಸಬೇಕೆಂದು ನಿಯಮ ಜಾರಿಗೆ ತಂದಿದೆ. ಇದರಿಂದ ಬೆಲ್ಟ್ ಹಾಕಲು ಎಚ್ಚರಿಕೆ ನೀಡಿ ಅಪಘಾತಗಳನ್ನು ತಪ್ಪಿಸುತ್ತದೆ.

ಅಂದಹಾಗೆ ಕಳೆದ ವರ್ಷ ಈ ಕುರಿತು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಸರ್ಕಾರ ಅದನ್ನು ಜಾರಿಗೆ ತರಲು ಹೊರಟಿದೆ. ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿಂಬದಿಯಲ್ಲಿ ಕುಳಿತವರೂ ಸೀಟ್ ಬೆಲ್ಟ್ ಹಾಕಿದರೆ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು ಎಂಬುದು ಇದರ ಉದ್ದೇಶ. ಈಗಲೂ ಈ ನಿಯಮವಿದೆ. ಆದರೆ ಅಲರಾಮ್ ಸಿಸ್ಟಮ್ ಬಂದರೆ ಇದು ಇನ್ನೂ ಹೆಚ್ಚಿನ ಪರಿಣಾಮ ಬೀರುತ್ತದೆ.

Advertisement
Advertisement