ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Udupi: ಉಡುಪಿಯ ಗ್ಯಾಂಗ್‌ವಾರ್‌ ಪ್ರಕರಣ; ಗಾಯಾಳುವಿಗೆ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಬಿತ್ತು ಕೇಸು

Udupi: ಈ ಪ್ರಕರಣದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಆರೋಪದಲ್ಲಿ ವೈದ್ಯರೊಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
08:38 AM May 29, 2024 IST | ಸುದರ್ಶನ್
UpdateAt: 09:29 AM May 29, 2024 IST
Advertisement

Udupi: ಉಡುಪಿಯ ಗ್ಯಾಂಗ್‌ವಾರ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಈ ಪ್ರಕರಣದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಆರೋಪದಲ್ಲಿ ವೈದ್ಯರೊಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ: Kiccha Sudeep: ಕರ್ನಾಟಕ ಅಲ್ಲದೆ 'ತುಳುನಾಡು' ಅಂತ ಬೇರೆಯೇ ಇದೆಯೇ? ಕಿಚ್ಚ ಸುದೀಪ್ ಪ್ರಶ್ನೆ!!

ವೈದ್ಯರಾದ ಡಾ.ಜಾರ್ಜ್‌ ಸಾಜಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Advertisement

ಗಾಯಾಳುವಿನ ಮೇಲೆ ಅಸಹಜ ಗಾಯದ ಗುರುತುಗಳು ಇದ್ದುದ್ದರಿಂದ ಮೆಡಿಕೋ ಲೀಗಲ್‌ ಪ್ರಕರಣವಾಗಿತ್ತು. ಹಾಗಾಗಿ ವೈದ್ಯರು ಪೊಲೀಸರಿಗೆ ಮಾಹಿತಿಯನ್ನು ನೀಡದ ಕಾರಣ ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Belluru: ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಹಲ್ಲೆ ಪ್ರಕರಣ: ಬೆಳ್ಳೂರು ಪ್ರಕ್ಷುಬ್ಧ

ಮೇ.18 ರಂದು ನಸುಕಿನ ಸಮಯದಲ್ಲಿ ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಸರ್ಕಲ್‌ನಲ್ಲಿ ಸಿನಿಮೀಯ ರೀತಿಯಲ್ಲಿ ಮಚ್ಚು ಲಾಂಗ್‌ ಹಿಡಿದು ಎರಡು ತಂಡಗಳು ಕಾರಿನಲ್ಲಿ ಬಂದಿದ್ದು ಹೊಡೆದಾಡಿಕೊಂಡಿದ್ದವು. ಈ ಗಲಾಟೆಯಲ್ಲಿ ಶರೀಫ್‌ ಎಂಬಾತನಿಗೆ ಕಾರು ಹಾಯಿಸಿದ ಕಾರಣ ತೀವ್ರ ಗಾಯಗೊಂಡಿದ್ದರು. ಅಲ್ಲದೇ ತಲವಾರಿನಿಂದ ದಾಳಿ ಕೂಡಾ ಮಾಡಿದ್ದರು. ಹೀಗಾಗಿ ಶರೀಫ್‌ನ ದೇಹದಲ್ಲಿ ಎಡಕಾಲು, ಬಲ ಕಿವಿ ಹಿಂಬದಿ, ಬಲಕೈಗೆ ಗಂಭೀರ ಗಾಯಗಳಾಗಿತ್ತು.

ಆರೋಪಿಗಳಾದ ಅಲ್ಫಾಝ್‌, ಮಜೀದ್‌ ಗಾಯಾಳು ಶರೀಫ್‌ನನ್ನು ಚಿಕಿತ್ಸೆಗೆಂದು ಪಡುಬಿದ್ರಿಯಲ್ಲಿ ಸಿದ್ದಿ ವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಹಾಗಾಗಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡದೇ ಕರ್ತವ್ಯಲೋಪ ಎಸಗಿದ ಡಾ.ಜಾರ್ಜ್‌ ಸಾಜಿ ವಿರುದ್ಧ ಉಡುಪಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

Advertisement
Advertisement