For the best experience, open
https://m.hosakannada.com
on your mobile browser.
Advertisement

Shivasena-BJP: ಮತ್ತೆ ಮೋದಿ ಜೊತೆ ಉದ್ಧವ್ ದೋಸ್ತಿ ?! ಕ್ಯಾಬಿನೆಟ್ ನಲ್ಲಿ ಠಾಕ್ರೆಗೂ ಸೀಟ್ ಫಿಕ್ಸ್ ?!

Shivasena-BJP: ಹಾವು-ಮುಂಗಸಿಗಳ ರೀತಿ ಆಗಿರುವ ಶಿವಸೇನೆ ಹಾಗೂ ಬಿಜೆಪಿ(Shivasena-BJP) ಮತ್ತೆ ದೋಸ್ತಿಗಳಾಗುತ್ತಾರಾ? ಎಂಬ ಪ್ರಶ್ನೆ ಎದುರಾಗಿದೆ.
03:27 PM Jun 03, 2024 IST | ಸುದರ್ಶನ್
UpdateAt: 03:27 PM Jun 03, 2024 IST
shivasena bjp  ಮತ್ತೆ ಮೋದಿ ಜೊತೆ ಉದ್ಧವ್ ದೋಸ್ತಿ    ಕ್ಯಾಬಿನೆಟ್ ನಲ್ಲಿ ಠಾಕ್ರೆಗೂ ಸೀಟ್ ಫಿಕ್ಸ್
Advertisement

Shivasena-BJP: ಒಂದು ಕಾಲದಲ್ಲಿ ರಾಜಕೀಯದಲ್ಲಿ ದೋಸ್ತಿಗಳಾಗಿ ಮೆರೆದು, ಸಿದ್ದಾಂತ-ತತ್ವಗಳನ್ನೆಲ್ಲಾ ಒಂದೇ ರೀತಿ ಹೊಂದಿದ್ದು, ಇದೀಗ ಹಾವು-ಮುಂಗಸಿಗಳ ರೀತಿ ಆಗಿರುವ ಶಿವಸೇನೆ ಹಾಗೂ ಬಿಜೆಪಿ(Shivasena-BJP) ಮತ್ತೆ ದೋಸ್ತಿಗಳಾಗುತ್ತಾರಾ? ಎಂಬ ಪ್ರಶ್ನೆ ಎದುರಾಗಿದೆ.

Advertisement

ಇದನ್ನೂ ಓದಿ: ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯಂತೆ ಭಯಾನಕ ಕೃತ್ಯ; ಬೆಳಕಿಗೆ ಬಂದಿದ್ದೇ ರೋಚಕ !!

ಅಮರಾವತಿ(Amaravati) ಜಿಲ್ಲೆಯ ಬದ್ನೇರಾ ಕ್ಷೇತ್ರದ ಶಾಸಕರಾದ ರವಿ ರಾಣಾ(Ravi Rana) ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು ಮಹರಾಷ್ಟ್ರ ಹಾಗೂ ದೇಶದ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸುವ ಲಕ್ಷಣ ಉಂಟುಮಾಡಿದೆ. ಹೌದು, ರವಿ ರಾಣಾ ಅವರು 'ಲೋಕಸಭಾ ಚುನಾವಣೆಯ(Parliament Election) ಫಲಿತಾಂಶ ಹೊರಬಿದ್ದ ಹದಿನೈದು ದಿನದೊಳಗೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Uddav Takre), ಮೋದಿ ಸರ್ಕಾರದ ಭಾಗವಾಗಲಿದ್ದಾರೆ ಎಂದು ಹೇಳುವ ಮೂಲಕ ಎಲ್ಲರೂ ಒಮ್ಮೆ ಅಚ್ಚರಿ ಪಡುವಂತೆ ಮಾಡಿದ್ದಾರೆ.

Advertisement

ಈ ಕುರಿತು ಮಾತನಾಡಿದ ಅವರು 'ಉದ್ಧವ್ ಠಾಕ್ರೆ ಮತ್ತು ಸಂಜಯ್ ರಾವತ್ ಅವರು ಪ್ರಧಾನಿ ಮೋದಿ ಬಗ್ಗೆ ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ನಾನು ಅತ್ಯಂತ ಆತ್ಮವಿಶ್ವಾಸದಿಂದ ಹೇಳಬಲ್ಲೆ. ಚುನಾವಣಾ ಫಲಿತಾಂಶ ಬಂದ ಹದಿನೈದು ದಿನದೊಳಗೆ ಠಾಕ್ರೇಜೀ ಮೋದಿ ಸರ್ಕಾರದ ಕ್ಯಾಬಿನೆಟ್ ಸೇರಲಿದ್ದಾರೆ. ಠಾಕ್ರೆ ಮತ್ತು ಸಂಜಯ್ ರಾವತ್ ಅವರಿಗೆ ತಿಳಿದಿದೆ, ಮುಂದಿನ ಯುಗ ಏನಿದ್ದರೂ ಅದು ಮೋದಿಯವರದ್ದು ಎಂದು. ಹಾಗಾಗಿ, ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಐಎಎಸ್‌ ಪೋಷಕರ ಮಗಳು 10 ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ

Advertisement
Advertisement
Advertisement