Veerappan: ಅಣ್ಣಾವ್ರನ್ನು ಬಿಡುಗಡೆ ಮಾಡುವಾಗ ವೀರಪ್ಪನ್ ಕೊಟ್ಟ ಉಡುಗೊರೆಯೇನು?
Veerappan: ಇಡೀ ಕನ್ನಡ ಚಿತ್ರರಂಗವನ್ನು ಒಂದು ಸಲ ಅಲ್ಲೋಲ, ಕಲ್ಲೋಲ ಮಾಡಿ ಸಂಚಲನ ಸೃಷ್ಟಿಸಿದ ವಿಚಾರ ಅಂದ್ರೆ ಅದು ಕಾಡುಗಳ್ಳ ವೀರಪ್ಪನ್(Veerappan), ಡಾ. ರಾಜ್ ಕುಮಾರ್(Dr Rajkumar) ಅವರನ್ನು ಕಿಡ್ನಾಪ್(Kidnapped) ಮಾಡಿದ್ದು. ಇದು ಅಂದು ಅನಿರೀಕ್ಷಿತ ಆಘಾತವೇ ಹೌದಾಗಿದ್ದರೂ ವೀರಪ್ಪನ್ ಮಾತ್ರ ಡಾ ರಾಜ್‌ಕುಮಾರ್ ಅವರನ್ನು ಕಾಡಿನಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದ. ಇದನ್ನು ಸ್ವತಃ ಅಣ್ಣಾವ್ರೇ ಹೇಳಿದ್ದರು. ಇಷ್ಟೇ ಅಲ್ಲ ಅವರನ್ನು ಬಿಡುಗಡೆಮಾಡುವಾಗಲೂ ಅಣ್ಣಾವ್ರಿಗೆ ವೀರಪ್ಪನ್ ಒಂದು ಉಡುಗೊರೆ ಕೂಡ ನೀಡಿದ್ದ. ಹಾಗಿದ್ರೆ ಏನದು ಆ ಉಡುಗೊರೆ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಷ್ಯ.
"ಒಳಉಡುಪಿನಿಂದ ಗಂಡನನ್ನು ಸುಲಭವಾಗಿ ವಶೀಕರಣ ಮಾಡಬಹುದು" ಎಕ್ಸ್ ಪರ್ಟ್ ಮಹಿಳೆ ಒಬ್ಬರ ವಶೀಕರಣದ ಟಿಪ್ಸ್!
ಹೌದು, ಇದೇ 24 ವರ್ಷಗಳ ಹಿಂದೆ ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಅವರನ್ನು ತೋಟದ ಮನೆಯಿಂದ ಕಾಡುಗಳ್ಳ, ನರಹಂತಕ ವೀರಪ್ಪನ್ ಅಪಹರಣ ಮಾಡಿದ್ದ. ಈ ಸುದ್ದಿ ಬೆಳಕಾಗುವುದರೊಳಗೆ ಕಾಡ್ಬಿಚ್ಚಿನಂತೆ ಹಬ್ಬಿತ್ತು. ಅಭಿಮಾನಿಗಳಲ್ಲಿ ಆತಂಕ ಹೆಚ್ಚಿತ್ತು. ಆಕ್ರೋಶ, ಪ್ರತಿಭಟನೆಗಳು ಶುರುವಾಗಿದ್ದವು. ಕಾಡುಗಳ್ಳ ವೀರಪ್ಪನ್ ಕಸ್ಟಡಿಯಲ್ಲಿ ಬರೋಬ್ಬರಿ 108 ದಿನಗಳನ್ನು ಕಳೆದಿದ್ದರು. ಅಂದರೆ ಹೆಚ್ಚು ಕಡಿಮೆ ಮೂರುವರೆ ತಿಂಗಳುಗಳ ಕಾಲ ರಾಜ್‌ಕುಮಾರ್ ಕಾಡಿನಲ್ಲಿ ಬಂಧಿಯಾಗಿದ್ದರು. ಅದೃಷ್ಟವಶಾತ್ 15 ನವೆಂಬರ್ 2000 ಇಸ್ವಿಯಂದು ವೀರಪ್ಪನ್ ಅಣ್ಣಾವ್ರನ್ನು ತನ್ನ ಕಪಿಮುಷ್ಠಿಯಿಂದ ಬಿಡುಗಡೆ ಮಾಡಿದ್ದ.
ಅಂದಹಾಗೆ ವೀರಪ್ಪನ್ ಡಾ ರಾಜ್‌ಕುಮಾರ್ ಅವರನ್ನು ಚೆನ್ನಾಗಿ ನೋಡಿಕೊಳ್ತಾ ಇದ್ದ, ಅತಿಯಾಗಿ ಗೌರವವನ್ನೂ ಕೊಡ್ತಿದ್ದ. ದೊಡ್ಡವ್ರೇ ದೊಡ್ಡವ್ರೇ ಎಂದು ಹೇಳುತ್ತ ಗೌರವವನ್ನೂ ಕೊಡ್ತಿದ್ದ. ಹಾಗೆ ಮರಳುವಾಗ ವೀರಪ್ಪನ್ ಪ್ರೀತಿಯಿಂದ ಅಣ್ಣಾವ್ರಿಗೆ ಉಡುಗೊರೆಯೊಂದನ್ನು ಕೊಟ್ಟಿದ್ದ. ಅದೇನೆಂದರೆ ರಾಜ್ ಅವರಿಗೆ ಬಿಳಿ ಪಂಚೆ ಹಾಗು ಶಾಲು ಕೊಟ್ಟು ಗೌರವಿಸಿದ್ದನಂತೆ. ವೀರಪ್ಪನ್ ಸಹಚರ ಸೇತುಕುಳಿ ಎಂಬವನು ಆನೆದಂತದಿಂದ ಮಾಡಿದ್ದ ಶಿವಲಿಂಗವನ್ನು ಕೊಟ್ಟಿದ್ದ ಎನ್ನಲಾಗಿದೆ.
ಅಣ್ಣಾವ್ರ ಜೊತೆಗೆ ಕಾಡಿಗೆ ತೆರಳಿದ್ದ ಸಂಬಂಧಿ ನಾಗೇಶ್ ಈ ಹಿಂದೆ ಕೆಲವು ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿದ್ದಾರೆ. ಅಚ್ಚರಿ ಏನಂದ್ರೆ ಅಣ್ಣಾವ್ರ ಕುಟುಂಬವಾಗಲಿ, ಸಂಬಂಧ ಪಟ್ಟವರೇ ಆಗಲಿ ವೀರಪ್ಪನ್ ಕೊಟ್ಟ ಉಡುಗೊರೆ ಏನು? ಅನ್ನೋದನ್ನು ರಿವೀಲ್ ಮಾಡಿಲ್ಲ. ಸದ್ಯಕ್ಕೆ ಈ ರಹಸ್ಯ ಅಧಿಕೃತವಾಗಿ ಇನ್ನೂ ಬಹಿರಂಗವಾಗಿಲ್ಲ.
ಕಿಡ್ನಾಪ್ ಆಗಿದ್ದು ಹೇಗೆ?
ಅಣ್ಣಾವ್ರು ನಟನೆಯಿಂದ ದೂರವಿದ್ದ ಕಾಲವದು. ಹೀಗಾಗಿ ಬೆಂಗಳೂರಿನಲ್ಲಿ ಬೇಸರವಾದರೆ, ತಮ್ಮ ಹುಟ್ಟೂರು ಗಾಜನೂರಿಗೆ ಹೋಗುತ್ತಿದ್ದರು. ಅಲ್ಲಿ ಕೆಲವು ದಿನಗಳು ಇದ್ದು ಬರುತ್ತಿದ್ದರು. ಅದು 2000ನೇ ಇಸವಿ ಜುಲೈ 30. ಡಾ.ರಾಜ್‌ಕುಮಾರ್ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರೊಂದಿಗೆ ಹುಟ್ಟೂರು ಗಾಜನೂರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಸುಳಿವು ಪಡೆದ ವೀರಪ್ಪನ್, ರಾತ್ರೋ ರಾತ್ರಿ ಅಪಹರಣ ಮಾಡಿ ರಾಜ್ಯ ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿದ್ದ. ಇವರೊಂದಿಗೆ ಅಳಿಯ ಎಸ್ ಎ ಗೋವಿಂದರಾಜು, ಸಹ ನಿರ್ದೇಶಕ ನಾಗಪ್ಪ ಮಾರಡಗಿ, ಸಂಬಂಧಿ ನಾಗೇಶ್ ಕೂಡ ಇದ್ದರು.
ವಾಹನ ಸವಾರರಿಗೆ ಗುಡ್ ನ್ಯೂಸ್!ಇನ್ನೂ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದವರಿಗೆ ಕೊನೆಯದಾಗಿ ಗಡುವು ವಿಸ್ತರಣೆ!