For the best experience, open
https://m.hosakannada.com
on your mobile browser.
Advertisement

Udupi: ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣ; ಅತುಲ್‌ ರಾವ್‌ ಖುಲಾಸೆ

Udupi: ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿದ್ದ ಅತುಲ್‌ ರಾವ್‌ ಅವರನ್ನು ಜಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯ ಖುಲಾಸೆಗೊಳಿಸಿ ಬುಧವಾರ ತೀರ್ಪು ನೀಡಿದೆ.
09:55 AM Jun 13, 2024 IST | ಸುದರ್ಶನ್
UpdateAt: 09:55 AM Jun 13, 2024 IST
udupi  ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣ  ಅತುಲ್‌ ರಾವ್‌ ಖುಲಾಸೆ

Udupi: ಹದಿನೈದು ವರ್ಷಗಳ ಹಿಂದೆ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್‌ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿದ್ದ ಅತುಲ್‌ ರಾವ್‌ ಅವರನ್ನು ಜಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯ ಖುಲಾಸೆಗೊಳಿಸಿ ಬುಧವಾರ ತೀರ್ಪು ನೀಡಿದೆ.

Advertisement

ಕುವೈತ್‌ನ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಅವಘಡ; 50 ಜನ ಸಾವು ; ಭಯಾನಕ ವೀಡಿಯೊ ವೈರಲ್‌

ಅತುಲ್‌ ರಾವ್‌ ಅವರ ವಿರುದ್ಧ ಮೊಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಆರೋಪ ಮಾಡಲಾಗಿತ್ತು.

Advertisement

ಪದ್ಮಪ್ರಿಯ ಕರಂಬಳ್ಳಿಯ ಮನೆಯಿಂದ 2008, ಜೂ.10 ರಂದು ನಾಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ಬಾಲ್ಯ ಸ್ನೇಹಿತ ಅತುಲ್‌ ರಾವ್‌ ನಕಲಿ ದಾಖಲೆ ಸೃಷ್ಟಿ ಮಾಡಿ ಮೋಸ ಮಾಡಿರುವ ಕುರಿತು 2008, ಜೂ.19 ರಂದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಓಡಿ ಅಧಿಕಾರಿಗಳು ಈ ಕುರಿತು ತನಿಖೆ ನಡೆಸಿದ್ದು, ಆರೋಪಿ ವಿರುದ್ಧ ದೋಷಾರೋಪ ಸಲ್ಲಿಕೆ ಮಾಡಿದ್ದರು. ನಂತರ ಉಡುಪಿಯ ಸಿಜೆಂ ನ್ಯಾಯಾಲಯವರು 2023, ನ.10 ರಂದು ಅತುಲ್‌ಗೆ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಈ ಕುರಿತು ಅತುಲ್‌ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆರೋಪಿ ಅತುಲ್‌ ಅವರನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದರು.

Pavitra Gowda: ಪವಿತ್ರ ಗೌಡ ಯಾರು ? ಈ ಮಾಯಾಂಗನೆಗೆ ದರ್ಶನ್ ಫಿದಾ ಆಗಿದ್ದು ಹೇಗೆ..?

Advertisement
Advertisement
Advertisement