For the best experience, open
https://m.hosakannada.com
on your mobile browser.
Advertisement

MS Dhoni: ಯಬ್ಬೋ.. ಹೊಸ ಟ್ರೆಂಡ್ ಸೃಷ್ಟಿಸಿಬಿಡ್ತು ಧೋನಿಯ ಹೊಸ ಅವತಾರ - ಭಾರೀ ಸಂಚಲನ ಸೃಷ್ಟಿಸಿದೆ ಹೇರ್ ಸ್ಟೈಲ್… ಕಪ್ಪು ಟೀ ಶರ್ಟ್, ಕನ್ನಡಕದಲ್ಲಿ ಮಿಂಚಿದ ಫೋಟೋಗಳು !

MS Dhoni : ಇದೀಗ ಧೋನಿ ಕ್ರಿಕೆಟ್ ವೃತ್ತಿಬದುಕಿನ ಸಂಧ್ಯಾಕಾಲದಲ್ಲಿದ್ದು, ಮತ್ತೊಮ್ಮೆ ವಿಂಟೇಜ್ ಧೋನಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಬಂದೊದಗಿದೆ.
08:41 AM Oct 04, 2023 IST | ವಿದ್ಯಾ ಗೌಡ
UpdateAt: 08:41 AM Oct 04, 2023 IST
ms dhoni  ಯಬ್ಬೋ   ಹೊಸ ಟ್ರೆಂಡ್ ಸೃಷ್ಟಿಸಿಬಿಡ್ತು ಧೋನಿಯ ಹೊಸ ಅವತಾರ    ಭಾರೀ ಸಂಚಲನ ಸೃಷ್ಟಿಸಿದೆ ಹೇರ್ ಸ್ಟೈಲ್… ಕಪ್ಪು ಟೀ ಶರ್ಟ್  ಕನ್ನಡಕದಲ್ಲಿ ಮಿಂಚಿದ ಫೋಟೋಗಳು
Advertisement

MS Dhoni: ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni), ಕಳೆದ ಒಂದೂವರೆ ದಶಕಗಳ ಕ್ರಿಕೆಟ್ ಬದುಕಿನಲ್ಲಿ ಹಲವಾರು ಬಾರಿ ತಮ್ಮ ಹೇರ್‌ಸ್ಟೈಲ್ ಮೂಲಕವೇ ಗಮನ ಸೆಳೆದಿದ್ದಾರೆ. ಈ ಪೈಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಹಿಡಿದು 2007ರ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವವರೆಗೆ ಇದ್ದ ಉದ್ದದ ಹೇರ್‌ಸ್ಟೈಲ್ MS Dhoni Hairstyle) ಹೆಚ್ಚು ಗಮನ ಸೆಳೆದಿತ್ತು. ಇದೀಗ ಧೋನಿ ಕ್ರಿಕೆಟ್ ವೃತ್ತಿಬದುಕಿನ ಸಂಧ್ಯಾಕಾಲದಲ್ಲಿದ್ದು, ಮತ್ತೊಮ್ಮೆ ವಿಂಟೇಜ್ ಧೋನಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಬಂದೊದಗಿದೆ.

Advertisement

ಹೌದು, ಪ್ರಖ್ಯಾತ ಕೇಶ ವಿನ್ಯಾಸಕಾರರಾಗಿರುವ ಅಲಿಮ್ ಹಕೀಂ, ಇದೀಗ ಧೋನಿಗೆ ಮತ್ತೊಮ್ಮೆ ಹೊಸ ಹೇರ್‌ಸ್ಟೈಲ್ ಮಾಡಿದ್ದು, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು (MS Dhoni Photos) ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಧೋನಿಯ ಹೊಸ ಅವತಾರ ಹೊಸ ಟ್ರೆಂಡ್ ಸೃಷ್ಟಿಸಿಬಿಡ್ತು. ಧೋನಿ ಕಪ್ಪು ಟೀ ಶರ್ಟ್, ಕನ್ನಡಕದಲ್ಲಿ ಮಿಂಚಿದ್ದಾರೆ.

ಸದ್ಯ ವೈರಲ್ ಆಗಿರುವ ಫೋಟೋಗಳಲ್ಲಿ ಧೋನಿ ಕಪ್ಪು ಟೀ ಶರ್ಟ್ ಮತ್ತು ಕನ್ನಡಕದಲ್ಲಿ ಹೊಸ ಕೇಶವಿನ್ಯಾಸದೊಂದಿಗೆ ಸಖತ್​​​ ಹ್ಯಾಂಡ್​​​​ಸಮ್​​​ ಆಗಿ ಕಾಣಿಸಿಕೊಂಡಿದ್ದಾರೆ. ಧೋನಿ ಮತ್ತೊಮ್ಮೆ ತಮ್ಮ ಕೂದಲನ್ನು ಉದ್ದವಾಗಿ ಬೆಳೆಸಿದ್ದು, ಅವರು ಹಳೆಯ ಹೇರ್​​​ ಸ್ಟೈಲ್​​​​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ತಮ್ಮ ಹೊಸ ಹೇರ್ ಸ್ಟೈಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಹೆಚ್ಚು ಸದ್ದು ಮಾಡುತ್ತಿದ್ದಾರೆ.

Advertisement

ಇದನ್ನೂ ಓದಿ: Viral News: ಸರ್ಕಾರಿ ಆಸ್ಪತ್ರೆಯಲ್ಲಿ 31 ಸಾವು - ಹಾಸ್ಪಿಟಲ್ ಡೀನ್ ಕೈಯಲ್ಲೇ ಶೌಚಾಲಯ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ !!

Advertisement
Advertisement
Advertisement