ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Israel Airstrike : ಹಮಾಸ್ ಉನ್ನತ ಮಿಲಿಟರಿ ಕಮಾಂಡರ್ ಮಾರ್ವಾನ್ ಇಸ್ಸಾ ಹತ್ಯೆ

06:41 AM Mar 20, 2024 IST | ಹೊಸ ಕನ್ನಡ
UpdateAt: 06:41 AM Mar 20, 2024 IST
Advertisement

ಇಸ್ರೇಲಿ ರಕ್ಷಣಾ ಪಡೆಗಳು ( ಐಡಿಎಫ್ ) ನಡೆಸಿದ ವಾಯುದಾಳಿಯಲ್ಲಿ ಹಮಾಸ್ನ ಉನ್ನತ ಮಿಲಿಟರಿ ಕಮಾಂಡರ್ ಮಾರ್ವಾನ್ ಇಸ್ಸಾ ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ ಖಚಿತಪಡಿಸಿದ್ದಾರೆ.

Advertisement

ಇದನ್ನೂ ಓದಿ: Actress Kiara: ಐಸ್-ಬ್ಲೂ ಗೌನ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ನಟಿ ಕಿಯಾರ

ಇನ್ನು ಹಮಾಸ್ ನ ಉಳಿದ ಪ್ರಮುಖ ನಾಯಕರು ತಲೆಮರೆಸಿಕೊಂಡಿದ್ದು, ಅವರು ಸುರಂಗ ಆಳದಲ್ಲಿ ಹುದುಗಿರುವ ಸಾಧ್ಯತೆಯಿದ್ದು ಅವರಿಗೂ ಇದೇ ರೀತಿಯಲ್ಲಿ ಅವರಿಗೂ ಸಹ ನ್ಯಾಯ ಒದಗಿಸಲಾಗುತ್ತದೆ" ಎಂದು ಅವರು ಹೇಳಿದರು. ಆದಾಗ್ಯೂ , ಇಸ್ರೇಲ್ ಇಸಾನನ್ನು ಕೊಂದಿರುವುದನ್ನು ಹಮಾಸ್ ಇನ್ನೂ ಖಚಿತಪಡಿಸಿಲ್ಲ .

Advertisement

ಇದಕ್ಕೂ ಮೊದಲು ಮಾರ್ಚ್ 11ರಂದು , ಐ . ಡಿ . ಎಫ್ . ಕೇಂದ್ರ ಗಾಜಾದ ಭೂಗತ ಪ್ರದೇಶದ ಮೇಲೆ ಮಾರ್ಚ್ 9 - 10ರಂದು ನಡೆಸಿದ ವಾಯುದಾಳಿಯು ಇಸ್ಸಾವನ್ನು ಗುರಿಯಾಗಿಸಿಕೊಂಡಿತ್ತು ಎಂದು ಹೇಳಿದೆ. ಈತ ಅಕ್ಟೋಬರ್ 7ರಂದು ಇಸ್ರೇಲಿನ ಮೇಲೆ ಹಮಾಸ್ನ ದಾಳಿಯ ಯೋಜಕರಲ್ಲಿ ಒಬ್ಬನೆಂದು ಗುರುತಿಸಲಾಗಿದೆ.

ಇಸ್ರೇಲಿ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರ ಪ್ರಕಾರ , ಇಸ್ಸಾ ಹಮಾಸ್ನ ಸಶಸ್ತ್ರ ವಿಭಾಗವಾದ ಎಝೆಡಿನ್ ಅಲ್ - ಖಸ್ಸಮ್ ಬ್ರಿಗೇಡ್ಗಳ ಮುಖ್ಯಸ್ಥರಾಗಿರುವ ಮೊಹಮ್ಮದ್ ಡೀಫ್ನ ಉಪನಾಯಕನಾಗಿದ್ದ ಎಂದು ಹೇಳಿದ್ದಾರೆ.

Advertisement
Advertisement