For the best experience, open
https://m.hosakannada.com
on your mobile browser.
Advertisement

Viral Video : ಹುಳುಕು ಹಲ್ಲನ್ನು ಹುಡುಕಿ ಹುಡುಕಿ ಕೀಳುತ್ತೆ ಈ ಗಿಳಿ !! ಕೆಲವೇ ನಿಮಿಷಗಳಲ್ಲಿ 9 ಕೋಟಿ ವೀಕ್ಷಣೆ ಕಂಡ ವಿಡಿಯೋ!!

Viral Video: ಆದರೆ ಗಿಳಿ(Parrot)ಯೊಂದು ವೈದ್ಯರ ಈ ಕೆಲಸ ಮಾಡೈತ್ತದೆ ಎಂದರೆ ನೀವು ನಂಬುತ್ತೀರಾ? ಈ ವಿಡಿಯೋ ನೋಡಿದ ಮೇಲೆ ನೀವು ನಂಬಲೇಬೇಕು ಬಿಡಿ
02:11 PM Apr 01, 2024 IST | ಸುದರ್ಶನ್
UpdateAt: 02:13 PM Apr 01, 2024 IST
viral video   ಹುಳುಕು ಹಲ್ಲನ್ನು ಹುಡುಕಿ ಹುಡುಕಿ ಕೀಳುತ್ತೆ ಈ ಗಿಳಿ    ಕೆಲವೇ ನಿಮಿಷಗಳಲ್ಲಿ 9 ಕೋಟಿ ವೀಕ್ಷಣೆ ಕಂಡ ವಿಡಿಯೋ

Viral Video : ಸೋಷಿಯಲ್ ಮೀಡಿಯಾಗಳಲ್ಲಿ ದಿನಬೆಳಗಾದರೆ ಸಾಕು ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಅಷ್ಟೇ ಅಲ್ಲ ಕೆಲವೇ ಸಮಯದಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಕಾಣುತ್ತದೆ. ಅವುಗಳಲ್ಲಿ ಕೆಲವು ಭಾರೀ ವಿಶೇಷತೆಯಿಂದಲೂ ಕೂಡಿರುತ್ತದೆ. ಈ ನಾವು ಹೇಳ ಹೊರಟಿರುವ ವಿಡಿಯೋ ಕೂಡ ಅಂತದ್ದೇ.

Advertisement

ಇದನ್ನೂ ಓದಿ: New Delhi: ಏಪ್ರಿಲ್ 1 ರಿಂದ ಆದಾಯ ತೆರಿಗೆ ಪದ್ಧತಿಯಲ್ಲಿ ಹೊಸ ಬದಲಾವಣೆ ಇಲ್ಲ : ಹಣಕಾಸು ಸಚಿವಾಲಯ

https://www.instagram.com/reel/C2fty2ush0b/?igsh=MWloMGlyNDVobXVrZA==

Advertisement

ನೀವು ಹಲ್ಲು ಹುಳುಕಾದರೆ ಅಥವಾ ಹಲ್ಲು ನೋವಾದರೆ ದಂತ ವೈದ್ಯರ ಬಳಿ ಹೋಗಿ ತೋರಿಸಿ, ಕೀಳಿಸಿ ಬರುತ್ತೀರಿ ಅಲ್ಲವೇ? ಆದರೆ ಗಿಳಿ(Parrot)ಯೊಂದು ವೈದ್ಯರ ಈ ಕೆಲಸ ಮಾಡೈತ್ತದೆ ಎಂದರೆ ನೀವು ನಂಬುತ್ತೀರಾ? ಈ ವಿಡಿಯೋ ನೋಡಿದ ಮೇಲೆ ನೀವು ನಂಬಲೇಬೇಕು ಬಿಡಿ.

ಇದನ್ನೂ ಓದಿ: Clean Gas Burner: ಗ್ಯಾಸ್ ಬರ್ನರ್‌ ಕೊಳಕಾಗಿದೆಯೇ? ಈ ತಂತ್ರ ಅಳವಡಿಸಿ, ಕ್ಷಣಾರ್ಧದಲ್ಲಿ ಹೊಳಪು ಪಡೆಯಿರಿ

ಹೌದು, ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಭಾರೀ ವೈರಲ್(Viral Vedeio) ಆಗಿದೆ. ವೈರಲ್ ಆಗಿದ್ದು ಮಾತ್ರವಲ್ಲ ಕೆಲವೇ ಸಮಯದಲ್ಲಿ 9 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. ಅಂದಹಾಗೆ ಈ ವಿಡಿಯೋ ಬಾಲಕನ ಬಾಯಿಯಿಂದ ಗಿಳಿ ಹುಳುಕಾದ ಹಲ್ಲನ್ನು ಹುಡುಕಿ ತುಂಬಾ ನಾಜೂಕಾಗಿ ಕಿತ್ತು ಹಾಕುತ್ತದೆ. ಇದನ್ನು ನೋಡಿದವರು ಒಂದು ಕ್ಷಣ ಹುಬ್ಬೇರಿಸುವಂತಿದೆ. ಈ ವಿಡಿಯೋವನ್ನು bebeginsayfasi ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, 9 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ ಮತ್ತು 13 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. 7 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದಾರೆ.

ಅಂದಹಾಗೆ 1900ರಲ್ಲಿ ದಂತವೈದ್ಯಶಾಸ್ತ್ರ ಅನ್ವೇಷಣೆ ಆಯಿತು. 1899ರಲ್ಲಿದ್ದ ಜನರು ಹಲ್ಲು ಕೀಳಲು ಈ ವಿಧಾನ ಬಳಸುತ್ತಿದ್ದರು ಎಂದು ನೆಟ್ಟಿಗನೊಬ್ಬರ ಹಾಸ್ಯಚಟಾಕಿ ಹಾರಿಸಿದ್ದಾರೆ. ಜೊತೆಗೆ ಕೆಲವರು ಬಗೆಬಗೆಯಾಗಿ ಕಮೆಂಟಿಸಿದ್ದಾರೆ.

Advertisement
Advertisement