ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Vastu Tips For Luck: ಈ ಎರಡು ವಸ್ತುವಿನಿಂದ ನಿಮ್ಮ ಅದೃಷ್ಟ ಬದಲಾಗುತ್ತೆ!

ಶುಕ್ಲಪಕ್ಷದ ಸಮಯದಲ್ಲಿ ಮತ್ತು ಶುಕ್ರವಾರದಂದು ಬೆಳ್ಳಿಯ(Silver) ತುಂಡನ್ನು ನಿಮ್ಮ ಜೊತೆ ಇಟ್ಟುಕೊಂಡರೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸೋದು ಗ್ಯಾರಂಟಿ.

Vastu Tips For Luck: ಈ ಎರಡು ವಸ್ತುವಿನಿಂದ ನಿಮ್ಮ ಅದೃಷ್ಟ ಬದಲಾಗುತ್ತೆ!ಪ್ರತಿಯೊಬ್ಬರು ಮನೆಯಲ್ಲಿ ಶಾಂತಿ(Peace) ನೆಮ್ಮದಿ, ಅದೃಷ್ಟ(Luck) ಸಮೃದ್ಧಿಯಾಗಲಿ ಎಂದು ನಾನಾ ಬಗೆಯ ಪೂಜೆ (Pooja)ಪುನಸ್ಕಾರಗಳನ್ನ ಮಾಡಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು (Negative Energy)ಭಾವನೆಗಳು ಕಡಿಮೆಯಾಗಿ, ಸಕರಾತ್ಮಕತೆ (Postive Imapact)ವೃದ್ದಿಯಗಬೇಕೆಂದು ಬಯಸುವುದಲ್ಲದೆ ಅದೃಷ್ಟ ಹೆಚ್ಚಿಸಲು ವಾಸ್ತು ಪ್ರಕಾರ (Vastu Tips For Luck)ಕೆಲ ಸಲಹೆಗಳನ್ನು ಕೇಳುವುದುಂಟು. ಮನೆಯಲ್ಲಿ ವಾಸ್ತು ಗಿಡ, ತುಳಸಿ,ಮನಿ ಪ್ಲಾಂಟ್ (money plant) ಹೀಗೆ ವಿಭಿನ್ನ ತಂತ್ರಗಳನ್ನು ಬಳಸುವುದು ವಾಡಿಕೆ.

Advertisement

ಹಗಲಿರುಳು ದುಡಿದರೂ ಕೈಯಲ್ಲಿ ದುಡ್ಡೇ ಉಳಿಯಲ್ಲ. ಇದರ ನಡುವೆ ತಲೆ ಚಿಟ್ಟು ಹಿಡಿಸುವಷ್ಟು ಕಷ್ಟ ಕಾರ್ಪಣ್ಯಗಳು, ಹಣಕಾಸಿನ ಸಮಸ್ಯೆಗಳು, ವೈವಾಹಿಕ ಜೀವನದಲ್ಲಿ ಮುನಿಸು ಹೀಗೆ ನಾನಾ ಸಮಸ್ಯೆಗಳು ಬೆನ್ನು ಬಿಡದ ಬೇತಾಳದಂತೆ ನಿಮ್ಮನ್ನು ಕೂಡ ಕಾಡುತ್ತಿದೆಯೇ? ಅದಕ್ಕಾಗಿ ಪಂಡಿತರ ವಾಸ್ತು ತಜ್ಞರ ಸಲಹೆ ಕೂಡ ಪಡೆದು ಪ್ರಯೋಜನವಾಗಿಲ್ಲ ಎನ್ನುತ್ತೀರಾ ಹಾಗಿದ್ರೆ, ನೀವು ಈ ವಿಚಾರ ತಿಳಿದುಕೊಳ್ಳಲೆಬೇಕು. ವಾಸ್ತು ಪ್ರಕಾರ ಅದೃಷ್ಟ ಕೈ ಹಿಡಿಯಲು ಸಲಹೆಗಳನ್ನು(Vastu Tips For Luck ) ಪಾಲಿಸಿದರೆ ಉತ್ತಮ.

ಸಮಸ್ಯೆ ಯಾರಿಗಿಲ್ಲ ಹೇಳಿ! ಪ್ರತಿಯೊಬ್ಬರಿಗೂ ಅವರದ್ದೇ ಆದ ತರಹೇವಾರಿ ಸಮಸ್ಯೆಗಳಿಂದ ಪರಿಹಾರ ಸಿಕ್ಕರೆ ಸಾಕು ಎಂದು ಪರದಾಡುತ್ತಿರುತ್ತಾರೆ. ನಮ್ಮ ಅದೆಷ್ಟೋ ತೊಂದರೆಗಳಿಗೆ ಪರಿಹಾರವೆಂಬ ಕೀಲಿಕೈ ಜ್ಯೋತಿಷ್ಯ ಶಾಸ್ತ್ರ ಹಾಗೂ ನಮ್ಮ ವಾಸ್ತುವಿನಲ್ಲಿದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.ಜ್ಯೋತಿಷ್ಯ ಶಾಸ್ತ್ರ (Astrology) ಹಾಗೂ ವಾಸ್ತು ಸಲಹೆ (Vastu Tips) ಆರ್ಥಿಕ, ಸಾಮಾಜಿಕ ಮತ್ತು ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅನೇಕ ಸರಳ ಮತ್ತು ಪರಿಣಾಮಕಾರಿ ಮಾರ್ಗಗಳನ್ನು ಒಳಗೊಂಡಿದೆ. ಹೀಗಾಗಿ, ನೀವು ನಿಮ್ಮ ಜೀವನ ಶೈಲಿಯಲ್ಲಿ ಕೆಲ ಸರಳ ವಿಧಾನ ಅನುಸರಿಸಿ ಪರಿಹಾರ ನೀವೇ ಕಂಡುಕೊಳ್ಳಿ. ಕೇವಲ ಈ ಎರಡು ಸಾಮಗ್ರಿಗಳು ನಿಮ್ಮ ಮನೆಯ ಅದೃಷ್ಟವೇ ಬದಲಾಯಿಸುತ್ತದೆ.

Advertisement

ನಮ್ಮ ಜೀವನ ಶೈಲಿಯಲ್ಲಿ ಆಹಾರ ಕ್ರಮ ಜೊತೆಗೆ ನಮ್ಮ ಗುಣ ನಡತೆಗಳು ಕೂಡ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಯಾವುದೇ ಶುಭ ಸಮಾರಂಭಗಳಲ್ಲಿ ಹೂವು(Flower), ವೀಳ್ಯದೆಲೆ, ಹಣ್ಣುಗಳು(Fruits) ಬಳಕೆ ಮಾಡೋದು ಸಹಜ. ಇದರ ಜೊತೆಗೆ, ಜ್ಯೋತಿಷ್ಯ ಶಾಸ್ತ್ರದ ಅನುಸಾರ,ಬೆಳ್ಳಿ ಮತ್ತು ಶ್ರೀಗಂಧ ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರ ಸಾಧನವೆಂದು ಪರಿಗಣಿಸಲಾಗುತ್ತದೆ. ಪೂಜೆ (Pooja) ಪುನಸ್ಕಾರ ಮಾಡುವಾಗ ಬೆಳ್ಳಿಯ ದೀಪಗಳನ್ನು ಹಚ್ಚುವುದು ವಾಡಿಕೆ. ಅಷ್ಟೇ ಏಕೆ, ಪೂಜೆ ಹೋಮಗಳಲ್ಲಿ ಶ್ರೀಗಂಧ ಬಳಕೆ ಮಾಡಿ ಸಕರಾತ್ಮಕ ಅಂಶಗಳು ಹೆಚ್ಚಬೇಕು ಎಂದು ಬಯಸುವುದು ಸಹಜ.

ಎಷ್ಟೇ ದುಡಿದರೂ ಕೈಯಲ್ಲಿ ಲಕ್ಷ್ಮಿ ಉಳಿಯುತ್ತಿಲ್ಲ , ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಿಂದ ಪಾರಾಗೋದಾದರು ಹೇಗೆ ಎಂದು ಚಿಂತಿಸುತ್ತಿದ್ದರೆ, ನೀವು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ವಾಸ್ತು ಸಲಹೆ ಪ್ರಕಾರ ಅದೃಷ್ಟ ಕೈ ಹಿಡಿಯುವುದು(Vastu Tips For Luck ) ಗ್ಯಾರಂಟಿ ಶುಕ್ಲಪಕ್ಷದ ಸಮಯದಲ್ಲಿ ಮತ್ತು ಶುಕ್ರವಾರದಂದು ಬೆಳ್ಳಿಯ(Silver) ತುಂಡನ್ನು ನಿಮ್ಮ ಜೊತೆ ಇಟ್ಟುಕೊಂಡರೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸೋದು ಪಕ್ಕಾ!! ನಿಮಗೆ ಬೆಳ್ಳಿಯ ತುಂಡನ್ನು ಇಟ್ಟುಕೊಳ್ಳಲು ಕಷ್ಟ ಎಂದೆನಿಸಿದರೆ,ನಿಮ್ಮ ಬೆರಳುಗಳಿಗೆ ಬೆಳ್ಳಿಯ ಉಂಗುರ(Silver Ring) ಧರಿಸಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕೆಲವರಿಗೆ ತಮ್ಮ ಜ್ಯೋತಿಷ್ಯ ಗ್ರಹ ಗತಿ ಅನುಸಾರ ಬೆಳ್ಳಿ, ಹವಳ ಹೀಗೆ ಕೆಲ ಆಭರಣಗಳು ಸಕಾರಾತ್ಮಕ ಇಲ್ಲವೇ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಕೂಡ ಇದ್ದು, ಹೀಗಾಗಿ, ನಿಮ್ಮ ಜನುಮ ನಕ್ಷತ್ರ ಹಾಗೂ ನಿಮಗೆ ಹೊಂದಾಣಿಕೆ ಆಗುವ ಆಭರಣಗಳ ಬಳಕೆ ಮಾಡೋದು ಉತ್ತಮ. ಹಾಗೆಯೇ ಶುಕ್ರವಾರದಂದು ಬೆಳ್ಳಿಯ ಪಾತ್ರೆಯಲ್ಲಿ ಕುಂಕುಮ ಹಾಕಿ, ಅದನ್ನು ನೀವು ಹಚ್ಚಿಕೊಂಡರೆ ಜೀವನದಲ್ಲಿ ಸುಖ, ಸಂಪತ್ತು, ಸೌಭಾಗ್ಯ ವೃದ್ದಿಯಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನ ಕೃಪೆ ಪಡೆಯಲು ಬಯಸುವವರು ಕೆಂಪು ಚಂದನವನ್ನು ಬಳಕೆ ಮಾಡಬಹುದು. ಅರಿಶಿನ ಶ್ರೀಗಂಧ ಶುಕ್ರನ ಕೃಪೆ ಪಡೆಯಲು ನೆರವಾಗುತ್ತದೆ. ಮಂಗಳನ ಕೃಪೆ ಪಡೆಯಲು ಬಿಳಿಚಂದನವನ್ನು ಬಳಕೆ ಮಾಡಬೇಕು. ಇವುಗಳ ಬಳಕೆಯಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

Advertisement
Advertisement
Next Article