ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Union Budget: ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆ ಯಾವಾಗ? ಬಜೆಟ್ ನಲ್ಲಿ ಏನೇನಿದೆ?!

Union Budget: ಮೋದಿ ಸರ್ಕಾರ ಸತತವಾಗಿ ಮೂರನೇ ಬಾರಿಗೆ ತಲೆಯೆತ್ತಿದೆ. ಈಗಾಗಲೇ ಜನರಿಗೆ ಮೋದಿ ಸರ್ಕಾರದ ಬಜೆಟ್ ಬಗೆಗಿನ ನಿರೀಕ್ಷೆ ಬಹಳಷ್ಟು ದೊಡ್ಡದಾಗಿದೆ.
02:38 PM Jul 03, 2024 IST | ಕಾವ್ಯ ವಾಣಿ
UpdateAt: 02:38 PM Jul 03, 2024 IST
Advertisement

Union Budget: ಮೋದಿ ಸರ್ಕಾರ ಸತತವಾಗಿ ಮೂರನೇ ಬಾರಿಗೆ ತಲೆಯೆತ್ತಿದೆ. ಈಗಾಗಲೇ ಜನರಿಗೆ ಮೋದಿ ಸರ್ಕಾರದ ಬಜೆಟ್ ಬಗೆಗಿನ ನಿರೀಕ್ಷೆ ಬಹಳಷ್ಟು ದೊಡ್ಡದಾಗಿದೆ. ಸದ್ಯ ಹೊಸ ಸರ್ಕಾರದ  ಮೊದಲ ಬಜೆಟ್ ಜುಲೈ 24ರಂದು ಮಂಡನೆ ಆಗಬಹುದು ಎಂದು ವರದಿಗಳು ಹೇಳುತ್ತಿವೆ. ಅದಕ್ಕೂ ಮೊದಲು ಜುಲೈ 22ಕ್ಕೆ ಮುಂಗಾರು ಅಧಿವೇಶನ ಶುರುವಾಗಲಿದ್ದು, ಜುಲೈ 23ಕ್ಕೆ ಆರ್ಥಿಕ ಸಮೀಕ್ಷಾ ವರದಿ ಪ್ರಸ್ತುತಪಡಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ.

Advertisement

Pendrive Movie: ‘ಪೆನ್​ಡ್ರೈವ್’ ಚಿತ್ರದಲ್ಲಿ ತನಿಷಾ ಕುಪ್ಪಂಡ! ಸಿನಿಮಾದಲ್ಲೂ ವರ್ತೂರ್ ಸಂತೋಷ್ ಜೊತೆಗಿರ್ತಾರ?

Advertisement

ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಬಜೆಟ್(Union Budget) ತಯಾರಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಜುಲೈ ಕೊನೆಯ ವಾರದಲ್ಲಿ ಬಜೆಟ್ ಮಂಡನೆ ಆಗಬಹುದು. ಆದರೆ, ಕೆಲವು ವರದಿ ಪ್ರಕಾರ ಜುಲೈ 24ರಂದು ಸಂಸತ್ತಿನಲ್ಲಿ ಪೂರ್ಣ ಪ್ರಮಾಣದ ಮುಂಗಡ ಪತ್ರ (Union Budget 2024) ಮಂಡನೆ ಆಗಬಹುದು ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸದ್ಯ 18ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಜುಲೈ 2 ಕ್ಕೆ ಮುಕ್ತಾಯಗೊಂಡಿದೆ. ಕ್ರಮ ಪ್ರಕಾರ ಎರಡನೇ ಸೆಷನ್ ಅನ್ನು 15 ದಿನಗಳ ಅಂತರದಲ್ಲಿ ಮಾಡಲಾಗುತ್ತದೆ. ಅದರಂತೆ ಜುಲೈ 18ಕ್ಕೆ ಮುಂಗಾರು ಅಧಿವೇಶನ ಶುರುವಾಗಬೇಕಾಗುತ್ತದೆ. ಅದೇ ರೀತಿ ಆದರೆ ಜುಲೈ 20, ಶನಿವಾರ ಬಜೆಟ್ ಮಂಡನೆ ಮಾಡಬೇಕಾಗುತ್ತದೆ. ಆದರೆ, ಈ ಬಾರಿ ಅಧಿವೇಶನ ತುಸು ವಿಳಂಬವಾಗಿ ಶುರುವಾಗಬಹುದು. ಜುಲೈ 22ಕ್ಕೆ ಅಧಿವೇಶನ ಆರಂಭವಾಗಿ ಜುಲೈ 24, ಬುಧವಾರದಂದು ಬಜೆಟ್ ಮಂಡನೆ ಆಗಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ಎರಡು ದಿನಾಂಕಗಳ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ಶೀಘ್ರದಲ್ಲೇ ಬಜೆಟ್ ಮಂಡಿಸುವ ದಿನಾಂಕ ಪ್ರಕಟಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಇನ್ನು ಸಂಸತ್ತಿನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಬಾರಿಯ ಬಜೆಟ್​ನಲ್ಲಿ ಬಡವರು, ಯುವಜನರು, ಮಹಿಳೆಯರು, ರೈತರಿಗೆ ಆದ್ಯತೆ ಸಿಗಲಿದೆ ಎಂದಿದ್ದಾರೆ. ಜೊತೆಗೆ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳು ಆಗಲಿದೆ ಎಂದು ಸೂಚನೆ ನೀಡಿದ್ದರು. ಹಾಗೆಯೇ, ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವು ಐತಿಹಾಸಿಕ ಹೆಜ್ಜೆಗಳನ್ನು ಬಜೆಟ್​ನಲ್ಲಿ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

Trekking: ಇನ್ಮೇಲೆ ಚಾರಣ ಪ್ರಿಯರಿಗೆ ಹೊಸ ರೂಲ್ಸ್ ಜಾರಿ! ಜುಲೈನಿಂದ ಕರ್ನಾಟಕದ ಎಲ್ಲ ಟ್ರೆಕ್ಕಿಂಗ್ ತಾಣಗಳಿಗೂ ಆನ್​ಲೈನ್ ಬುಕಿಂಗ್ ಕಡ್ಡಾಯ!

Advertisement
Advertisement