For the best experience, open
https://m.hosakannada.com
on your mobile browser.
Advertisement

ತಾಲೂಕು ಸ್ವೀಪ್ ಸಮಿತಿಯಿಂದ ತಾ.ಪಂ. ಸಭಾಂಗಣದಲ್ಲಿ ಸಾರ್ವತ್ರಿಕ ಚುನಾವಣೆ ಕುರಿತು ತರಬೇತಿ

04:49 PM Feb 29, 2024 IST | ಹೊಸ ಕನ್ನಡ
UpdateAt: 04:49 PM Feb 29, 2024 IST
ತಾಲೂಕು ಸ್ವೀಪ್ ಸಮಿತಿಯಿಂದ ತಾ ಪಂ  ಸಭಾಂಗಣದಲ್ಲಿ ಸಾರ್ವತ್ರಿಕ ಚುನಾವಣೆ ಕುರಿತು ತರಬೇತಿ

Sullia: ಸ್ವೀಪ್‌ ಸಮಿತಿ ವತಿಯಿಂದ 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಸುಳ್ಯ (Sullia)ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಶಾಲಾ ಕಾಲೇಜುಗಳ ಇ.ಎಲ್.ಸಿ ಸಂಚಾಲಕರಿಗೆ, ಚುನಾವಣಾ ಪ್ರಚಾರ ರಾಯಭಾರಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಸ್ವೀಪ್‌ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮ ಫೆ.28 ರಂದು ನಡೆದಿತ್ತು. ಹಾಗೂ ಒಂದು ದಿನದ ಮಟ್ಟಿಗೆ ಸ್ವೀಪ್‌ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಸುಳ್ಯ ತಾಲೂಕು ತಹಶೀಲ್ದಾರ್‌ ಮಂಜುನಾಥ್‌ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಚುನಾವಣಾ ಗೀತೆಯನ್ನು ಶಿಕ್ಷಕ ಹರಿಪ್ರಸಾದ್‌ ಅವರು ಹಾಡಿ, ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು.

Advertisement

ತಾಲೂಕು ಮಟ್ಟದ ತರಬೇತುದಾರ ಹಾಗೂ ಶಾರದಾ ಪಿ.ಯು. ಕಾಲೇಜು ಉಪನ್ಯಾಸಕರಾದ ದಾಮೋದರ ರವರು ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಗೂ ಚುನಾವಣಾ ಪ್ರಚಾರದ ಅವಶ್ಯಕತೆಯನ್ನು, ಮಹತ್ವವನ್ನು ಹೇಳಿದರು. ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸುವ ಕೆಲಸವನ್ನು ಜಿಲ್ಲಾ ಮಟ್ಟದ ತರಬೇತುದಾರರಾದ ಸುಳ್ಯ ಸ.ಪ್ರ.ದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಾನಂದರು ಮಾಡಿದರು. ಶಿಕ್ಷಕಿ ಶ್ರೀಮತಿ ಅನ್ನಪೂರ್ಣೇಶ್ವರಿ ಪ್ರತಿಜ್ಞಾ ವಿಧಿ ಬೋಧಿಸಿದರು.

ವೇದಿಕೆಯ ಮೇಲೆ ಉಪ ತಹಶೀಲ್ದಾರ್ ಚಂದ್ರಕಾಂತ್ ಹಾಗೂ ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ ಕುಮಾರಿ ಬಿ.ಎಸ್. ಉಪಸ್ಥಿತರಿದ್ದರು. ತರಬೇತುದಾರರಾದ ಡಾ. ಜಯಶ್ರೀ ಕೆ., ಆನಂದ ಕೆ.ಎಸ್., ವಸಂತ ನಾಯಕ್ ಡಿ., ಪೂರ್ಣಿಮಾ ಟಿ., ಅನ್ನಪೂರ್ಣ ಹಾಜರಿದ್ದರು.

ಇದನ್ನೂ ಓದಿ : ಪಾಕಿಸ್ತಾನ ಬಿಜೆಪಿಗೆ ಮಾತ್ರ ಶತ್ರು, ನಮ್ಮ ಕಾಂಗ್ರೆಸ್'ಗೆ ಅಲ್ಲ !!ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ !!

Advertisement
Advertisement