ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

UT Khader: ಕೋಲದಲ್ಲಿ ಭಾಗಿಯಾದ ಖಾದರ್‌, ಮುಸ್ಲಿಮರ ಆಕ್ಷೇಪ; ಸ್ಪೀಕರ್‌ ಉತ್ತರ ಇಲ್ಲಿದೆ

10:23 PM Feb 05, 2024 IST | ಹೊಸ ಕನ್ನಡ
UpdateAt: 10:26 PM Feb 05, 2024 IST
Advertisement

UT Khader in Harake Kola: ಯು ಟಿ ಖಾದರ್‌ ಅವರು ಪಣೋಲಿ ಬೈಲ್‌ನಲ್ಲಿ ಹರಕೆಯ ಕೋಲ ನೆರವೇರಿಸಿ ಕೊಟ್ಟಿದ್ದು, ಈ ಕೋಲದಲ್ಲಿ ಅವರು ಕಾರ್ಣಿಕ ದೈವಗಳಾದ ಕಲ್ಲುರ್ಟಿ, ಕಲ್ಕೂಡ ದೈವಗಳ ಆಶೀರ್ವಾದ ಪಡೆದರು. ಖಾದರೆ ಅವರ ನಡೆ ಎಲ್ಲರ ಪ್ರೀತಿಗೆ ಕಾರಣವಾದರೂ, ಕೆಲವು ಆಕ್ಷೇಪ ಕೂಡಾ ಮಾಡಿದರು. ಮುಸ್ಲಿಂ ಮುಖಂಡ ಸಾಲೆತ್ತೂರು ಫೈಜಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿ ತಮ್ಮ ಆಕ್ರೋಶ ಹೊರ ಹಾಕಿದ್ದು, ಖಾದರ್‌ ಒಬ್ಬ ರಾಜಕಾರಣಿಯಾಗಿ ಮಾತ್ರ ನೋಡಿ ಎಂದು ಹೇಳಿದ್ದು, ಅವರು ಖಾದರ್‌ ಕೊರಗಜ್ಜನಿಗೋ, ಕಲ್ಲುರ್ಟಿ, ಪಂಜುರ್ಲಿಗೋ ಆರಾಧಿಸಲಿ, ಪ್ರಸಾದ ತೆಗೆದುಕೊಂಡು ತಲೆಗೆ ಮೆತ್ತಿಕೊಂಡು ನರಕಕ್ಕೆ ಹೋಗಲಿ ಎಂದು ಹೇಳಿಕೊಂಡಿದ್ದರು.

Advertisement

ಇದನ್ನೂ ಓದಿ: ದೈವಗಳ ಹರಕೆ ಕೋಲ ನೆರವೇರಿಸಿ ಯು ಟಿ ಖಾದರ್‌, ಮುಸ್ಲಿಂ ಧಾರ್ಮಿಕ ಮುಖಂಡನೋರ್ವರ ಆಕ್ರೋಶದ ಪೋಸ್ಟ್‌!!!

ಇದಕ್ಕೆ ಉತ್ತರವಾಗಿ ಸ್ಪೀಕರ್‌ ಯು ಟಿ ಖಾದರ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ಗೀಚುವವರನ್ನು ಇತಿಹಾಸ ನೆನಪಿಟ್ಟುಕೊಳ್ಳಲ್ಲ, ಪ್ರಶ್ನೆ ಕೇಳುವವರನ್ನು ಇತಿಹಾಸ ನೆನಪಿಗೆ ಇಟ್ಟುಕೊಳ್ಳಲ್ಲ, ಯಾರು ಕೆಲಸ ಮಾಡ್ತಾರೆ, ಯಾರು ಉತ್ತರ ಕೊಡ್ತಾರೆ ಅವರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ ಎಂಬ ಮಾತನ್ನು ಹೇಳಿದ್ದಾರೆ. ನಮ್ಮ ಪ್ರಾಚೀನ ಆಚರಣೆ ಅನುಗುಣವಾಗಿ ಅವರು ಹರಕೆ ಇಟ್ಟುಕೊಂಡಿದ್ದರು. ಅದಕ್ಕೆ ಹೋಗುವುದು, ಗೌರವ ಕೊಡುವುದು ನಮ್ಮ ಸಂಸ್ಕೃತಿ. ಹಾಗಾಗಿ ನಾನು ಹೋಗಿದ್ದೆ. ಯಾರೋ ಗೀಚಿದರೆ ನೂರು ಜನ ಒಪ್ಪಿಕೊಳ್ಳಲ್ಲ. ಅದಕ್ಕೆ ನಾವು ಮಹತ್ವ ಕೊಡಬಾರದುʼ ಎಂದು ಹೇಳಿದರು.

Advertisement

Advertisement
Advertisement