For the best experience, open
https://m.hosakannada.com
on your mobile browser.
Advertisement

Pangala Case: ನಿಜವಾಯ್ತು ದೈವದ ಕಾರ್ಣಿಕ ನುಡಿ; ಶರತ್‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕೋರ್ಟ್‌ಗೆ ಶರಣು

Udupi: ಪಾಂಗಾಳ ಮಂಡೇಡಿಯ ಶರತ್‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಯೋಗಿಶ್‌ ನ್ಯಾಯಾಲಯಕ್ಕೆ ಶರಣಾಗಿರುವ ಘಟನೆಯೊಂದು ನಡೆದಿದೆ.
09:43 AM May 29, 2024 IST | ಸುದರ್ಶನ್
UpdateAt: 09:48 AM May 29, 2024 IST
pangala case  ನಿಜವಾಯ್ತು ದೈವದ ಕಾರ್ಣಿಕ ನುಡಿ  ಶರತ್‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕೋರ್ಟ್‌ಗೆ ಶರಣು

Udupi: ಕಳೆದ ವರ್ಷ ಫೆ.5 ರಂದು ಕಾಪು ಪಾಂಗಾಳದಲ್ಲಿ ಡ್ರ್ಯಾಗನ್‌ ಇರಿತಕ್ಕೆ ಒಳಗಾಗಿ ಸಾವಿಗೀಡಾದ ಪಾಂಗಾಳ ಮಂಡೇಡಿಯ ಶರತ್‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಯೋಗಿಶ್‌ ನ್ಯಾಯಾಲಯಕ್ಕೆ ಶರಣಾಗಿರುವ ಘಟನೆಯೊಂದು ನಡೆದಿದೆ. ಈ ಮೂಲಕ ವರ್ಷದ ಹಿಂದೆ ನುಡಿದಿದ್ದ ದೈವದ ಕಾರ್ಣಿಕ ನುಡಿ ನಿಜವಾಗಿದೆ.

Advertisement

ಇದನ್ನೂ ಓದಿ: K-CET Results: ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ; ತಾತ್ಕಾಲಿಕ ಫಲಿತಾಂಶ ಪ್ರಕಟ

ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಂತೆ, ಕೊಲೆಯಾದ ಶರತ್‌ ಶೆಟ್ಟಿ ಮನೆಯವರು ಕುಟುಂಬದ ದೈವದ ಮೊರೆ ಹೋಗಿದ್ದು, ಆ ಸಂದರ್ಭದಲ್ಲಿ ದೈವವು, " ಆರೋಪಿ ಎಲ್ಲೇ ಇದ್ದರೂ ಪೊಲೀಸರ ಮುಂದೆ ತಂದು ನಿಲ್ಲಿಸುತ್ತೇನೆ" ಎಂದು ಅಭಯ ನೀಡಿತ್ತು. ಈ ಮೂಲಕ ನುಡಿದಂತೆ ನಡೆದಿದ್ದು, ಮೇ.23 ರಂದು ಆರೋಪಿ ತಾನಾಗಿಯೇ ನ್ಯಾಯಾಲಯದ ಮುಂದೆ ಹಾಜರಾಗಿದ್ದಾನೆ.

Advertisement

ಇದನ್ನೂ ಓದಿ: Putturu: ಕೊಳವೆ ಬಾವಿ ಸ್ವಚ್ಛ ಮಾಡುತ್ತಿದ್ದ ಬೋರ್‌ವೆಲ್‌ ಲಾರಿ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ

ಕೊಲೆ ನಡೆದು 15 ತಿಂಗಳ ನಂತರ ಈ ಪವಾಡ ನಡೆದಿದೆ. ತಡವಾದರೂ ದೈವದ ಮಾತು ನಿಜವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಆರೋಪಿ ಯೋಗೀಶ್‌ ಆಚಾರ್ಯನನ್ನು ಮೇ.30 ರವರೆಗೆ ಕಾಪು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

Advertisement
Advertisement
Advertisement