ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Udupi: ಉಡುಪಿಗೆ ಬಂದು ಅಣ್ಣಪ್ಪ ಪಂಜುರ್ಲಿಯ ಮೊರೆ ಹೋದ ಪಾಕಿಸ್ತಾನ ಮೂಲ ಕುಟುಂಬ - ಯಾವ ಕಾರಣಕ್ಕಾಗಿ?

Udupi: ಪಾಕಿಸ್ತಾನದಲ್ಲಿ ಪೂರ್ವಿಕರನ್ನು ಹೊಂದಿ, ಉತ್ತರ ಭಾರತಕ್ಕೆ(North India) ವಲಸೆ ಬಂದಿದ್ದ ಕುಟುಂಬ ಇದಾಗಿದೆ. ಯೂಟ್ಯೂಬ್​ನಲ್ಲಿ ತುಳುನಾಡಿನ ದೈವಗಳ ಬಗ್ಗೆ ತಿಳಿದು ಈ ಕುಟುಂಬದ ಸದಸ್ಯರು ಉಡುಪಿಗೆ ಆಗಮಿಸಿದ್ದಾರೆ.
01:14 PM Jul 14, 2024 IST | ಸುದರ್ಶನ್
UpdateAt: 01:14 PM Jul 14, 2024 IST
Advertisement

Udupi: ಪಾಕಿಸ್ತಾನ(Pakistana) ಮೂಲದ ಕುಟುಂಬವೊಂದು ಉಡುಪಿ(Udupi) ಕಂಗಣಬೆಟ್ಟು(Kanganabettu) ಅಣ್ಣಪ್ಪ ಪಂಜುರ್ಲಿ(Annappa Panjurli) ಸನ್ನಿಧಾನಕ್ಕೆ ಬಂದು ಪೂಜೆ ನೆರವೇರಿಸಿ, ಇಷ್ಟ್ಟಾರ್ಥ ಪ್ರಾಪ್ತಿಗಾಗಿ ಪ್ರಾರ್ಥನೆ ಸಲ್ಲಿಸಿದೆ.

Advertisement

ಪಾಕಿಸ್ತಾನದಲ್ಲಿ ಪೂರ್ವಿಕರನ್ನು ಹೊಂದಿ, ಉತ್ತರ ಭಾರತಕ್ಕೆ(North India) ವಲಸೆ ಬಂದಿದ್ದ ಕುಟುಂಬ ಇದಾಗಿದೆ. ಯೂಟ್ಯೂಬ್​ನಲ್ಲಿ ತುಳುನಾಡಿನ ದೈವಗಳ ಬಗ್ಗೆ ತಿಳಿದು ಈ ಕುಟುಂಬದ ಸದಸ್ಯರು ಉಡುಪಿಗೆ ಆಗಮಿಸಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಕುಟುಂಬವು ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಸನ್ನಿಧಾನಕ್ಕೆ ಆಗಮಿಸಿ ದೈವಕ್ಕೆ ಸೇವೆ ಸಲ್ಲಿಸಿತು.

ಯಾಕೆ ಪೂಜೆ?
ಈ ಕುಟುಂಬದ ಸದಸ್ಯನಾದ ಆದಿತ್ಯ ಸಿಂಘಾನಿಯಾ ಎಂಬ ಹೆಸರಿನ ಯುವಕ ಎಂಬಿಎ ಪದವೀಧರನಾಗಿದ್ದು ಕಾಯಿಲೆಯಿಂದಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ. ಯಾವುದೇ ಉದ್ಯೋಗ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಯುವಕ, ದೈವಕ್ಕೆ ಪೂಜೆ ಸಲ್ಲಿಸಿದ್ದಾನೆ. ಪೂಜೆಯ ಬಳಿಕ ದರ್ಶನ ಸೇವೆಯ ಮೂಲಕ ಸಂಕಷ್ಟ ಪರಿಹಾರಕ್ಕಾಗಿ ದೈವಕ್ಕೆ ಮೊರೆ ಇಟ್ಟಿದ್ದು, ದೈವವು ಈ ಯುವಕನ ಕಾಯಿಲೆ ನಿವಾರಣೆಗೆ ಪೂಜೆಯ ಜೊತೆಗೆ ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದೆ ಎಂದು ತಿಳಿದುಬಂದಿದೆ.

Advertisement

Uttarpradesh: ತಾಯಿ ಮೇಲೆ ಅತ್ಯಾಚಾರ! 30 ವರ್ಷಗಳ ಬಳಿಕ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಮಗ!

Advertisement
Advertisement