Price Hike: ಬಿಸಿಲ ತಾಪ ಏರಿಕೆ - ತರಕಾರಿ, ಮಾಂಸದ ಬೆಲೆ ಗಗನಕ್ಕೆ !!
Price Hike: ದಿನದಿಂದ ದಿನಕ್ಕೆ ಬಿಸಿಲ ದಗೆ ಏರುತ್ತಲೇ ಇದೆ. ಅಲ್ಲಲ್ಲಿ ಮಳೆಯ ಸಿಂಚನ ಕಂಡರೂ ತಾಪ ಮಾತ್ರ ಇಳಿಕೆಯಾಗಿಲ್ಲ. ಮಳೆಗಾಲದ ಹುಟ್ಟು ಅಧಿಕೃತವಾಗುವವರೆಗೂ ಇದು ಮುಂದುವರಿಯಲಿದೆ. ಒಂದೆಡೆ ಬಿಸಿಲ ಬೇಗೆಗೆ ಜನ ಬೆಂಡಾದರೆ ಮತ್ತೊಂದೆಡೆ ತರಕಾರಿ, ಮಾಂಸದ ಬೆಲೆ ಗಗನಕ್ಕೇರಿ(Price Hike) ಮತ್ತಷ್ಟು ವ್ಯಥೆ ಪಡುವಂತೆ ಮಾಡಿದೆ.
ಇದನ್ನೂ ಓದಿ: KSRTC: ಕೆಎಸ್‌ಆರ್‌ಟಿಸಿ ಚಾಲಕರಿಗೆ ಸಿಗಲಿದೆ ಇನ್ನು 9 ಗಂಟೆ ವಿಶ್ರಾಂತಿ
ಹೌದು, ಎಲ್ಲೂ ಹೆಚ್ಚಾಗಿ ಮಳೆ ಇಲ್ಲ, ದನ-ಕರುಗಳಿಗೆ ಕುಡಿಯಲು ನೀರು, ಮೇವು ಸಿಗುತ್ತಿಲ್ಲ. ಬಿತ್ತಿದ ಬೆಳೆ ಸರಿಯಾದ ಸಮಯಕ್ಕೆ ಕೈಗೆ ಸಿಗುತ್ತಿಲ್ಲ, ಕೆಲವೆಡೆ ನೀರಿಲ್ಲದೆ ಒಣಗಿ ಹೋಗುತ್ತಿದೆ. ಬಿಸಿಲ ತಾಪದಿಂದ ಮತ್ಸ್ಯಕ್ಷಾಮ ಉಂಟಾಗುತ್ತಿದ್ದು ಮೀನು(Fish) ಪೂರೈಕೆಯೂ ಆಗುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ(Bengaluru) ತರಕಾರಿ ಜೊತೆಗೆ ಚಿಕನ್, ಮೀನು, ಮಾಂಸಾಹಾರಗಳ ಬೆಲೆಯೂ ಹೆಚ್ಚಳ ಕಾಣುತ್ತಿರುವುದು ಗ್ರಾಹಕರಲ್ಲಿ ಚಿಂತೆ ಮೂಡಿಸಿದೆ. ಹಾಗಿದ್ರೆ ಯಾವದರ ಬೆಲೆ ಎಷ್ಟಿದೆ ಎಂದು ನೋಡೋಣ.
ಇದನ್ನೂ ಓದಿ: Telangana: 30 ಮಂಗಗಳ ಶವ ಇದ್ದ ಟ್ಯಾಂಕ್‌ನಿಂದ ಜನರಿಗೆ ನೀರು ಪೂರೈಕೆ
ತರಕಾರಿ ಈಗಿನ ಮತ್ತು ಮೊದಲಿದ್ದ ದರ
ಕೊತ್ತಂಬರಿ ₹30 ₹20
ಕ್ಯಾಪ್ಸಿಕಂ ₹45 ₹20
ನುಗ್ಗಿಕಾಯಿ ₹80 ₹60
ಬದನೆಕಾಯಿ ₹35 ₹25
ಕ್ಯಾರೆಟ್ ₹40 ₹35
ಹಾಗಲಕಾಯಿ ₹40 ₹30
ಈರುಳ್ಳಿ ₹25 ₹20
ಬಿಟ್ರೋಟ್ ₹35 ₹30
ಬೀನ್ಸ್ ₹70 ₹40
ಮೂಲಂಗಿ ₹35 ₹25
ನವಿಲುಕೋಸು ₹30 ₹25
ಬೆಂಡೆಕಾಯಿ ₹40 ₹30
ಬೆಳ್ಳುಳ್ಳಿ ₹135 ₹300
ಅಲೂಗಡ್ಡೆ ₹40 ₹25
ಹೀರೆಕಾಯಿ ₹40 ₹35
ಟೊಮೆಟೋ ₹25 ₹20
ಮೆಣಸಿನಕಾಯಿ ₹60 ₹45
ಕೋಳಿ, ಮೀನು ಬೆಲೆ ಏರಿಕೆ
• ವಿಥೌಟ್ ಸ್ಕಿನ್ ಬಾಯ್ಲರ್ ಕೋಳಿ ಕೇಜಿಗೆ ₹280
• ವಿತ್ ಸ್ಕಿನ್ ₹260, ಸಜೀವ ಬಾಯ್ಲರ್ ಕೋಳಿ ಕೇಜಿಗೆ ₹160- ₹190 ಇದೆ. ಜೊತೆಗೆ ಪ್ರತಿ ವಾರ ₹5- ₹6 ಏರಿಕೆಯಾಗಬಹುದು ಎಂದು ಮಾರಾಟಗಾರರು ತಿಳಿಸಿದ್ದಾರೆ.
• ಮತ್ಸ್ಯಕ್ಷಾಮದ ಕಾರಣ ಶಿವಾಜಿನಗರ ಮೀನು ಮಾರುಕಟ್ಟೆಗೆ ಕರಾವಳಿ ಭಾಗದಿಂದ ಅಗತ್ಯದಷ್ಟು ಮೀನು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಮೀನಿನ ದರವೂ ಏರಿಕೆ ಕಂಡಿದೆ.