ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

TTD: ಅನ್ಯ ಕೋಮಿನ ವ್ಯಕ್ತಿಗೆ ತಿರುಪತಿ ಲಡ್ಡು ತಯಾರಿಸೋ ಜವಾಬ್ದಾರಿ? ಹೊಸ ಪ್ರಕಟಣೆ ಹೊರಡಿಸಿದ ದೇವಾಲಯ ಆಡಳಿತ ಮಂಡಳಿ !!

TTD: ಹಿಂದೂಗಳ ಪ್ರಸಿದ್ದ ಧಾರ್ಮಿಕ ಕೇಂದ್ರ ತಿರುಮಲ ತಿರುಪತಿ ದೇವಾಲಯದಲ್ಲಿ ರುಚಿಕರವಾದ ಲಡ್ಡು ತಯಾರಿಕೆಯ ಗುತ್ತಿಗೆಯನ್ನು ಹಿಂದೂಯೇತರರೊಬ್ಬರಿಗೆ ನೀಡಲಾಗಿದೆ.
02:09 PM Jul 19, 2024 IST | ಸುದರ್ಶನ್
UpdateAt: 02:13 PM Jul 19, 2024 IST
Advertisement

TTD: ಹಿಂದೂಗಳ ಪ್ರಸಿದ್ದ ಧಾರ್ಮಿಕ ಕೇಂದ್ರ ತಿರುಮಲ ತಿರುಪತಿ ದೇವಾಲಯದಲ್ಲಿ ರುಚಿಕರವಾದ ಲಡ್ಡು ತಯಾರಿಕೆಯ ಗುತ್ತಿಗೆಯನ್ನು ಹಿಂದೂಯೇತರರೊಬ್ಬರಿಗೆ ನೀಡಲಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಈ ಕುರಿತು ಟಿಟಿಡಿ ಸ್ಪಷ್ಟೀಕರಣ ನೀಡಿದೆ.

Advertisement

Indira Canteen: ಬಂಟ್ವಾಳದ ಇಂದಿರಾ ಕ್ಯಾಂಟೀನ್‌ನಲ್ಲಿ ಡಿಫೆರೆಂಟ್ ಮೆನು: ಪುಂಡಿ ಗಸಿ, ನೀರು ದೋಸೆ, ಪಾಯಸದೂಟ ಭರ್ಜರಿ ಭೋಜನ!

Advertisement

ಹೌದು, ಚಂದ್ರಬಾಬು ನಾಯ್ಡು ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಲಡ್ಡು ತಯಾರಿಕೆಯ ಬಹುದೊಡ್ಡ ಗುತ್ತಿಗೆಯನ್ನು ಥಾಮಸ್ ಎನ್ನುವ ವ್ಯಕ್ತಿಗೆ ನೀಡಿದೆ. ಭಕ್ತರಿಗೆ ಹಂಚುವ ಲಡ್ಡುಗಳು ತಾಜಾವಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ / ಯೂಟ್ಯೂಬ್ ನಲ್ಲಿ ಸುದ್ದಿ ಹಬ್ಬಿಸಲಾಗಿತ್ತು. ಆದರೀಗ ತಿರುಪತಿ ಲಡ್ಡು ವದಂತಿಗಳಿಗೆ ದೇವಸ್ಥಾನದ ಅಧಿಕಾರಿಗಳು ತೆರೆ ಎಳೆದಿದ್ದಾರೆ. ಲಡ್ಡುಗಳನ್ನು ವೈಷ್ಣವ ಬ್ರಾಹ್ಮಣರು ಹಲವು ವರ್ಷಗಳಿಂದ ತಯಾರಿಸುತ್ತಿದ್ದಾರೆ. ಈಗಲೂ ಅವರೇ ತಯಾರಿಸುವುದು. ಲಡ್ಡುಗಳನ್ನು ಪ್ರತಿದಿನ ಫ್ರೆಶ್ ಆಗಿ ಮಾಡಲಾಗುತ್ತಿದ್ದಾರೆ. ವದಂತಿಗಳಿಗೆ ಕಿವಿಕೊಡಬೇಡಿ ಎಂದು ತಿಳಿಸಿದೆ.

ಅಲ್ಲದೆ ತಿರುಮಲ ತಿರುಪತಿ ದೇವಸ್ಥಾನಂ ( Tirumala Tirupati Devasthanams, TTD ) ಲಡ್ಡು ವಿಚಾರದಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ. ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದೆ.

ಟಿಟಿಡಿ ಹೇಳಿದ್ದೇನು?
" ತಿರುಮಲ ಶ್ರೀವಾರಿ ದೇವಾಲಯದಲ್ಲಿ ನಡೆದುಕೊಂಡು ಬಂದಿರುವ ಯಾವುದೇ ಸಂಪ್ರದಾಯಗಳನ್ನು ಮುರಿದಿಲ್ಲ. ವೈಷ್ಣವ ಬ್ರಾಹ್ಮಣರು ಲಡ್ಡುವನ್ನು ತಯಾರಿಸುವ ದೀರ್ಘಕಾಲದ ಸಂಪ್ರದಾಯವಿದೆ. ಈಗಲೂ, ಅದೇ ಪದ್ದತಿಯಿದೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಯಾವುದೇ ಗುತ್ತಿಗೆದಾರನ ಅಣತಿಯಂತೆ ಲಡ್ಡು ತಯಾರಿಸುವುದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಶುದ್ದಸುಳ್ಳು. 980 ಹಿಂದೂ ಸಮುದಾಯಕ್ಕೆ ಸೇರಿದ ಉದ್ಯೋಗಿಗಳು ಇದಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದು ಟಿಟಿಡಿ ಸ್ಪಷ್ಟ ಪಡಿಸಿದೆ.

Airtel ಗ್ರಾಹಕರಿಗೆ ಬೊಂಬಾಟ್ ನ್ಯೂಸ್, ಅತೀ ಕನಿಷ್ಠ ಬೆಲೆಗೆ 365 ದಿನದ ಪ್ಲಾನ್ ಘೋಷಿಸಿದ ಸಂಸ್ಥೆ !! ಏನೇನು ಪ್ರಯೋಜನ ಇದೆ ಗೊತ್ತಾ?!

Related News

Advertisement
Advertisement