Traffic Sign Board: 'ಯಾರನ್ನಾದರೂ ಮನೆಗೆ ಹಿಂಬಾಲಿಸಿ' ಎಂಬ ಬೆಂಗಳೂರಿನ ಟ್ರಾಫಿಕ್ ಸೂಚನ ಫಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್
Traffic Sign Board: ಬೆಂಗಳೂರಿನ ಟ್ರಾಫಿಕ್ ಸೂಚನಾ ಫಲಕವು ರಸ್ತೆ ಸುರಕ್ಷತೆಯ ಬಗ್ಗೆ ಸಂದೇಶವನ್ನು ನೀಡುವುದಕ್ಕಾಗಿ ಬಳಸಿರುವ ನೂತನ ವಿಧಾನದಿಂದಾಗಿ ವೈರಲ್ ಆಗಿದೆ.
ಎಕ್ಸ್ನಲ್ಲಿ ಹಂಚಿಕೊಳ್ಳಲಾದ ಸೂಚನಾ ಫಲಕಕ್ಕೆ, ನೆಟ್ಟಿಗರಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರುತ್ತಿದೆ. ಕೆಲವರು ಅದರ ಬಗ್ಗೆ ತಮಾಷೆ ಮಾಡಿದ್ದಾರೆ ಮತ್ತು ಕೆಲವರು ಈ ಹೊಸ ವಿಧಾನವನ್ನು ಟೀಕಿಸಿದ್ದಾರೆ.
ಎಕ್ಸ್ ಬಳಕೆದಾರ ಸುಮುಖ್ ರಾವ್ ಎಂಬುವವರು ಹಂಚಿಕೊಂಡ ಸೂಚನಾ ಫಲಕವು ಎರಡು ವಿಭಿನ್ನ ಫಾಂಟ್ ಗಾತ್ರಗಳಲ್ಲಿ ಬರೆಯಲಾದ ಪದಗಳಿವೆ. "ಇದು ಉತ್ತಮ ಸಂಕೇತವೆಂದು ಯಾರು ಭಾವಿಸಿದರು? ಅದನ್ನು ಹಾದುಹೋಗುವಾಗ ತುಂಬಾ ಕೆಟ್ಟದಾದ ಅರ್ಥ ನೀಡುತ್ತದೆ ಮತ್ತು ನೀವು ಸಣ್ಣ ಅಕ್ಷರಶೈಲಿಯಲ್ಲಿ ಪಠ್ಯವನ್ನು ಬರೆದಿರುವುದರಿಂದ ಅದು ಕಾಣುವುದಿಲ್ಲ "ಎಂದು ರಾವ್ ಸೈನ್ಬೋರ್ಡ್ನ ಚಿತ್ರವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ. ಕಬ್ಬನ್ ಪಾರ್ಕ್ ಪ್ರದೇಶದ ಬಳಿ ಫಲಕವನ್ನು ಗಮನಿಸಿದ್ದೇನೆ ಎಂದು ಅವರು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಮೊದಲ ನೋಟದಲ್ಲಿ, ಸೈನ್ಬೋರ್ಡ್ನಲ್ಲಿರುವ ದೊಡ್ಡ, ದಪ್ಪ ಅಕ್ಷರಗಳು, "ಫಾಲೋ ಸಮ್ಒನ್ ಹೋಮ್" ಎಂದು ಬರೆಯಲ್ಪಟ್ಟಿವೆ. ಆದರೆ ಹತ್ತಿರದಿಂದ ನೋಡಿದಾಗ, ನಿಜವಾದ ಸಂದೇಶವು ಸ್ಪಷ್ಟವಾಗುತ್ತದೆ. ಈ ಪ್ರತಿಯೊಂದು ಪದಗಳ ಕೆಳಗೆ ದಪ್ಪ ಅಕ್ಷರಗಳಲ್ಲಿ ಸಣ್ಣ ಅಕ್ಷರಶೈಲಿಯಲ್ಲಿ ಬರೆದಿರುವ ಪಠ್ಯವು ಸರಿಯಾದ ಸಂದೇಶವೇನು ಎಂಬುದನ್ನು ತಿಳಿಸುತ್ತದೆ.
"ಸಂಚಾರ ನಿಯಮಗಳನ್ನು ಪಾಲಿಸಿ. ಯಾರಾದರೂ ನಿಮಗಾಗಿ ಮನೆಯಲ್ಲಿ ಕಾಯುತ್ತಿದ್ದಾರೆ" ಎಂದು ಸೂಚನಾ ಫಲಕದ ಮೇಲೆ ಬರೆಯಲಾಗಿದೆ.