ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Uttarpradesh: 17ರ ಹುಡುಗಿಗೆ ವಿವಾಹಿತನೊಂದಿಗೆ ಸಂಬಂಧ - ವಿಷ್ಯ ಗೊತ್ತಾಗುತ್ತಿದ್ದಂತೆ ಮಗಳನ್ನು ಕೊಂದೇ ಬಿಟ್ಟ ಅಪ್ಪ-ಅಮ್ಮ

02:41 PM Feb 27, 2024 IST | ಹೊಸ ಕನ್ನಡ
UpdateAt: 03:16 PM Feb 27, 2024 IST
Advertisement

Uttar pradesh: ಅಕ್ರಮ ಸಂಬಂಧಗಳ ಕುರಿತು ದಿನಬೆಳಗಾದರೆ ಸಾಕು ಒಂದಲ್ಲ ಒಂದು ವಿಚಾರಗಳು ಕೇಳಿಬರುತ್ತವೆ. ಅಂತೆಯೇ ಇದೀಗ 17ರ ಹುಡುಗಿಯೊಬ್ಬಳು ವಿವಾಹಿತನೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ವಿಚಾರ ಗೊತ್ತಾದ ಆಕೆಯನ್ನು ಪೋಷಕರು ಕೊಂದ ಪ್ರಕರಣ ಉತ್ತರಪ್ರದೇಶ(Uttar pradesh) ಬೆಳಕಿಗೆ ಬಂದಿದೆ.

Advertisement

ಇದನ್ನೂ ಓದಿ: Umesh Reddy: ನಟೋರಿಯಸ್‌ ಕ್ರಿಮಿನಲ್‌, ಅತ್ಯಾಚಾರ ಆರೋಪಿ ಉಮೇಶ್‌ ರೆಡ್ಡಿಯಿಂದ ಪೆರೋಲ್‌ಗೆ ಅಪೀಲ್‌; ನಿರಾಕರಣೆ ಮಾಡಿದ ಹೈಕೋರ್ಟ್‌

ಹೌದು, ಕಳೆದ ವಾರ ಅಪ್ರಾಪ್ತೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಬಾಲಕಿಯು ವಿವಾಹಿತನೊಂದಿಗೆ ಸಂಬಂಧ ಹೊಂದಿದ್ದು, ಈ ವಿಚಾರ ಗೊತ್ತಾದ ಪೋಷಕರೇ ಮರ್ಯಾದೆಗೆ ಅಂಜಿ ಮಗಳ ಹತ್ಯೆ ಮಾಡಿರುವುದು ಬಯಲಾಗಿದೆ.

Advertisement

17 ವರ್ಷದ ಶಬಾನಾ ಹತ್ಯೆಯಾದ ಅಪ್ರಾಪ್ತೆ ಎಂಬುದು ತಿಳಿದುಬಂದಿದೆ. ಈ ಪ್ರಕರಣವನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿ ಹಾಕಲು ಪೋಷಕರು ಹತ್ಯೆಯ ನಂತರ ಶಬಾನಾ ಶವವನ್ನು ಉತ್ತರಪ್ರದೇಶದ ರಾಮ್‌ಪುರ ಜಿಲ್ಲೆಯಲ್ಲಿ ಹೂತು ಹಾಕಲು ಮುಂದಾಗಿದ್ದಾರೆ. ಆದರೆ ಸ್ಥಳೀಯ ಪೊಲೀಸ್ ಮಾಹಿತಿದಾರರೊಬ್ಬರು ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಅಂದಹಾಗೆ ಈ ಶಬಾನಾ ತನ್ನ ಮನೆ ಸಮೀಪದಲ್ಲೇ ವಾಸವಿದ್ದ ವಿವಾಹಿತ ವ್ಯಕ್ತಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಆದರೆ ಇದಕ್ಕೆ ಪೋಷಕರ ಸಮ್ಮತಿ ಇರಲಿಲ್ಲ, ಈ ಹಿನ್ನೆಲೆಯಲ್ಲಿ ಪೋಷಕರೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಶಬಾನಾ ತಂದೆ 50 ವರ್ಷದ ಮೊಹಮ್ಮದ್ ಶಫಿ, ಹಾಗೂ ತಾಯಿ 45 ವರ್ಷದ ಕಾಟೂನ್ ಜಹಾನ್ ಎಂಬುವವರನ್ನು ಬಂಧಿಸಿದ್ದಾರೆ.

Related News

Advertisement
Advertisement