ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Tirumala Tirupati:ತಿರುಪತಿಯಲ್ಲಿ ಚಂದ್ರಬಾಬು ನಾಯ್ಡು ಹವಾ ಶುರು! ತಿರುಮಲ ಭಕ್ತರಿಗೆ ಹಲವು ಗುಡ್​ ನ್ಯೂಸ್ ಕೊಟ್ಟ ​TTD!

Tirumala Tirupati: ಚಂದ್ರಬಾಬು ನಾಯ್ಡು ಅಧಿಕಾರಕ್ಕೆ ಮರಳುತ್ತಿದ್ದಂತೆ ಮುಖ್ಯವಾಗಿ ತಿರುಪತಿ ತಿಮ್ಮಪ್ಪನ ಸೇವೆಯಲ್ಲಿ ತೊಡಗಿದ್ದಾರೆ. ಅರ್ಥಾತ್​​ ತಿಮ್ಮಪ್ಪನ ಭಕ್ತರಿಗೆ ಅನೇಕ ಗುಡ್​ ನ್ಯೂಸ್​​ಗಳನ್ನು ನೀಡಿದ್ದಾರೆ.
04:22 PM Jun 22, 2024 IST | ಕಾವ್ಯ ವಾಣಿ
UpdateAt: 04:22 PM Jun 22, 2024 IST
Advertisement

Tirupati Laddu: ಭಾರತದ ಶ್ರೀಮಂತ ದೇವಾಲಯವಾದ 'ಕಲಿಯುಗದ ವೈಕುಂಠ’ ಅಂತಾನೇ ಕರೆಯಲ್ಪಡುವ, ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಪತಿ ತಿಮ್ಮಪ್ಪನ ದೇವಸ್ಥಾನ (Tirupati Balaji Temple ) ಕ್ಕೆ ಪ್ರತಿ ನಿತ್ಯ ಲಕ್ಷಾಂತರ ಭಕ್ತರಿಂದ ಪೂಜೆಗೊಳ್ಳುತ್ತದೆ. ಆದರೆ ವರ್ಷಗಳಿಂದ ತಿರುಪತಿ ಪ್ರಸಾದದ ಸ್ವಾದ ಕಳೆದೋಗಿದೆ ಎಂದು ಭಕ್ತರು ಬೇಸರ ಸಂಗಾತಿ ಪ್ರಸ್ತಾಪ ಮಾಡಿದ್ದರು. ಇದೀಗ ಚಂದ್ರಬಾಬು ನಾಯ್ಡು ಅಧಿಕಾರಕ್ಕೆ ಮರಳುತ್ತಿದ್ದಂತೆ ಮುಖ್ಯವಾಗಿ ತಿರುಪತಿ ತಿಮ್ಮಪ್ಪನ ಸೇವೆಯಲ್ಲಿ ತೊಡಗಿದ್ದಾರೆ. ಅರ್ಥಾತ್​​ ತಿಮ್ಮಪ್ಪನ ಭಕ್ತರಿಗೆ ಅನೇಕ ಗುಡ್​ ನ್ಯೂಸ್​​ಗಳನ್ನು ನೀಡಿದ್ದಾರೆ.

Advertisement

Canara Bank Recruitment 2024: ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ ಅವಕಾಶ! ಕೂಡಲೇ ಅರ್ಜಿ ಸಲ್ಲಿಸಿ!

ಹೌದು, ತಿಮ್ಮಪ್ಪನ ಸನ್ನಿಧಾನದಲ್ಲಿ ಅಕ್ರಮಗಳು/ ಅನಾಚಾರಗಳಿಗೆ ಆಕ್ರೋಶಗೊಂಡಿದ್ದ ಭಕ್ತರಿಗೆ ತುಸು ನೆಮ್ಮದಿಯಾಗಿದೆ. ಮೊದಲು ಬೆಟ್ಟದ ಸ್ವಚ್ಛತೆಗೆ ಆದ್ಯತೆ ಕೊಟ್ಟಿದ್ದು, ಇನ್ನು ಗುಡಿಯ ಒಳಗಡೆಯೂ ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆಯೂ, ಒಟ್ಟಾರೆಯಾಗಿ ತಿಮ್ಮಪ್ಪನ ಭಕ್ತರ ಭಾವನೆಗಳನ್ನು ಘಾಸಿಗೊಳಿಸದಂತೆಯೂ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಗೆ ಚಂದ್ರಬಾಬು ನಾಯ್ಡು ಸೂಚನೆಗಳನ್ನು ರವಾನಿಸಿದ್ದಾರೆ.

Advertisement

ಇನ್ನು ತಿರುಮಲದಲ್ಲಿ ವಿತರಿಸುವ ತಿಮ್ಮಪ್ಪನ ಲಡ್ಡು (Tirupati Laddu) ಸ್ವಾದಿಷ್ಟ ಕಳೆದುಕೊಂಡಿದೆ ಎಂದು ಭಕ್ತರು ಇತ್ತೀಚಿನ ವರ್ಷಗಳಲ್ಲಿ ಒಂದೇ ಸಮನೆ ದೂರುತ್ತಿದ್ದರು. ಸದ್ಯ TTD ನೂತನ ಸಾರಥಿ ಜೆ . ಶ್ಯಾಮಲಾ ರಾವ್ ಅವರು ಗುಣಮಟ್ಟದ ತುಪ್ಪ, ಗುಣಮಟ್ಟದ ಕಡಲೆ ಬೇಳೆ ಮತ್ತು ಗುಣಮಟ್ಟದ ಏಲಕ್ಕಿ ಮತ್ತಿತರ ಗುಣಮಟ್ಟದ ಪರಿಕರಗಳನ್ನು ಬಳಸಿ ಲಡ್ಡುಗಳನ್ನು ರುಚಿಕರವಾಗಿ ತಯಾರಿಸುವಂತೆ ಸೂಚಿಸಿದ್ದಾರೆ. ಸದ್ಯ ಲಡ್ಡೂ ತಯಾರಿಕೆಯಲ್ಲಿ ಆಗುತ್ತಿರುವ ತೊಂದರೆಗಳು ಹಾಗೂ ಗುಣಮಟ್ಟದ ಟೀಕೆಗೆ ಕಾರಣಗಳೇನು ಎಂದು ನೂತನ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಮಿಕರಿಂದ ಕೇಳಿ ತಿಳಿದುಕೊಂಡು, ಒಂದು ವೇಳೆ ಕೆಲಸದ ಹೊರೆ ಹೆಚ್ಚಾದರೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸುವಂತೆಯೂ, ಉನ್ನತ ಗುಣಮಟ್ಟದ ಪದಾರ್ಥಗಳನ್ನು ಬಳಸುವಂತೆ ನೂತನ ಇಒಗೆ ಮನವಿ ಮಾಡಲಾಗಿದೆ.

Actor Darshan: ದಾಸನಿಗೆ ಜೈಲುವಾಸ; ಪರಪ್ಪನ ಅಗ್ರಹಾರಕ್ಕೆ ಡಿ ಬಾಸ್‌; ಜುಲೈ 4 ರವರೆಗೆ ನಟ ದರ್ಶನ್‌ ಜೈಲುಪಾಲು

Related News

Advertisement
Advertisement