For the best experience, open
https://m.hosakannada.com
on your mobile browser.
Advertisement

UP: ಮೊಬೈಲ್‌ನಲ್ಲಿ ಕಾರ್ಟೂನ್‌ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ; ಸ್ಥಳದಲ್ಲೇ ಸಾವು!!

03:11 PM Jan 22, 2024 IST | ಹೊಸ ಕನ್ನಡ
UpdateAt: 03:11 PM Jan 22, 2024 IST
up  ಮೊಬೈಲ್‌ನಲ್ಲಿ ಕಾರ್ಟೂನ್‌ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ  ಸ್ಥಳದಲ್ಲೇ ಸಾವು
Advertisement

Heart Attack: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಕೊತ್ವಾಲಿಯದ ಹತೈಖೇಡಾದಲ್ಲಿ ಮೊಬೈಲ್‌ ನಲ್ಲಿ ಕಾರ್ಟೂನ್‌ ನೋಡುತ್ತಿದ್ದ 5 ವರ್ಷದ ಮಗುವೊಂದು ಹೃದಯಾಘಾತದಿಂದ (Heartattack)ಮೃತಪಟ್ಟಿರುವ(Death)ಆಘಾತಕಾರಿ ಘಟನೆ ನಡೆದಿದೆ.

Advertisement

ಮಗು ಕಾಮಿನಿ ಬೆಡ್‌ ನಲ್ಲಿ ತನ್ನ ಅಮ್ಮನ ಪಕ್ಕದಲ್ಲಿ ಮಲಗಿಕೊಂಡು ಮೊಬೈಲ್‌ ನಲ್ಲಿ ಕಾರ್ಟೂನ್‌ ನೋಡುತ್ತಿದ್ದಾಗ ಇದ್ದಕ್ಕಿದ್ದಂತೆ ಮಗುವಿನ ಕೈಯಿಂದ ಫೋನ್ ಕೆಳಕ್ಕೆ ಬಿದ್ದಿದೆ. ಆ ಬಳಿಕ ಮಗು ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ. ಇದರಿಂದ ಆತಂಕ ಗೊಂಡ ತಾಯಿ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಮಗುವನ್ನು ಪರೀಕ್ಷಿಸಿ ಮಗು ಈಗಾಗಲೇ ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ. ಮಗು ಹೃದಯಾಘಾತದಿಂದ ಸಾವನ್ನಪ್ಪಿರಬಹುದು ವೈದ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಸದ್ಯ, ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದರೆ ಅಸಲಿ ಕಾರಣವೇನು ಎಂಬುದು ಗೊತ್ತಾಗಲಿದೆ.

Advertisement
Advertisement
Advertisement
Advertisement