For the best experience, open
https://m.hosakannada.com
on your mobile browser.
Advertisement

Udyogini Scheme: ಮಹಿಳೆಯರೇ ಸ್ವಂತ ಉದ್ಯಮ ಪ್ರಾರಂಭಿಸೋ ಆಸಕ್ತಿ ಇದೆಯೇ? ಉದ್ಯೋಗಿನಿ ಯೋಜನೆಯಡಿ ಸಿಗುತ್ತೆ 3 ಲಕ್ಷ ಸಾಲ!!! ಹೀಗೆ ಅರ್ಜಿ ಸಲ್ಲಿಸಿ

12:16 PM Jan 29, 2024 IST | ಹೊಸ ಕನ್ನಡ
UpdateAt: 12:23 PM Jan 29, 2024 IST
udyogini scheme  ಮಹಿಳೆಯರೇ ಸ್ವಂತ ಉದ್ಯಮ ಪ್ರಾರಂಭಿಸೋ ಆಸಕ್ತಿ ಇದೆಯೇ  ಉದ್ಯೋಗಿನಿ ಯೋಜನೆಯಡಿ ಸಿಗುತ್ತೆ 3 ಲಕ್ಷ ಸಾಲ    ಹೀಗೆ ಅರ್ಜಿ ಸಲ್ಲಿಸಿ
Advertisement

Udyogini Scheme: ಅನೇಕ ಮಹಿಳೆಯರು ಸ್ವಂತ ಉದ್ಯಮದತ್ತ ಹೆಚ್ಚಿನ ಒಲವು ತೋರಿಸುತ್ತಿದ್ದು, ಇಂಥಹ ಮಹಿಳೆಯರಿಗೆ ಸ್ವಂತ ಉದ್ಯಮ ಕೈಗೊಳ್ಳಲು ಹಣಕಾಸಿನ ನೆರವು ನೀಡಲು ರಾಜ್ಯ ಸರಕಾರದ ಒಂದು ಯೋಜನೆ ನೆರವು ನೀಡುತ್ತಿದೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ದಿನಸಿ ಅಂಗಡಿ, ಉಪ್ಪಿನಕಾಯಿ ತಯಾರಿಕೆ, ಮೀನು ಮಾರಾಟ, ಬೇಕರಿ, ಕಾಫಿ-ಚಹಾ ಅಂಗಡಿ, ಟೈಲರಿಂಗ್, ಬ್ಯೂಟಿ ಪಾರ್ಲರ್, ಸಿಹಿತಿಂಡಿ ಅಂಗಡಿ, ಹಿಟ್ಟಿನ ಗಿರಣಿ, ಫೋಟೋ ಸ್ಟುಡಿಯೋ, ಕಾಂಡಿಮೆಂಟ್ಸ್, ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ 88ಕ್ಕೂ ಹೆಚ್ಚು ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಉದ್ಯೋಗಿನಿ ಯೋಜನೆಯಲ್ಲಿ ಸಾಲ ಪಡೆಯಲು ಅವಕಾಶ ಇದೆ.

Advertisement

ಇದನ್ನೂ ಓದಿ: Gali Janardhan Reddy: BJP ಸೇರುವ ಕುರಿತು ಗಾಲಿ ಜನಾರ್ಧನ ರೆಡ್ಡಿಯವರಿಂದ ಬಿಗ್‌ ಅಪ್ಡೇಟ್!

ಬಡ್ಡಿ ರಹಿತ 3 ಲಕ್ಷ ರೂ. ಸಾಲವನ್ನು ಪಡೆಯಲು ಅವಕಾಶವಿದೆ. ಈ ಯೋಜನೆಯ ಹೆಸರು ʼ ಉದ್ಯೋಗಿನಿʼ. ಹಿಂದುಳಿದ ವರ್ಗದ ಹಾಗೂ ಸಾಮಾನ್ಯ ಮಹಿಳೆಯರು ಯಾವುದಾದರೂ ಸ್ವಂತ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಗರಿಷ್ಠ 3 ಲಕ್ಷ ರೂ. ತನಕ ಸಾಲ ಪಡೆಯಲು ಅವಕಾಶವಿದೆ.

Advertisement

ವಿಧವೆ, ಅಂಗವಿಕಲ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇ.30 ರಷ್ಟು ಅಥವಾ ಗರಿಷ್ಠ 90ಸಾವಿರ ತನಕ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ, ಪಂಗಡದ ಮಹಿಳೆಯರಿಗೆ ಶೇ.50 ರಷ್ಟು ಅಥವಾ 1,50,000 ತನಕ ಸಹಾಯಧನ ನೀಡಲಾಗುತ್ತದೆ.

18 ರಿಂದ 55 ವರ್ಷದೊಳಗಿನ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಹರು. ಕರ್ನಾಟಕದಲ್ಲಿ ವಾಸಿಸುವ ಪ್ರತಿ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರು.

ಸಾಮಾನ್ಯ ಮಹಿಳರಯರ ವಾರ್ಷಿಕ ಆದಾಯ 1.5 ಲಕ್ಷ ರೂ ಒಳಗಿರಬೇಕು. ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರ ವಾರ್ಷಿಕ ಆದಾಯ 2 ಲಕ್ಷ ರೂ. ಒಳಗಿರಬೇಕು.

ಈ ಯೋಜನೆಯಡಿಯಲ್ಲಿ ಸಾಲ ಪಡೆದ ಪರಿಶಿಷ್ಟ ಜಾತಿ/ಪಂಗಡ ಮಹಿಳೆಯರು ಶೇ.40 ರಷ್ಟು ಸಬ್ಸಿಡಿ ಪಡೆಯಬಹುದು. ಶೇ.30 ರಷ್ಟು ಸಬ್ಸಿಡಿ ಅಥವಾ 90 ಸಾವಿರ ರೂ. ತನಕ ರಿಯಾಯಿತಿಯನ್ನು ಸಾಮಾನ್ಯ ಮಹಿಳೆಯರು ಪಡೆಯಬಹುದು.

ವಾಣಿಜ್ಯ ಬ್ಯಾಂಕುಗಳು, ಜಿಲ್ಲೆಯ ಸಹಕಾರಿ ಬ್ಯಾಂಕುಗಳ ಮೂಲಕ ಫಲಾನುಭವಿಗಳಿಗೆ ಸಾಲ ಒದಗಿಸಲಾಗುತ್ತಿದೆ.

ಬೇಕಾಗುವ ದಾಖಲೆ;

ಆಧಾರ್ ಕಾರ್ಡ್, ಜಾತಿ /ಆದಾಯ ಪ್ರಮಾಣಪತ್ರ, ಪಡಿತರ ಚೀಟಿ (Ration card),ಜನನ ಪ್ರಮಾಣಪತ್ರ, ಬ್ಯಾಂಕ್ ಖಾತೆಯ ವಿವರ, ಕೈಗೊಳ್ಳುವ ಉದ್ಯೋಗಕ್ಕೆ ಸಂಬಂಧಿಸಿದ ಯೋಜನಾ ವರದಿ, ಪಾಸ್ ಪೋರ್ಟ್ ಗಾತ್ರದ ಫೋಟೋ ಜೊತೆಗೆ ಅರ್ಜಿ ಸಲ್ಲಿಸಬೇಕು.

ಅಂಗವಿಕಲರು, ವಿಧವೆಯರು, ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರು ತಮ್ಮ ಅರ್ಜಿಯೊಂದಿಗೆ ಪ್ರಮಾಣಪತ್ರ ಲಗತ್ತಿಸಬೇಕು.

ಮಹಿಳೆಯರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.

Advertisement
Advertisement
Advertisement