For the best experience, open
https://m.hosakannada.com
on your mobile browser.
Advertisement

Tulu Language: ತುಳು 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಬೇಕು: ಕಾಂಗ್ರೆಸ್‌ ಶಾಸಕ ಅಶೋಕ್ ರೈ

09:50 AM Jul 24, 2024 IST | ಕಾವ್ಯ ವಾಣಿ
UpdateAt: 09:50 AM Jul 24, 2024 IST
tulu language  ತುಳು 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಬೇಕು  ಕಾಂಗ್ರೆಸ್‌ ಶಾಸಕ ಅಶೋಕ್ ರೈ
Advertisement

Tulu Language: ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು ತುಳು ಭಾಷೆಯನ್ನು (Tulu language) 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ ಎಂದು ವಿಧಾನಸಭೆಯಲ್ಲಿ ಒತ್ತಾಯಿಸಿದ್ದು, ಅಲ್ಲದೇ ತುಳುವಿನಲ್ಲೇ ಮಾತನಾಡಿ ಮನವಿ ಮಾಡಿದರು.

Advertisement

ಆದ್ರೆ ಈ ವೇಳೆ ಈ ವೇಳೆ ನೀವಿಬ್ಬರೇ ಮಾತನಾಡಿದ್ರೆ ಹೇಗೆ? ನೀವು ಏನು ಹೇಳಿದ್ರಿ‌ ನಮಗೆ ಗೊತ್ತಾಗಲಿಲ್ಲ. ನಾವೇನು ಮಂಗಳೂರಿನ (Mangaluru) ಅಧಿವೇಶನದಲ್ಲಿ ಇದ್ದೇವಾ? ಅಂತಾ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashoka) ಜೋರಾಗಿ ನಕ್ಕು, ಕನ್ನಡದಲ್ಲಿ ಮಾತನಾಡಿ ಎಂದರು.

ಈ ವೇಳೆ ವೇದವ್ಯಾಸ ಕಾಮತ್‌ ರಿಂದಲೂ (Veda Vyasa Kamath) ತುಳು ಸಂಭಾಷಣೆ ನಡೆಯಿತು. ಶಾಸಕ ಅಶೋಕ್ ರೈ ಹೇಳಿದಂತೆ 2ನೇ ಅಧಿಕೃತ ಭಾಷೆ ಮಾಡಿ ಎಂದು ಸದನದಲ್ಲಿ ಕೈಮುಗಿದು ಮನವಿ ಮಾಡಿದರು.

Advertisement

ಇದೇ ವೇಳೆ ಪ್ರಿಯಾಂಕ್ ಖರ್ಗೆ ಉತ್ತರ ನೀಡಿ, ಬೇರೆ ರಾಜ್ಯಗಳಲ್ಲಿ ಎರಡು ಭಾಷೆಗಳಿವೆ. ತುಳು ಭಾಷೆಯ ಪ್ರಾಚೀನತೆ ಇತಿಹಾಸ ಗಮನಕ್ಕಿದೆ.  ನಾನು ಇದರ ಪರವಾಗಿದ್ದೇನೆ. ನಾಳೆಯೇ ಸಚಿವರ ಗಮನಕ್ಕೆ ತರುತ್ತೇನೆ. ಸಭೆ ಮಾಡಿ ನಿರ್ಧಾರ ಮಾಡ್ತೇವೆ, ಅಂತ ಸದನಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದರು.

ಸದ್ಯ ಅಶೋಕ್ ರೈ ಪ್ರಸ್ತಾಪಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರು ಬೆಂಬಲಿಸಿದ್ದಾರೆ. ನೀವು ಸ್ಪೀಕರ್ ಆಗಿರುವಾಗ ಇದೊಂದು ಕೆಲಸ ಆಗಲಿ ಎಂದು ಶಾಸಕ ವೇದವ್ಯಾಸ ಕಾಮತ್ ಕೈ ಮುಗಿದರು. ಏನೂ ಮಂಡೆ ಬಿಸಿ ಮಾಡಬೇಡಿ, ಮಾಡಿಕೊಡುವ ಎಂದು ಸ್ಪೀಕರ್ ಯುಟಿ ಖಾದರ್‌ ಹೇಳಿದ್ದಾರೆ.

Advertisement
Advertisement
Advertisement