Railway: ರೈಲ್ವೇ ಪ್ರಯಾಣಿಕರ ಗಮನಕ್ಕೆ: ರಾಜ್ಯದ ಈ ಮಾರ್ಗಗಳಲ್ಲಿ ರೈಲುಗಳ ಸಮಯ ಬದಲಾವಣೆ ಪ್ರಕಟಣೆ!
Railway: ರೈಲ್ವೆ (Railway ) ವಿಭಾಗದಲ್ಲಿ ಈಗಾಗಲೇ ಹೆಚ್ಚಿನ ಬೆಳವಣಿಗೆ, ಅಭಿವೃದ್ಧಿಯನ್ನು ಕಾಣುವುದರ ಜೊತೆ ಜೊತೆಗೆ ಜನರ ಕ್ಷೇಮ ಮತ್ತು ರಕ್ಷಣೆಯ ದೃಷ್ಟಿಯಿಂದ ಹಲವಾರು ಹೊಸ ಯೋಜನೆ ಜಾರಿ ತಂದಿದೆ. ಇದೀಗ ರೈಲು ಪ್ರಯಾಣಿಕರಿಗೆ ಹೊಸ ಪ್ರಕಟಣೆ ಒಂದನ್ನು ಹೊರಡಿಸಲಾಗಿದೆ.
Darshan: ಜೈಲು ಸೇರಿದ ಬಳಿಕ ದರ್ಶನ್ ತೂಕದಲ್ಲಿ ಭಾರೀ ಇಳಿಕೆ – ಕಡಿಮೆ ಆದದ್ದೆಷ್ಟು ?
ಹೌದು, ಹುಬ್ಬಳ್ಳಿ-ಸೊಲ್ಲಾಪುರ (Hubballi-Solapur) ಪ್ಯಾಸೆಂಜರ್ ಸೇರಿಂದತೆ ರಾಜ್ಯದ ಒಂಭತ್ತು ರೈಲುಗಳ (Train) ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಸಮಯ ಬದಲಾವಣೆ ಮುಂದಿನ ವಾರದಿಂದ ಜಾರಿಗೆ ಬರಲಿದೆ. ಜೊತೆಗೆ ಹುಬ್ಬಳ್ಳಿ (Hubballi) ಮತ್ತು ಬೆಳಗಾವಿಯಿಂದ (Belagavi) ಸೂರತ್ನ ಉಧ್ನಾದಿಂದ ವಿಶೇಷ ರೈಲು ಬಿಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ (North western Railway) ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಹುಬ್ಬಳ್ಳಿ-ಸೊಲ್ಲಾಪುರ, ಹುಬ್ಬಳ್ಳಿ-ನರಸಾಪುರ ಅಮರಾವತಿ ಎಕ್ಸಪ್ರೆಸ್, ದಾದರ್-ಮೈಸೂರು ಶರಾವತಿ ವೀಕ್ಲಿ ಎಕ್ಸಪ್ರೆಸ್, ಅಜಮೀರ್-ಮೈಸೂರು ವೀಕ್ಲಿ ಎಕ್ಸಪ್ರೆಸ್, ಜೋದಪುರ-ಕೆಎಸ್ಆರ್ ವೀಕ್ಲಿ ಎಕ್ಸಪ್ರೆಸ್, ಗಾಂಧಿದಾಮ್-ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸಪ್ರೆಸ್, ದಾದರ್-ಪಾಂಡಿಚೇರಿ ವೀಕ್ಲಿ ಎಕ್ಸಪ್ರೆಸ್, ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಸೂಪರ್ ಫಾಸ್ಟ್ ಎಕ್ಸಪ್ರೆಸ್, ಮತ್ತು ದಾದರ್-ತಿರುನೆಲ್ವೇಲಿ ವೀಕ್ಲಿ ಎಕ್ಸಪ್ರೆಸ್ ರೈಲಿನ ಸಮಯ ಬದಲಾವಣೆಯಾಗಲಿದೆ.
ಸಮಯ ಬದಲಾವಣೆ ವಿವರ ಇಲ್ಲಿದೆ:
ರೈಲು ಸಂಖ್ಯೆ 07332: ಎಸ್ಎಸ್ಎಸ್ ಹುಬ್ಬಳ್ಳಿ-ಸೊಲ್ಲಾಪುರ ಪ್ಯಾಸೆಂಜರ್ ರೈಲು ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 1:15ಕ್ಕೆ ಹೊರಡಲಿದೆ.
ರೈಲು ಸಂಖ್ಯೆ 17226: ಎಸ್ಎಸ್ಎಸ್ ಹುಬ್ಬಳ್ಳಿ-ನರಸಾಪುರ ಅಮರಾವತಿ ಎಕ್ಸಪ್ರೆಸ್ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 1ಕ್ಕೆ ಹೊರಡಲಿದೆ.
ರೈಲು ಸಂಖ್ಯೆ 11005: ದಾದರ್-ಪಾಂಡಿಚೇರಿ ವೀಕ್ಲಿ ಎಕ್ಸಪ್ರೆಸ್ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಹೊರಡಲಿದೆ.
ರೈಲು ಸಂಖ್ಯೆ 11035: ದಾದರ್-ತಿರುನೆಲ್ವೇಲಿ ವೀಕ್ಲಿ ಎಕ್ಸಪ್ರೆಸ್ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಹೊರಡಲಿದೆ.
ರೈಲು ಸಂಖ್ಯೆ 11035: ಮೈಸೂರು-ಶರಾವತಿ ವೀಕ್ಲಿ ಎಕ್ಸಪ್ರೆಸ್ ಜು.18 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಹೊರಡಲಿದೆ.
ರೈಲು ಸಂಖ್ಯೆ 16209: ಅಜ್ಮೀರ್-ಮೈಸೂರು ವೀಕ್ಲಿ ಎಕ್ಸಪ್ರೆಸ್ ಜು.19 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆಗೆ ಹೊರಡಲಿದೆ.
ರೈಲು ಸಂಖ್ಯೆ 16507: ಜೋದಪುರ್-ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸಪ್ರೆಸ್ ಜು.18 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆಗೆ ಹೊರಡಲಿದೆ.
ರೈಲು ಸಂಖ್ಯೆ 16505: ಗಾಂಧಿಧಾಮ್-ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸಪ್ರೆಸ್ ಜು.16 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆ ಅಥವಾ 02:15ಕ್ಕೆ ನಿರ್ಗಮಿಸಲಿದೆ.
ರೈಲು ಸಂಖ್ಯೆ 20656: ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಎಕ್ಸಪ್ರೆಸ್ ಜು.20 ರಿಂದ ಬೆಳಗ್ಗೆ 11ಕ್ಕೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಹೊರಡಲಿದೆ.
ಇನ್ನು ಹುಬ್ಬಳ್ಳಿ, ಬೆಳಗಾವಿಯಿಂದ ಸೂರತ್ನ ಉಧ್ನಾಗೆ ವಿಶೇಷ ರೈಲು
ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ, ಭಾರತೀಯ ರೈಲ್ವೆಯು ಬೆಳಗಾವಿ ಮತ್ತು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಉದ್ಘಾ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ವಿಶೇಷ ರೈಲು ವಿವರ ಇಲ್ಲಿದೆ.
ಜುಲೈ 10 ರಂದು, ಬೆಳಗಾವಿಯಿಂದ ಉದ್ಘಾಕ್ಕೆ ವಿಶೇಷ ರೈಲು (07354) ಸಂಚಾರ:
ಈ ರೈಲು ಜುಲೈ 10 ರಂದು ಬೆಳಗ್ಗೆ 10:30 ಗಂಟೆಗೆ ಬೆಳಗಾವಿಯಿಂದ ಹೊರಟು ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ ಕರಾಡ, ಸತಾರಾ, ಪುಣೆ, ಕಲ್ಯಾಣ್, ಭಿವಂಡಿ ರೋಡ್, ವಸಾಯಿ ರೋಡ್ ಪಾಲ್ವರ್, ವಾಪಿ ಮತ್ತು ವಲ್ಸಾರ್ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಮಧ್ಯರಾತ್ರಿ 2:45 ಕ್ಕೆ ಉದ್ಘಾ ನಿಲ್ದಾಣವನ್ನು ತಲುಪಲಿದೆ.
ಜುಲೈ 13 ರಂದು ಹುಬ್ಬಳ್ಳಿಯಿಂದ ಉಧ್ನಾಗೆ ವಿಶೇಷ ರೈಲು (07358) ಸಂಚಾರ:
ಈ ವಿಶೇಷ ರೈಲು ಜುಲೈ 13 ರಾತ್ರಿ 8:20 ಗಂಟೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಬಾದಾಮಿ, ಬಾಗಲಕೋಟಿ, ವಿಜಯಪುರ, ಸೋಲಾಪುರ, ದೌಂಡ್, ಪುಣೆ, ಲೋನಾವಲ್, ಕಲ್ಯಾಣ್, ಕಮಾನ್ ರೋಡ್, ಸಾಯಿ ರೋಡ್ ಮತ್ತು ವಾಸಿ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಸಂಜೆ 4:45 ಗಂಟೆಗೆ ಸೂರತ್ನ ಉಧ್ನಾ ನಿಲ್ದಾಣವನ್ನು ತಲುಪಲಿದೆ.
ಮುಂಗಡ ಬುಕಿಂಗ್ ಮತ್ತು ವೇಳಾಪಟ್ಟಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು www.enquiry.indianrail.gov.in ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಗೆ ಕರೆ ಮಾಡಿ.