For the best experience, open
https://m.hosakannada.com
on your mobile browser.
Advertisement

Andhra Pradesh: ತಾವೇ ಮುಂದೆ ನಿಂತು ಗಂಡನಿಗೆ 3ನೇ ಮದುವೆ ಮಾಡಿದ ಇಬ್ಬರು ಹೆಂಡತಿಯರು !!

Andhra Pradesh: ಆಂಧ್ರ ಪ್ರದೇಶದ ಅಲ್ಲೂರಿ ಜಿಲ್ಲೆಯ ಪೆದ್ದಬಯಾಲು ಮಂಡಲದಲ್ಲಿ ಈ ವಿಶೇಷ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬನ ಮೊದಲ ಪತ್ನಿಯರಿಬ್ಬರು ಸೇರಿ ಗಂಡನಿಗೆ ಮೂರನೇ ಮದ್ವೆ ಮಾಡಿದ್ದಾರೆ.
09:24 AM Jul 04, 2024 IST | ಸುದರ್ಶನ್
UpdateAt: 09:24 AM Jul 04, 2024 IST
andhra pradesh  ತಾವೇ ಮುಂದೆ ನಿಂತು ಗಂಡನಿಗೆ 3ನೇ ಮದುವೆ ಮಾಡಿದ ಇಬ್ಬರು ಹೆಂಡತಿಯರು
Advertisement

Andhra Pradesh: ತನ್ನ ಗಂಡ ಬೇರೆಯಾದರೂ ಹೆಣ್ಣನ್ನು ದಿಟ್ಟಿಸಿ ನೋಡಿದ ಎಂದರೆ ಸಾಕು ಹೆಮ್ಮಾರಿಯಾಗಿ ಅವನ ಕಥೆ ಮುಗಿಸುವ ಹೆಂಡತಿಯರ ನಡುವೆ ಇಲ್ಲೊಂದೆಡೆ ಒಬ್ಬನೇ ಗಂಡನ ಇಬ್ಬರು ಹೆಂಡತಿಯರು ಎಂತಾ ಮಹತ್ಕಾರ್ಯ ಮಾಡಿದ್ದಾರೆ ಎಂದು ಗೊತ್ತಾದ್ರೆ ನೀವೇ ಶಾಕ್ ಆಗ್ತೀರಾ !!

Advertisement

Udupi: ಅಯ್ಯೋ ದುರ್ವಿಧಿಯೇ, ಹೃದಯಾಘಾತಕ್ಕೆ 10 ನೇ ತರಗತಿ ವಿದ್ಯಾರ್ಥಿನಿ ಬಲಿ !!

ಆಂಧ್ರ ಪ್ರದೇಶದ(Adndra Pradesh) ಅಲ್ಲೂರಿ ಜಿಲ್ಲೆಯ ಪೆದ್ದಬಯಾಲು ಮಂಡಲದಲ್ಲಿ ಈ ವಿಶೇಷ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬನ ಮೊದಲ ಪತ್ನಿಯರಿಬ್ಬರು ಸೇರಿ ಗಂಡನಿಗೆ ಮೂರನೇ ಮದ್ವೆ ಮಾಡಿದ್ದಾರೆ. ಇನ್ನೊಮ್ಮೆ ಸರಿಯಾಗಿ ಓದುತ್ತೀನಿ ಅನ್ನುತ್ತೀರಾ... ಹೌದು, ಈಗಾಗಲೇ ಎರಡು ಮದ್ವೆಯಾಗಿದ್ದ ಪಂಡಣ್ಣ ಎಂಬಾತನಿಗೆ ಆತನ ಮೊದಲ ಪತ್ನಿ ಪಾರ್ವತಮ್ಮ ಹಾಗೂ 2ನೇ ಪತ್ನಿ ಅಪ್ಪಾಲಮ್ಮ ಸೇರಿ ಮೂರನೇ ಮದ್ವೆ ಮಾಡಿದ್ದಾರೆ !!

Advertisement

ಏನಿದು ಘಟನೆ?
ಪಂಡಣ್ಣ(Pandanna) ಮೊದಲ ಬಾರಿಗೆ ಪಾರ್ವತಮ್ಮ(Parvatamma) ಅವರನ್ನು ಮದುವೆಯಾಗಿದ್ದರು. ಅದರೆ ಇವರಿಗೆ ಮಕ್ಕಳಿರಲಿಲ್ಲ, ಈ ಹಿನ್ನೆಲೆಯಲ್ಲಿ ಪಂಡಣ್ಣ 2002ರಲ್ಲಿ ಅಪ್ಪಾಲಮ್ಮ ಎಂಬ ಮಹಿಳೆಯನ್ನು ಮದುವೆಯಾದರು. ಇವರಿಗೆ 2007ರಲ್ಲಿ ಮಗನೋರ್ವ ಜನಿಸಿದ್ದಾನೆ. ಆದರೆ ತನ್ನ ಕುಟುಂಬ ಇನ್ನು ದೊಡ್ಡದಾಗಿರಬೇಕು ಎಂಬ ಆಸೆಯನ್ನು ಪಂಡಣ್ಣ ವ್ಯಕ್ತಪಡಿಸಿದ್ದು, ಈತನ ಆಸೆಗೆ ಮೊದಲ ಹಾಗೂ 2ನೇ ಪತ್ನಿಯರು ನೀರೆರೆದಿದ್ದಾರೆ. ಅಲ್ಲದೇ ಮೂರನೇ ಬಾರಿ ಮದ್ವೆಯಾಗುವಂತೆ ಆತನಿಗೆ ಬೆಂಬಲ ತುಂಬಿದ್ದಾರೆ. ಹಾಗೆಯೇ ಮೂರನೇ ಬಾರಿಗೆ ಮದುವೆಯಾಗಲು ಲಾವಣ್ಯ ಎಂಬ ಹುಡುಗಿಯನ್ನು ನೋಡಿ ವಿವಾಹ ನಿಗದಿ ಮಾಡಿದ್ದಾರೆ.

ಪಂಡನ್ನಾ ಪತ್ನಿಯರಾದ ಪಾರ್ವತಮ್ಮ ಮತ್ತು ಅಪ್ಪಲಮ್ಮ(Appalamma) ಮೂರನೇ ಮದುವೆಗೆ ಭರ್ಜರಿ ತಯಾರಿಯನ್ನು ನಡೆಸಿ ಪೆದ್ದಬಯಲು ಗ್ರಾಮದಲ್ಲಿ ಬ್ಯಾನರ್‌ಗಳನ್ನು ಕಟ್ಟಿಸಿ ಅದ್ದೂರಿ ಮದುವೆ ಮಾಡಿಸಲಾಗಿದೆ. ಕಳೆದ ಜೂನ್ ತಿಂಗಳ 25 ರಂದು ಪಂಡನ್ನ ಮದುವೆ ವಿಜೃಂಭಣೆಯಿಂದ ನೆರವೇರಿತು. ಈ ಮದುವೆಯ ಮೂಲಕ ಪಂಡನ್ನಾಗೆ ಪಾರ್ವತಮ್ಮ, ಅಪ್ಪಲಮ್ಮ ಮತ್ತು ಲಕ್ಷ್ಮಿ ಎಂಬ ಮೂವರು ಪತ್ನಿಯರು ಸಿಕ್ಕಂತಾಗಿದೆ. ನೆಟ್ಟಿಗರಂತೂ ಇದಕ್ಕೆ ನೀನೇನು ಅದೃಷ್ಟ ಮಾಡಿದ್ದೆ ಅಣ್ಣಾ... ನಿಂತ ಅದೃಷ್ಟವಂತ ಯಾರಿಲ್ಲಾ ಬಿಡಿ ಎಂದು ಕಮೆಂಟ್ ಮಾಡಿದ್ದಾರೆ.

Dakshina Kannada: ನಿರಂತರ ಮಳೆಯ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರವಾಸಿ ತಾಣಗಳಿಗೆ ನಿರ್ಬಂಧ

Advertisement
Advertisement
Advertisement