Ramjyoti: ಅಯೋಧ್ಯೆಯಿಂದ ಕಾಶಿಗೆ ರಾಮಜ್ಯೋತಿ ತರುವವರು ಇವರೇ ನೋಡಿ! ಇದರ ಹಿಂದಿದೆ ಮಹತ್ವದ ಕಾರಣ!!
Ramjyoti: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಕೊನೆಯ ಘಟ್ಟಕ್ಕೆ ತಲುಪಿದ್ದು, ಅಯೋಧ್ಯಾ ರಾಮಮಂದಿರ (Ram mandir) ಉದ್ಘಾಟನೆಯ ಶುಭ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ರಾಮಮಂದಿರ ಉದ್ಘಾಟನೆ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದು, ದೇಶದ ಸಾವಿರಾರು ಗಣ್ಯರಿಗೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಅಯೋಧ್ಯೆಯಲ್ಲಿ ಹಬ್ಬದ ಸಂಭ್ರಮ ದುಪ್ಪಟ್ಟಾಗಿದ್ದು, ಕಾಶಿಯ ಇಬ್ಬರು ಮುಸ್ಲಿಂ ಮಹಿಳೆಯರು (Muslim Women) ಅಯೋಧ್ಯೆಯಿಂದ ಕಾಶಿಗೆ ರಾಮಜ್ಯೋತಿಯನ್ನು (Ramjyoti) ಕೊಂಡೊಯ್ಯಲಿದ್ದಾರೆ. ಈ ಮೂಲಕ ಇಬ್ಬರು ಮುಸ್ಲಿಂ ಯುವತಿಯರು ಸೌಹಾರ್ದ ಸಂದೇಶ ರವಾನಿಸಲು ಮುಂದಾಗಿದ್ದಾರೆ.
ವಾರಾಣಸಿಯ ನಜ್ನೀನ್ ಅನ್ಸಾರಿ ಹಾಗೂ ನಜ್ಮಾ ಪರ್ವೀನ್ ಎಂಬ ಮುಸ್ಲಿಂ ಮಹಿಳೆಯರು ನಾವೆಲ್ಲ ಒಂದೇ ಎಂಬ ಸೌಹಾರ್ದತೆಯ ಸಂದೇಶ ರವಾನೆಯ ತೀರ್ಮಾನ ಮಾಡಿದ್ದಾರೆ. ಇಬ್ಬರು ಮುಸ್ಲಿಂ ಯುವತಿಯರು ಶನಿವಾರ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದು, ಅಯೋಧ್ಯೆಯಿಂದ ರಾಮಜ್ಯೋತಿ, ಅಯೋಧ್ಯೆಯ ಮಣ್ಣು ಹಾಗೂ ಸರಯೂ ನದಿಯ ನೀರನ್ನು ಕಾಶಿಗೆ ಕೊಂಡೊಯ್ಯಲಿದ್ದು, ಇವರು ಭಾನುವಾರ ಕಾಶಿಯನ್ನು ತಲುಪಲಿದ್ದಾರೆ.
ಶಾಂತಿ-ಸೌಹಾರ್ದತೆಯಿಂದ ಎಲ್ಲರೂ ಜೊತೆಯಾಗಿ ಬಾಳಲು ಪ್ರೇರೇಪಿಸುವ ನಿಟ್ಟಿನಲ್ಲಿ ನಜ್ನೀನ್ ಅನ್ಸಾರಿ ಹಾಗೂ ನಜ್ಮಾ ಪರ್ವೀನ್ ಅವರು ರಾಮಜ್ಯೋತಿಯನ್ನು ಕಾಶಿಯಲ್ಲಿ ಬೆಳಗಲಿದ್ದಾರೆ ಎನ್ನಲಾಗಿದೆ. ಜನವರಿ 21ರಿಂದ ರಾಮಜ್ಯೋತಿಯನ್ನು ಹಸ್ತಾಂತರಿಸಲಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರೂ ಮುಸ್ಲಿಂ ಮಹಿಳೆಯರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.