For the best experience, open
https://m.hosakannada.com
on your mobile browser.
Advertisement

Hair Care: ಈ ಹಣ್ಣಿನ ಎಲೆಯಿದ್ದರೆ ಸಾಕು ಬಿಳಿ ಕೂದಲಾಗಂದಂತೆ ತಡೆಯಬಹುದು!!ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳಲು ಕಾರಣ ಏನು ??

07:19 AM Feb 10, 2024 IST | ಹೊಸ ಕನ್ನಡ
UpdateAt: 07:28 AM Feb 10, 2024 IST
hair care  ಈ ಹಣ್ಣಿನ ಎಲೆಯಿದ್ದರೆ ಸಾಕು ಬಿಳಿ ಕೂದಲಾಗಂದಂತೆ ತಡೆಯಬಹುದು  ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳಲು ಕಾರಣ ಏನು
Advertisement

ನಮ್ಮ ದೇಹದಲ್ಲಿನ ಮೆಲಾಲನ್ ಕೊರತೆಯಿಂದ ಬಿಳಿಕೂದಲಾಗುತ್ತದೆ. ಕಡಿಮೆ ಪೋಷಕಾಂಶಗಳನ್ನು ಸೇವಿಸುವುದರಿಂದ ಸಹ ಇದು ಸಂಭವಿಸುತ್ತದೆ.

Advertisement

ಇದನ್ನೂ ಓದಿ: Arecanut: ಅಡಿಕೆ ಕಟಾವನ್ನು ಹೀಗೆ ಮಾಡಿ!!

ಮಾವಿನ ಎಲೆಗಳಿಂದ ಕೂದಲನ್ನು ಕಪ್ಪಾಗಿಸಬಹುದು.

Advertisement

ನೈಸರ್ಗಿಕವಾಗಿ ಮಾವಿನ ಎಲೆಗಳಿಂದ ಬಿಳಿ ಕೂದಲನ್ನು ಕಪ್ಪಾಗಿಸಬಹುದಾಗಿದೆ.

ಮಾವಿನ ಎಲೆಗಳಲ್ಲಿ ಕಂಡುಬರುವ ಪೋಷಕಾಂಶಗಳು 

ಮಾವಿನ ಎಲೆಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ತಾಮ್ರ ಮುಂತಾದ ಅಂಶಗಳು ಕಂಡುಬರುತ್ತವೆ. ಜೊತೆಗೆ ಮಾವಿನ ಎಲೆಗಳಲ್ಲಿ ಫಿನಾಲ್ ಎಂಬ ಆ್ಯಂಟಿ ಆಕ್ಸಿಡೆಂಟ್ ಇರುತ್ತದೆ. ಇದು ನಮ್ಮ ಕೂದಲನ್ನು ಬಿಳಿಯಾಗುವುದನ್ನು ತಡೆಯುತ್ತದೆ.

ಹಚ್ಚುವ ಮೊದಲ ವಿಧಾನ

ಮೊದಲು ಮಾವಿನ ಎಲೆಗಳನ್ನು ಕಿತ್ತು ಪುಡಿಯನ್ನು ತಯಾರಿಸಿ ಪೇಸ್ಟ್ ಮಾಡಿಕೊಳ್ಳಿ. ಕೂದಲಿಗೆ ಹಚ್ಚಿ ಆರ್ಧ ಗಂಟೆ ಬಿಟ್ಟು ತೊಳೆಯಿರಿ. ಇದನ್ನು ಸರಿಯಾಗಿ ಮಾಡಿದರೆ ಬಿಳಿ ಕೂದಲನ್ನು ಕಡಿಮೆ ಮಾಡಬಹುದು.

ಎರಡನೇ ವಿಧಾನ

ಮೊದಲಿಗೆ ಮಾವಿನ ಎಲೆಗಳನ್ನು ಪೇರಳೆ ಎಲೆಗಳೊಂದಿಗೆ ತೆಗೆದುಕೊಂಡು ಒಂದು ಪಾತ್ರೆಯಲ್ಲಿ ನೀರಿನೊಂದಿಗೆ ಚೆನ್ನಾಗಿ ಕುದಿಸಿ. ನೀರಿನ ಬಣ್ಣ ಬದಲಾದ ಕೂಡಲೇ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ ತಣ್ಣಗಾಗಲು ಬಿಡಿ. ಈ ನೀರನ್ನು ತಲೆಯ ಬುಡಕ್ಕೆ ಹಚ್ಚಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಕೂದಲು ಕಪ್ಪಾಗುವುದು ಮಾತ್ರವಲ್ಲದೆ ಬಿಳಿ ಕೂದಲು ಬೆಳೆಯುವುದು ಕಡಿಮೆಯಾಗುತ್ತದೆ.

Advertisement
Advertisement
Advertisement