For the best experience, open
https://m.hosakannada.com
on your mobile browser.
Advertisement

Vastu Tips: ಮನೆಯಲ್ಲಿ ಈ ಲಕ್ಷಣ ಕಂಡು ಬಂದಲ್ಲಿ ಖಂಡಿತಾ ನೀವು ಶೀಘ್ರದಲ್ಲಿ ಶೀಮಂತರಾಗ್ತೀರಿ ಎಂದರ್ಥ!

Vastu Tips: ನಿಮಗೆ ಮನೆಯಲ್ಲಿ ಕೆಲವೊಂದು ಸೂಚನೆಗಳು ಸಿಕ್ತಿದೆ ಅಂದ್ರೆ ಶೀಘ್ರದಲ್ಲೇ ನೀವು ಶ್ರೀಮಂತರಾಗ್ತೀರಿ ಅಂತ ಅರ್ಥ ಮಾಡ್ಕೊಳ್ಳಿ.
10:25 AM Jul 14, 2024 IST | ಕಾವ್ಯ ವಾಣಿ
UpdateAt: 10:25 AM Jul 14, 2024 IST
vastu tips  ಮನೆಯಲ್ಲಿ ಈ ಲಕ್ಷಣ ಕಂಡು ಬಂದಲ್ಲಿ ಖಂಡಿತಾ ನೀವು ಶೀಘ್ರದಲ್ಲಿ ಶೀಮಂತರಾಗ್ತೀರಿ ಎಂದರ್ಥ
Advertisement

Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಹಣದ ಹರಿವಿನ ಸುಳಿವು  ನಮಗೆ ಮೊದಲೇ ತಿಳಿಯುತ್ತದೆ ಎನ್ನಲಾಗಿದೆ. ಹೌದು, ಪ್ರಕೃತಿಯೇ ನಮಗೆ ಕೆಲವು ಸೂಚನೆ ನೀಡುವ ಮೂಲಕ ಯಾವುದೇ ಸೋಲು ಗೆಲುವನ್ನು ನಾವು ಅಂದಾಜಿಸಿಕೊಳ್ಳಬಹುದು.

Advertisement

Urinary tract infection: ಸಂಭೋಗದ ಬಳಿಕ ಶುಚಿತ್ವ ಕಾಪಾಡಿಕೊಳ್ಳದವರ ಗಮನಕ್ಕೆ! ತಪ್ಪದೇ ಈ ಮಾಹಿತಿ ತಿಳಿಯಿರಿ

ಉದಾಹರಣೆಗೆ ಮಳೆ ಬರುವ ಮೊದಲು ಮಿಂಚು, ಗುಡುಗು, ಗಾಳಿ ಹೇಗೆ ಬರುತ್ತದೋ ಅದೇ ರೀತಿ. ಸದ್ಯ ಹಣವು ನಿಮಗೆ ಬರೋದಕ್ಕೂ ಮೊದಲು ಕೆಲವು ಚಿಹ್ನೆಗಳನ್ನು ನೋಡಬಹುದು. ಅಂತೆಯೇ ವಾಸ್ತು ಶಾಸ್ತ್ರದ (Vastu Tips)ಪ್ರಕಾರ ನಿಮಗೆ ಮನೆಯಲ್ಲಿ ಕೆಲವೊಂದು ಸೂಚನೆಗಳು ಸಿಕ್ತಿದೆ ಅಂದ್ರೆ ಶೀಘ್ರದಲ್ಲೇ ನೀವು ಶ್ರೀಮಂತರಾಗ್ತೀರಿ ಅಂತ ಅರ್ಥ ಮಾಡ್ಕೊಳ್ಳಿ.

Advertisement

ಮನೆಯಲ್ಲಿ ಇಂತಹ ಸೂಚನೆಗಳನ್ನು ಕಾಣುವುದು ಶುಭ ಎನ್ನಲಾಗುತ್ತೆ. ಇದು ಮಹಾ ಲಕ್ಷ್ಮೀ ದೇವಿಯ ಆಗಮನದ ಸೂಚನೆ ಕೂಡ ಆಗಿದೆ. ವಾಸ್ತುವಿನ ಅನುಸಾರ ನಿಮ್ಮ ಮನೆಯಲ್ಲಿ ಅಚಾನಕ್ ಆಗಿ ಕಪ್ಪು ಇರುವೆಗಳ (black ants) ಗುಂಪು ಕಾಣಿಸಿಕೊಂಡರೆ, ಅದನ್ನ ಓಡಿಸಲು ಅಥವಾ ದೂರ ಮಾಡಲು ಟ್ರೈ ಮಾಡಬೇಡಿ. ಯಾಕಂದ್ರೆ ಅದು ಶುಭ ಸೂಚನೆಯಾಗಿದೆ. ಅದರಲ್ಲೂ ಈ ಕಪ್ಪು ಇರುವೆಗಳು ಯಾವುದೇ ತಿಂಡಿಯ ಮೇಲೆ ಕಾಣಿಸಿಕೊಂಡರೆ ಅದು ಶುಭ ಸಂಕೇತ.

ವಾಸ್ತುವಿನಲ್ಲಿ ತಿಳಿಸಿದಂತೆ ಆಗಿ ಮನೆಯಲ್ಲಿ ಕಪ್ಪು ಇರುವೆಗಳ ಗುಂಪು ಕಾಣಿಸಿಕೊಳ್ಳೋದು ಲಕ್ಷ್ಮೀ ದೇವಿ (Goddess Lakshmi) ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಅನ್ನುವುದರ ಸೂಚನೆ ನೀಡುತ್ತದೆ. ಅಂದ್ರೆ ನಿವು ಶೀಘ್ರದಲ್ಲಿ ಶ್ರೀಮಂತರಾಗ್ತಿರಿ. ಹಾಗಾಗಿ ಇರುವೆಗಳನ್ನ ಓಡಿಸೋ ಪ್ರಯತ್ನ ಮಾಡಬೇಡಿ.

ಇನ್ನು ನಿಮ್ಮ ಮನೆ ಹಂಚಿನ ಅಥವಾ ಟೆರೇಸ್ ಬಳಿ ಎಲ್ಲಾದರೂ ಹಕ್ಕಿ ಗೂಡು ಕಟ್ಟಿದ್ರೆ ಅದನ್ನು ಸಹ ವಾಸ್ತು ಪ್ರಕಾರ ಶುಭ ಎನ್ನಲಾಗುವುದು. ಯಾವುದೇ ಸಣ್ಣ ಹಕ್ಕಿ, ಗುಬ್ಬಚ್ಚಿ, ಪಾರಿವಾಳ ಮನೆಯಲ್ಲಿ ಗೂಡು ಮಾಡಿದ್ರೆ ಶೀಘ್ರದಲ್ಲಿ ಹಣ ಬರುತ್ತೆ ಅನ್ನೋದನ್ನ ಸೂಚಿಸುತ್ತೆ.

ಇನ್ನು ನೀವು ಬೆಳಗ್ಗೆ ಎದ್ದಾಗ ನಿಮ್ಮ ಕಿವಿಯಲ್ಲಿ ಶಂಖ ಊದುವಂತೆ ಶಬ್ಧ ಬರ್ತಿದೆ ಅಂದ್ರೆ ಅದು ಸಹ ಶುಭ ಸೂಚನೆಯಾಗಿದೆ. ಅಂದ್ರೆ ಲಕ್ಷ್ಮೀ ದೇವಿ ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದು ಅರ್ಥ.

Marriage News: ಸಪ್ತಪದಿ ತುಳಿಯಬೇಕೆನ್ನುವಷ್ಟರಲ್ಲಿ ವರನ ಮೊಬೈಲಿಗೆ ಬಂತು ವಧುವಿನ ಆ ಫೋಟೋ! ಮುಂದೇನಾಯ್ತು

Advertisement
Advertisement
Advertisement