ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Union Budget 2024- 25: ಈ ದಿನ ಮಂಡನೆಯಾಗಲಿದೆ 2024ರ ಕೇಂದ್ರ ಬಜೆಟ್ - ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ !!

10:28 AM Dec 16, 2023 IST | ಅಶ್ವಿನಿ ಹೆಬ್ಬಾರ್
UpdateAt: 10:49 AM Dec 16, 2023 IST
Image source Credit: the print.in
Advertisement

Union Budget 2024-25: ಪ್ರತಿ ವರ್ಷ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್‌ ಮಂಡಿಸಲಾಗುತ್ತದೆ. ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman)ಅವರು 2024-25ನೇ ಸಾಲಿನ ಬಜೆಟ್‌ (Union Budget 2024-25)ಮಂಡಿಸಲಿದ್ದು, 2024 ರಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ನಿರ್ಮಲಾ ಸೀತಾರಾಮನ್‌ ಮಧ್ಯಂತರ ಬಜೆಟ್ (interim Budget)ಮಂಡಿಸಲಿದ್ದಾರೆ.

Advertisement

2024-25ನೇ ಸಾಲಿನ ಬಜೆಟ್‌ ಬಗ್ಗೆ ತಿಳಿದಿರಬೇಕಾದ ಅಂಶಗಳು ಹೀಗಿವೆ:
ಹಣಕಾಸು ಮಸೂದೆಯನ್ನು ಪ್ರತಿ ವರ್ಷವೂ ಬಜೆಟ್‌ನ ಭಾಗವಾಗಿ ಮಂಡಿಸಲಾಗುತ್ತದೆ. ಇದರ ಜೊತೆಗೆ ಇದು ತೆರಿಗೆಗಳ ಹೇರಿಕೆ, ರದ್ದತಿ, ಇಳಿತ, ಬದಲಾವಣೆ ಮಾಹಿತಿಯನ್ನು ಒಳಗೊಂಡಿರುತ್ತದೆ. ಬಜೆಟನ್ನು ಮೊದಲು ಲೋಕಸಭೆಯಲ್ಲಿ ಅಂಗೀಕರಿಸಿದ ಬಳಿಕ ರಾಜ್ಯಸಭೆಗೆ ರವಾನಿಸಲಾಗುತ್ತದೆ. ಅಲ್ಲಿ ಬಜೆಟ್‌ ವಿಚಾರವಾಗಿ ಚರ್ಚಿಸಿ ರಾಜ್ಯಸಭೆಯಲ್ಲಿ ಹಣಕಾಸು ಮಸೂದೆಯನ್ನು ಅಂಗೀಕರಿಸಿದ ಬಳಿಕ, ಮಂಡನೆಗೆ ಕಾನೂನು ಬೆಂಬಲ ಸಿಗುತ್ತದೆ.

ಇದನ್ನು ಓದಿ: KPSC Exams: ಇಂದಿನಿಂದ ಶುರುವಾಗಲಿದೆ KPSC ಗ್ರೂಪ್ 'ಸಿ' ಹುದ್ದೆಗಳ ಪರೀಕ್ಷೆ - ಅಭ್ಯರ್ಥಿಗಳೇ ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಈ ಸ್ಟೋರಿ ನೋಡಿ

Advertisement

* 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಫಲಿತಾಂಶಗಳು ಪ್ರಕಟವಾಗುವವರೆಗೆ ಹಾಗೂ ಹೊಸ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೆ ಈ ಬಜೆಟ್‌ ಅನ್ವಯವಾಗುತ್ತದೆ.
* ಹಣಕಾಸು ಸಚಿವೆ ಸೀತಾರಾಮನ್ 2024 ಬಜೆಟ್ ಮಂಡಿಸಿದ ಬಳಿಕ ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಾರ್ವಜನಿಕರ ವೀಕ್ಷಣೆಯ ನಿಟ್ಟಿನಲ್ಲಿ http://www.indiabudget.gov.in/ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

* ಈ ಮಧ್ಯಂತರ ಬಜೆಟ್ ಏಪ್ರಿಲ್ 1, 2024 ರಂದು ಆರಂಭಗೊಂಡು ಮಾರ್ಚ್ 31, 2025 ರಂದು ಕೊನೆಯಾಗಲಿದೆ.
* ಬಜೆಟ್‌ ಮಂಡನೆಯು ತೆರಿಗೆ ಮತ್ತು ತೆರಿಗೆಯೇತರ ಆದಾಯದಲ್ಲಿ ಒಳಗೊಂಡಿರದ ಹೆಚ್ಚುವರಿ-ಬಜೆಟ್ ಸಂಪನ್ಮೂಲಗಳಿಂದ ಎಷ್ಟು ಬಜೆಟ್ ಅನ್ನು ಹೊಂದಿದೆ ಎಂಬುದನ್ನು ತಿಳಿಸುತ್ತದೆ.
* ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಜಿಎಸ್‌ಟಿ, ಅಬಕಾರಿ ಸುಂಕ ಇತ್ಯಾದಿಗಳ ಮೂಲಕ ಎಷ್ಟು ಆದಾಯವನ್ನು ನಿರೀಕ್ಷಿಸಲಾಗಿದೆ ಎಂಬುದರ ಕುರಿತು ಬಜೆಟ್‌ನ ಆದಾಯ ಮತ್ತು ವೆಚ್ಚದ ದಾಖಲೆಯು ಮಾಹಿತಿಯನ್ನು ಒದಗಿಸುತ್ತದೆ.
* ಬಜೆಟ್‌ನ ಭಾಗ ಎ, ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ಮತ್ತು ಇತರ ಹಣಕಾಸು ಸೇವೆಗಳು, ಗ್ರಾಮೀಣ ಮತ್ತು ನಗರ ವಲಯಗಳು, ಬಂಡವಾಳ ಮಾರುಕಟ್ಟೆಗಳು, ಮೂಲ ಸೌಕರ್ಯ ಅಭಿವೃದ್ಧಿ, ಆರ್ಥಿಕತೆ ಒಳಗೊಂಡಂತೆ ಸಮಾಜದ ವಿವಿಧ ವರ್ಗಗಳ ಕಲ್ಯಾಣ ಯೋಜನೆಗಳನ್ನು ಒಳಗೊಂಡಿರುತ್ತದೆ.
* ಬಜೆಟ್‌ನ ಭಾಗ ಬಿ, ನೇರ ಮತ್ತು ಪರೋಕ್ಷ ತೆರಿಗೆಗಳ ಮಾಹಿತಿಯನ್ನು ಹೊಂದಿದ್ದು, ಆದಾಯ ತೆರಿಗೆ ಸ್ಲ್ಯಾಬ್‌ಗಳು, ಕಸ್ಟಮ್ಸ್, ಅಬಕಾರಿ ಸುಂಕ ಮತ್ತು ಇನ್ನಿತರ ಯೋಜನೆಗಳನ್ನು ಒಳಗೊಂಡಿರುತ್ತದೆ. ಇದಲ್ಲದೇ, ಅನೆಕ್ಸ್ ಭಾಗವು ಎಲ್ಲಾ ತೆರಿಗೆ ಘೋಷಣೆಗಳ ಸಾರಾಂಶವನ್ನು ಒಳಗೊಂಡಿರುತ್ತದೆ.

Advertisement
Advertisement