UPI Rules Change: ಯುಪಿಐ ಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಹೊಸ ನಿಯಮಗಳ ಬಗ್ಗೆ ಈಗಲೇ ತಿಳಿದುಕೊಳ್ಳಿ!!
UPI Rules Change: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇಂದು ಎಲ್ಲಾ ವಹಿವಾಟುಗಳು ಮೊಬೈಲ್ ಎಂಬ ಮಾಯಾವಿ ಮೂಲಕ ಕ್ಷಣ ಮಾತ್ರದಲ್ಲಿ ನಡೆಯುತ್ತಿದೆ. ಭಾರತದಲ್ಲಿ ಜಾರಿಯಲ್ಲಿರುವ ಹಲವು ಪಾವತಿ ವ್ಯವಸ್ಥೆಗಳಲ್ಲಿ ಯುಪಿಐ (UPI- Unified Payment Interface) ಹೆಚ್ಚು ಜನಪ್ರಿಯತೆ ಪಡೆದಿದೆ. ಈ ನಡುವೆ ಜನವರಿ 2024ರಲ್ಲಿ ಯುಪಿಐ ಪಾವತಿ ವಹಿವಾಟು ಮಿತಿ ಕುರಿತು (Unified Payment Interface, New Updates)ಏನೆಲ್ಲ ಬದಲಾವಣೆಯಾಗಿದೆ ಗೊತ್ತಾ??
ದೇಶಾದ್ಯಂತ ಹಲವು ಎಟಿಎಂಗಳಲ್ಲಿ ಕ್ಯುಅರ್ ಕೋಡ್ ಸ್ಕ್ಯಾನ್ ಮಾಡಿ ಹಣವನ್ನು ಹಿಂಪಡೆಯುವ ಸೌಲಭ್ಯ ಜಾರಿಗೆ ಬರಲಿದೆ. ಹೀಗಾಗಿ, ಎಟಿಎಂನಲ್ಲಿ ಹಣ ಪಡೆಯಲು ಕಾರ್ಡ್ ಬಳಸಬೇಕಾದ ಅವಶ್ಯಕತೆ ಇರುವುದಿಲ್ಲ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಸಂಸ್ಥೆ ಒಂದು ದಿನದಲ್ಲಿ ನಡೆಸಬಹುದಾದ ಯುಪಿಐ ವಹಿವಾಟಿಗೆ ಇರುವ ಮಿತಿಯನ್ನು 1 ಲಕ್ಷ ರೂಗೆ ಹೆಚ್ಚಳ ಮಾಡಿದ್ದು, ಹೀಗಾಗಿ, ಯುಪಿಐ ಮೂಲಕ ದಿನಕ್ಕೆ ಒಂದು ಲಕ್ಷ ರೂವರೆಗೆ ವಹಿವಾಟು ನಡೆಸಲು ಅವಕಾಶವಿದೆ. ಅದೇ ರೀತಿ, ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಯುಪಿಐ ವಹಿವಾಟು ಮಿತಿಯನ್ನು ಒಂದು ಲಕ್ಷದಿಂದ 5 ಲಕ್ಷ ರೂಗೆ ಹೆಚ್ಚಳ ಮಾಡಲಾಗಿದೆ.
ಆನ್ಲೈನ್ ವ್ಯಾಲಟ್, ಪ್ರೀಪೇಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಗಳ ಮೂಲಕ ನಡೆಸಲಾದ ವಹಿವಾಟಿಗೆ, ಹಾಗು ಎರಡು ಸಾವಿರ ರೂ ಮೀರುವ ನಿರ್ದಿಷ್ಟ ವರ್ತಕ ಯುಪಿಐ ವಹಿವಾಟಿಗೆ ಶೇ. 1.1ರಷ್ಟು ಇಂಟರ್ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಯುಪಿಐ ಐಡಿ ಇಲ್ಲವೇ ತಪ್ಪಾದ ನಂಬರ್ ಗೆ ಹಣ ಕಳುಹಿಸಿ ಇತ್ತೀಚೆಗೆ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಇದನ್ನು ತಪ್ಪಿಸುವ ಸಲುವಾಗಿ ಯುಪಿಐ ವಹಿವಾಟಿಗೆ ನಾಲ್ಕು ಗಂಟೆ ಕಾಲಮಿತಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಇದು ಮೊದಲ ಬಾರಿಗೆ ಒಂದು ಯುಪಿಐ ಐಡಿ ಜೊತೆ ಮಾಡಲಾಗುವ 2,000 ರೂಗೂ ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಅನ್ವಯವಾಗಲಿದ್ದು, ನೀವು ಕಳುಹಿಸಿದ ಹಣವನ್ನು ಹಿಂಪಡೆಯಲು 4 ಗಂಟೆಯವರೆಗೆ ಕಾಲಾವಕಾಶವಿರಲಿದೆ. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಳಸದೇ ಇರುವ ಯುಪಿಐ ಐಡಿ ಮತ್ತು ನಂಬರ್ಗಳನ್ನು ಡಿಸೇಬಲ್ ಮಾಡಲಾಗುತ್ತದೆ. ಪೇಟಿಎಂ, ಗೂಗಲ್ ಪೇ, ಫೋನ್ಪೆ ಹಾಗೂ ಪೇಮೆಂಟ್ ಆ್ಯಪ್ಗಳು ಮತ್ತು ಬ್ಯಾಂಕುಗಳಿಗೆ ಎನ್ಪಿಸಿಐನಿಂದ ನಿರ್ದೇಶನ ಸಿಕ್ಕಿದ್ದು, ಈ ಪ್ರಕ್ರಿಯೆ ಇಂದಿನಿಂದಲೆ ಚಾಲನೆಗೆ ಬರಲಿದೆ.