For the best experience, open
https://m.hosakannada.com
on your mobile browser.
Advertisement

Vastu Tips For House: ಮನೆ ಖರೀದಿ ಮಾಡೋ ಪ್ಲಾನ್ ಇದೆಯಾ? ವಾಸ್ತು ಪ್ರಕಾರ ಮನೆ ಯಾವ ದಿಕ್ಕಿನಲ್ಲಿರಬೇಕು ತಿಳಿದಿರಲಿ!!

04:07 PM Jan 02, 2024 IST | ಅಶ್ವಿನಿ ಹೆಬ್ಬಾರ್
UpdateAt: 04:10 PM Jan 02, 2024 IST
vastu tips for house  ಮನೆ ಖರೀದಿ ಮಾಡೋ ಪ್ಲಾನ್ ಇದೆಯಾ  ವಾಸ್ತು ಪ್ರಕಾರ ಮನೆ ಯಾವ ದಿಕ್ಕಿನಲ್ಲಿರಬೇಕು ತಿಳಿದಿರಲಿ
Advertisement

Vastu Tips For House: ಮನೆಯನ್ನು ವಾಸ್ತು ಪ್ರಕಾರ (vastu tips)ಕಟ್ಟಿದರೆ, ಮನೆಯಲ್ಲಿ ಸಂತೋಷ, ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಮನೆ ವಾಸ್ತು ಪ್ರಕಾರವಿದ್ದರೆ, ಅಲ್ಲಿ ಸಕಾರಾತ್ಮಕ ಶಕ್ತಿ (Positivity)ನೆಲೆಸುತ್ತದೆ ಎಂಬ ನಂಬಿಕೆಯಿದೆ. ಕೆಲವರು ಮನೆ ಹೀಗೆ ಇರಬೇಕು ಎಂದು ಯೋಜನೆ ಹಾಕಿಕೊಂಡಿರುತ್ತಾರೆ. ಇನ್ನೂ ಕೆಲವರು ಕಟ್ಟಿರುವ ಮನೆಯನ್ನೇ (Vastu Tips For House) ಖರೀದಿ ಮಾಡುತ್ತಾರೆ. ಆದರೆ ನೀವು ಮನೆ ಖರೀದಿಸುವಾಗ ವಾಸ್ತು ಪ್ರಕಾರ ಕೆಲವು ವಿಚಾರಗಳನ್ನು ಗಮನಿಸಬೇಕು.

Advertisement

ಮನೆಯಲ್ಲಿ ಎಲ್ಲವೂ ವಾಸ್ತು ಪ್ರಕಾರ ಇಟ್ಟರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂಬ ನಂಬಿಕೆ ಹೆಚ್ಚಿನ ಮಂದಿಗಿದೆ. ಹೀಗಾಗಿ, ನೀವು ಕಟ್ಟಿದ ಮನೆಯನ್ನು ಖರೀದಿಸಬೇಕು ಎಂದು ಯೋಜನೆ ಹಾಕಿದ್ದರೆ, ವಾಸ್ತುತಜ್ಞರು ಹೇಳುವ ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ.

Advertisement

ಮನೆಯ ಪ್ರವೇಶ ದ್ವಾರ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ. ವಾಸ್ತು ಪ್ರಕಾರ ನಿಮ್ಮ ಮನೆಯ ಮುಖ್ಯ ಪ್ರವೇಶ ದ್ವಾರ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಬೇಕು. ನೀವು ಮನೆಯಿಂದ ಹೊರಡುವ ಸಂದರ್ಭ, ಆ ಹೆಜ್ಜೆ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಪಡುವಂತೆ ಇರಬೇಕು ಎನ್ನಲಾಗುತ್ತದೆ. ಅದೇ ರೀತಿ, ಪ್ರವೇಶದ್ವಾರದ ಬಾಗಿಲುಗಳು ಕಪ್ಪು ಬಣ್ಣದಲ್ಲಿ ಇರಬಾರದು.

ಮನೆಯ ಪ್ರವೇಶದ್ವಾರದಿಂದ ಲಿವಿಂಗ್‌ ರೂಮ್‌ ಪೂರ್ವ, ಉತ್ತರ ಅಥವಾ ಈಶಾನ್ಯಕ್ಕೆ ಎದುರಾಗಿರಬೇಕು. ಈ ಕೋಣೆಯಲ್ಲಿ ಪೀಠೋಪಕರಣಗಳನ್ನು ಪಶ್ಚಿಮ ಇಲ್ಲವೇ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ವಾಸ್ತು ದೋಷವಿರದು. ವಾಸ್ತು ಶಾಸ್ತ್ರ ಮನೆಯ ಎಲ್ಲಾ ಕೋಣೆಗಳು ಚೌಕ ಇಲ್ಲವೇ ಆಯತಾಕಾರದ ಆಕಾರದಲ್ಲಿರಬೇಕು. ಮಲಗುವ ಕೋಣೆಯಲ್ಲಿ ಪೂಜಾ ಮಂದಿರವಿರಬಾರದು. ಹಾಸಿಗೆಗೆ ಎದುರಾಗಿ ಕನ್ನಡಿ ಇಲ್ಲವೇ ದೂರದರ್ಶನವಿಡಬಾರದು. ಮಲಗುವ ಕೋಣೆಯಲ್ಲಿ ಕನ್ನಡಿಯಲ್ಲಿ ಜನರ ಪ್ರತಿಬಿಂಬ ಕಂಡುಬಂದರೆ ಅದು ಕುಟುಂಬ ಸದಸ್ಯರಲ್ಲಿ ವಿರಸ ಉಂಟು ಮಾಡಬಹುದು.

ವಾಸ್ತು ಪ್ರಕಾರ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿರಬೇಕಾಗುತ್ತದೆ. ಅಡುಗೆ ಮನೆಯು ಉತ್ತರ, ಈಶಾನ್ಯ ಇಲ್ಲವೇ ನೈಋತ್ಯ ದಿಕ್ಕಿನಲ್ಲಿರಬಾರದು. ಅಡುಗೆಮನೆಯಲ್ಲಿ ಬೆಂಕಿಯನ್ನು ಉಂಟುಮಾಡುವ ಉಪಕರಣಗಳು ಸಹ ಆಗ್ನೇಯ ದಿಕ್ಕಿನಲ್ಲಿರಬೇಕು. ಉತ್ತಮ ಆರೋಗ್ಯ ಮತ್ತು ಬಲವಾದ ಸಂಬಂಧಗಳನ್ನು ಕಾಪಾಡಿಕೊಳ್ಳಲು, ಮಲಗುವ ಕೋಣೆಗಳು ನೈಋತ್ಯ ದಿಕ್ಕಿನಲ್ಲಿರಬೇಕು. ಈಶಾನ್ಯ ದಿಕ್ಕಿನಲ್ಲಿ ಮಲಗುವ ಕೋಣೆಯಿದ್ದರೆ ಆರೋಗ್ಯ ಸಮಸ್ಯೆ ಎದುರಾಗಬಹುದು. ಆಗ್ನೇಯ ದಿಕ್ಕಿನಲ್ಲಿರುವ ಮಲಗುವ ಕೋಣೆ ದಂಪತಿಗಳ ನಡುವೆ ಜಗಳ ಮೂಡಿಸುತ್ತದೆ.

ವಾಸ್ತುಶಾಸ್ತ್ರದ ನಂಬಿಕೆಗಳ ಪ್ರಕಾರ ತಿರುವು ಅಥವಾ ಛೇದಕವನ್ನು ನಕಾರಾತ್ಮಕ ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಈ ಸ್ಥಳಗಳಲ್ಲಿರುವ ಮನೆಗಳನ್ನು ಎಂದಿಗೂ ಖರೀದಿಸದಿರುವುದು ಉತ್ತಮ. ಮನೆಯಲ್ಲಿ ಊಟಕ್ಕಾಗಿ ಪ್ರತ್ಯೇಕ ಸ್ಥಳವಿದ್ದರೆ ಅದು ಪಶ್ಚಿಮ ಭಾಗದಲ್ಲಿರಬೇಕು. ಉತ್ತರ, ಪೂರ್ವ ಅಥವಾ ದಕ್ಷಿಣ ದಿಕ್ಕುಗಳನ್ನು ಆಯ್ಕೆ ಮಾಡಬಹುದು. ಆದರೆ ನೈಋತ್ಯ ದಿಕ್ಕಿನಲ್ಲಿ ಊಟದ ಪ್ರದೇಶವಿರಬಾರದು. ಸ್ನಾನಗೃಹ ಅಥವಾ ಶೌಚಾಲಯದ ಪ್ರವೇಶದ್ವಾರವು ಉತ್ತರ ಅಥವಾ ಪೂರ್ವ ಗೋಡೆಯ ಕಡೆಗಿರಬೇಕು. ನಿಮ್ಮ ಸ್ನಾನಗೃಹ ಅಥವಾ ಶೌಚಾಲಯವು ಅಡುಗೆ ಇಲ್ಲವೇ ಪೂಜಾ ಕೋಣೆಯ ಗೋಡೆಗೆ ಅಂಟಿರಬಾರದು.

Advertisement
Advertisement
Advertisement