For the best experience, open
https://m.hosakannada.com
on your mobile browser.
Advertisement

Village of Bachelors: ಹೆಣ್ಣು ಮಕ್ಕಳು ಕಾಲಿಡಲು ಒಲ್ಲದ ವಿಚಿತ್ರ ಗ್ರಾಮವಿದು; ‘ವರ್ಜಿನ್ ವಿಲೇಜ್’ ವಿಶೇಷತೆ ಏನು?

01:25 PM Feb 03, 2024 IST | ಹೊಸ ಕನ್ನಡ
UpdateAt: 01:33 PM Feb 03, 2024 IST
village of bachelors  ಹೆಣ್ಣು ಮಕ್ಕಳು ಕಾಲಿಡಲು ಒಲ್ಲದ ವಿಚಿತ್ರ ಗ್ರಾಮವಿದು  ‘ವರ್ಜಿನ್ ವಿಲೇಜ್’ ವಿಶೇಷತೆ ಏನು

Vergin Village: ಪ್ರಪಂಚದಲ್ಲಿ ಒಂದು ವಿಸ್ಮಯವಾದ ಗ್ರಾಮವಿದೆ. ಆ ಗ್ರಾಮದಲ್ಲಿ ಹುಡುಕಿದರೂ ಒಂದು ಹೆಣ್ಣಿನ ಸುಳಿವೂ ಸಿಗುವುದಿಲ್ಲ. ಬರೀ ಪುರುಷರೇ ತುಂಬಿರುವ ಈ ಗ್ರಾಮವನ್ನು ವರ್ಜಿನ್ ವಿಲೇಜ್ ಎಂದು ಕರೆಯುತ್ತಾರೆ. ಈ ಗ್ರಾಮದಲ್ಲಿರುವ ಪುರುಷರನ್ನು ವಿವಾಹವಾಗಲು ಒಬ್ಬ ಮಹಿಳೆ ಸಹ ಮುಂದೆ ಬರುವುದಿಲ್ಲ. ಕಾರಣ ಕೇಳಿದರೆ ನಿಮಗೆ ಅಚ್ಚರಿಯಾಗುತ್ತದೆ.

Advertisement

ಇದನ್ನೂ ಓದಿ: Congress : ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ- ಇಲ್ಲಿದೆ ಬಿಗ್ ಅಪ್ಡೇಟ್!!

ಈ ಗ್ರಾಮ ಇರುವುದು ನಮ್ಮ ಭಾರತದಲ್ಲೇ. ಬಿಹಾರದ ಒಂದು ಕುಗ್ರಾಮದಲ್ಲಿ ಬರೀ ಗಂಡಸರೇ ವಾಸವಾಗಿದ್ದಾರೆ. ಸುಮಾರು 50 ವರ್ಷಗಳಿಂದ ಈ ಗ್ರಾಮದಲ್ಲಿರುವ ಪುರುಷರನ್ನು ವಿವಾಹವಾಗಲು ಒಬ್ಬೆ ಒಬ್ಬಳು ಯುವತಿಯು ಸಹ ಮುಂದೆ ಬರುತ್ತಿಲ್ಲ. ಈಗಾಗಿ ಅಲ್ಲಿನ ಪುರುಷರು ಅವಿವಾಹಿತವಾಗಿದ್ದರೆ. ಇದು ತುಸು ವಿಚಿತ್ರವಾಗಿದ್ದರೂ ಇದು ಸತ್ಯವಾದದ್ದು. ಈ ವಿಚಿತ್ರಕ್ಕೆ ಕಾರಣ ಎಂಬುದನ್ನು ನೋಡೋಣ.

Advertisement

ಬರ್ವಾನ್ ಕಲಾ ಗ್ರಾಮದಲ್ಲಿ ಮಹಿಳೆಯರ ವಾಸ ಇಲ್ಲದಿರಲು ಕಾರಣವೇನು?

ಪಾಟ್ನಾ ದಿಂದ 300 ಕಿಲೋಮೀಟರ್ ದೂರದಲ್ಲಿ ಬರ್ವಾನ್ ಗ್ರಾಮವಿದೆ. ಈ ಗ್ರಾಮಕ್ಕೆ ಹೋಗುವಾಗ ಕಾಡು ಬಂಡೆಗಳ ಮಧ್ಯೆ ಹೋಗಬೇಕು. ಆ ಗ್ರಾಮವನ್ನು ತಲುಪಲು ಒಂದೇ ಒಂದೇ ಮಾರ್ಗವಿದೆ. ಮೂಲ ಸೌಕರ್ಯಗಳ ಕೊರತೆ ಇರುವುದರಿಂದ ಮಹಿಳೆಯರು ವಿವಾಹವಾಗಲು ಒಪ್ಪುತ್ತಿಲ್ಲ. ಆದರೆ 2017 ರಲ್ಲಿ ಕೇವಲ ಒಬ್ಬ ಯುವಕ ಮದುವೆಯಾಗಿ 'ಏಕೈಕ ವಿವಾಹಿತ' ಎಂಬ ವಿಶ್ವ ದಾಖಲೆಯನ್ನು ಬರೆದ.

ಗ್ರಾಮದ ಏಕೈಕ ವಿವಾಹಿತ ಕತೆ:

ಗ್ರಾಮಸ್ಥರೆಲ್ಲ ಸೇರಿ ಗುಡ್ಡ ಕಾಡು ಕಡಿದು 6 ಕಿಲೊಮೀಟರ್ ರಸ್ತೆಯನ್ನು ನಿರ್ಮಿಸಿದ್ದಾರೆ. ಅಜಯ್ ಕುಮಾರ್ ಎಂಬಾತ ಮೊದಲ ಬಾರಿಗೆ 2017 ರಲ್ಲಿ ಮದುವೆಯಾಗಿ ಗ್ರಾಮಕ್ಕೆ ಬಂದನು. ಆತನನ್ನು ಗ್ರಾಮದವರು ವಿವಿಐಪಿ ಯಂತೆ ಗ್ರಾಮಕ್ಕೆ ಸ್ವಾಗತಿಸುತ್ತಾರೆ. ಬಹಳ ವಿಜೃಂಭಣೆಯಿಂದ ಮದುವೆ ಕಾರ್ಯಗಳನ್ನು ಮಾಡುತ್ತಾರೆ. ಆದಾದ ಬಳಿಕ ಇಲ್ಲಿಯ ವರೆಗೆ ಮದುವೆ ನಡೆದಿಲ್ಲ..

Advertisement
Advertisement