Uttarpradesh: ಸಹಪಾಠಿಯ ಜೊತೆ ಮಾತಾಡಿದ ವಿದ್ಯಾರ್ಥಿ; ಕೋಪ ನೆತ್ತಿಗೇರಿಸಿಕೊಂಡ ಶಿಕ್ಷಕನಿಂದ ಕಪಾಳಮೋಕ್ಷ, ವಿದ್ಯಾರ್ಥಿಗೆ ಶ್ರವಣ ದೋಷ
Uttarpradesh: ಮಕ್ಕಳೊಂದಿಗಿನ ಒಡನಾಟವನ್ನು ಶಿಕ್ಷಕರು ಉತ್ತಮ ರೀತಿಯಲ್ಲಿ ಇರಿಸಿಕೊಳ್ಳುವುದು ಶಿಕ್ಷಕರ ಕರ್ತವ್ಯ. ಆದರೆ ಇಲ್ಲೊಬ್ಬ ಶಿಕ್ಷಕ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಜೊತೆಗೆ ಕ್ರೂರವಾಗಿ ವರ್ತಿಸಿದ್ದು, ಆತನ ಹೊಡೆತಕ್ಕೆ (Teacher Slaps) ವಿದ್ಯಾರ್ಥಿ ಕಿವಿ, ಮತ್ತು ಕಣ್ಣಿನ ದೃಷ್ಟಿ ಕಳೆದುಕೊಂಡ ಘಟನೆ ನಡೆದಿದೆ. ಉತ್ತರ ಪ್ರದೇಶದ ಉಭೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೋಷಕರು ಶಿಕ್ಷಕನ ವಿರುದ್ದ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Rave Party: ಬೆಂಗಳೂರಿನಲ್ಲಿ ರೇವ್‌ಪಾರ್ಟಿ ಮೇಲೆ ಸಿಸಿಬಿ ರೇಡ್; ಮಾದಕ ನಶೆಯಲ್ಲಿ ತೆಲುಗು ನಟ, ನಟಿಯರು?
ಹೌದು, ಗಣಿತ ಶಿಕ್ಷಕ ರಾಘವೇಂದ್ರ ಅವರು ತರಗತಿಯಲ್ಲಿ ಸಹಪಾಠಿಯ ಜೊತೆ ಮಾತನಾಡಿದ ಅನ್ನೋ ಕಾರಣಕ್ಕೆ ಶಿಕ್ಷಕನ ಕೋಪ ನೆತ್ತಿಗೇರಿ, ವಿದ್ಯಾರ್ಥಿ ಬಳಿ ಬಂದು ಆತನ ಕಪಾಳಕ್ಕೆ ಭಾರಿಸಿದ್ದಾನೆ. ಶಿಕ್ಷಕ ಬಲವಾಗಿ ಹೊಡೆದ ಪರಿಣಾಮ ಇದೀಗ ಬಾಲಕನ ಕಿವಿ ಕೇಳಿಸುತ್ತಿಲ್ಲ. ಬಾಲಕನಿಗೆ ಭಾಗಶಃ ಶ್ರವಣ ದೋಷ ಕಾಣಿಸಿಕೊಂಡಿದೆ.
ಇದನ್ನೂ ಓದಿ: Mangaluru Job News: ಶಿಷ್ಯ ವೇತನ ಸಹಿತ ವೃತ್ತಿ ತರಬೇತಿ ಕಾರ್ಯಕ್ರಮ: ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ತರಗತಿಯಲ್ಲಿ ಶಿಕ್ಷಕ ಪಾಠ ಮಾಡುತ್ತಿರುವ ವೇಳೆ ಸಹಪಾಠಿ ಜೊತೆ ಮಾತನಾಡಿದ್ದಾನೆ ಅನ್ನೋ ಕಾರಣಕ್ಕೆ ಹೊಡದಿದ್ದಾರೆ ಎಂದು ವಿದ್ಯಾರ್ಥಿ ತಂದೆ ಪ್ರವೀಣ್ ಕುಮಾರ್ ಮಧುಕರ್ ಆರೋಪಿಸಿದ್ದಾರೆ. ಈ ಕುರಿತು ಉಭೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ಬಳಿಕ ವಿದ್ಯಾರ್ತಿ ತೀವ್ರ ತಲೆನೋವಿನಿಂದ ಬಳಲಿದ್ದಾನೆ. ಆದರೂ ದಿನವಿಡೀ ಅದೇ ನೋವಿನಲ್ಲಿ ತರಗತಿಯಲ್ಲಿ ಕುಳಿತು ಇತರ ಶಿಕ್ಷಕರ ಪಾಠ ಕೇಳಿದ್ದಾನೆ. ಸಂಜೆ ಹೊತ್ತಿಗೆ ವಿದ್ಯಾರ್ಥಿ ಕಿವಿ ಭಾಗದಲ್ಲಿ ಊತ ಕಾಣಿಸಿಕೊಂಡಿದೆ.
ಇದೀಗ ಶಿಕ್ಷಕನ ಹೊಡೆತದಿಂದ ಬಾಲಕ ಬಲ ಕಿವಿ ಸಂಪೂರ್ಣ ಕೇಳಿಸದಂತಾಗಿದೆ. ಇನ್ನು ಎಡ ಕಿವಿಯ ನರಗಳಿಗೂ ಗಾಯವಾಗಿದೆ. ಹೀಗಾಗಿ ಭಾಗಶಃ ಕಿವಿ ಕೇಳಿಸದಂತಾಗಿದೆ. ಸದ್ಯ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ. ಆದರೆ ಶ್ರವಣ ದೋಷ ಸರಿಪಡಿಸಲು ಅಸಾಧ್ಯ ಎಂದು ವೈದ್ಯರು ಹೇಳಿದ್ದಾರೆ. ವಿದ್ಯಾರ್ಥಿಯ ತಂದೆ ದೂರಿನ ಅನ್ವಯ ಪೊಲೀಸರು ಸೆಕ್ಷನ್ 323 ಹಾಗೂ 325ರ ಅಡಿ ದೂರು ದಾಖಲಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.