For the best experience, open
https://m.hosakannada.com
on your mobile browser.
Advertisement

Muslim Girls Ramp Walk: ಕಾಲೇಜಲ್ಲಿ ಬುರ್ಖಾ ಹಾಕಿ ಕ್ಯಾಟ್ ವಾಕ್ ಮಾಡಿದ ಮುಸ್ಲಿಂ ಹುಡುಗಿಯರು - ವಿಚಾರ ತಿಳಿದು ಮುಸ್ಲಿಂ ಸಂಘಟನೆ ಏನು ಮಾಡ್ತು ಗೊತ್ತಾ?!

11:26 AM Nov 29, 2023 IST | ಅಶ್ವಿನಿ ಹೆಬ್ಬಾರ್
UpdateAt: 11:26 AM Nov 29, 2023 IST
muslim girls ramp walk  ಕಾಲೇಜಲ್ಲಿ ಬುರ್ಖಾ ಹಾಕಿ ಕ್ಯಾಟ್ ವಾಕ್ ಮಾಡಿದ ಮುಸ್ಲಿಂ ಹುಡುಗಿಯರು   ವಿಚಾರ ತಿಳಿದು ಮುಸ್ಲಿಂ ಸಂಘಟನೆ ಏನು ಮಾಡ್ತು ಗೊತ್ತಾ
Image source: Asianet Suvarna
Advertisement

Muslim girls Ramp Walk: ಉತ್ತರ ಪ್ರದೇಶದ ಮುಜಾಫರ್‌ನಗರದ ಶ್ರೀರಾಮ್‌ ಗ್ರೂಪ್‌ ಆಫ್‌ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ಬುರ್ಖಾ ರ್ಯಾಂಪ್ ವಾಕ್(Muslim girls  Ramp Walk) ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಇಸ್ಲಾಂ ಸಂಘಟನೆಯಾದ ಜಮಿಯತ್‌ ಉಲಾಮಾ ತೀವ್ರ ಅಸಮಾಧಾನ ಹೊರಹಾಕಿದೆ.

Advertisement

ಹಿಜಾಬ್‌ ಮತ್ತು ಬುರ್ಖಾ ಕೂಡ ಫ್ಯಾನ್ಸಿ ಬಟ್ಟೆಯಾಗಿದ್ದು, ಮುಸ್ಲಿಂ ಮಹಿಳೆಯರು ಬುರ್ಖಾದೊಂದಿಗೆ ಫ್ಯಾಷನ್‌ ಶೋನಲ್ಲಿ (Fashion Show)ಭಾಗವಹಿಸಬಹುದು ಎಂದು ತೋರಿಸುವ ನಿಟ್ಟಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು(Muslim Students)ಕಾಲೇಜಿನ ವಾರ್ಷಿಕ ಫ್ಯಾಷನ್‌ ಸಮಾರಂಭ ಭಾಗವಾಗಿ ಬುರ್ಖಾ ಫ್ಯಾಷನ್‌ ಶೋ (Burqa Fashion Show)ಆಯೋಜನೆ ಮಾಡಲಾಗಿತ್ತು. ‘ಬೇಟಿ ಬಚಾವೊ ಬೇಟಿ ಪಢಾವೋ’ ಎಂಬ ಥೀಮ್‌ನಲ್ಲಿ ಬುರ್ಖಾ ಧರಿಸಿಕೊಂಡು 13 ವಿದ್ಯಾರ್ಥಿನಿಯರು ಕ್ಯಾಟ್‌ವಾಕ್‌ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಈ ಕುರಿತು ಉಲಾಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಮೀಯತ್ ಉಲಮಾ ಜಿಲ್ಲಾ ಸಂಚಾಲಕ ಮೌಲಾನಾ ಮುಕರ್ರಂ ಕಾಜ್ಮಿ ತೀವ್ರ ಆಕ್ಷೇಪ ಹೊರಹಾಕಿದ್ದಾರೆ.ಬುರ್ಖಾದಲ್ಲಿ ಕ್ಯಾಟ್‌ವಾಕ್ ಮಾಡುವುದು ಮುಸ್ಲಿಮರ ಭಾವನೆಗಳನ್ನು ಕೆರಳಿಸಿ ವಿರೋಧ ವ್ಯಕ್ತಪಡಿಸುವಂತೆ ತೋರುತ್ತದೆ. ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಸರಿಯಲ್ಲ. ಅಷ್ಟೇ ಅಲ್ಲದೆ, ಬುರ್ಖಾ ಫ್ಯಾಷನ್ ಶೋನ ಭಾಗವಲ್ಲ’ ಎಂದು ಕಿಡಿ ಕಾರಿದ್ದಾರೆ. ಯಾವುದೇ ಫ್ಯಾಷನ್ ಶೋನಲ್ಲಿ ಬುರ್ಖಾ ಧರಿಸಲು ಅವಕಾಶವಿಲ್ಲ. ಈ ಕಾರ್ಯಕ್ರಮವನ್ನು ಆಯೋಜಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

Advertisement

ಇದನ್ನೂ ಓದಿ: ಗುಂಡು ಹಾರಿಸಲು ಬಂದವರನ್ನು ಬರೀ ಪೊರಕೆ ಹಿಡಿದೇ ಓಡಿಸಿಬಿಟ್ಲು ಕಂಡ್ರಿ ಈ ಘಾಟಿ ಮುದುಕಿ - ವೈರಲ್ ಆಯ್ತು 'ಪೊರಕೆ ಓಬವ್ವನ' ಅಚ್ಚರಿ ವಿಡಿಯೋ!!

Advertisement
Advertisement
Advertisement