ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Hollywood Actress: ಈ ಖ್ಯಾತ ನಟಿ ತನ್ನನ್ನೇ ಕೊಲ್ಲೋಕೆ ಸುಪಾರಿ ಕೊಟ್ಟಿದ್ದಳಂತೆ! ಆಕೆ ಹೇಳಿದ ಕಾರಣ ಕೇಳಿದ್ರೆ ನೀವೇ ಶಾಕ್ ಆಗ್ತೀರಾ?

Hollywood Actress: ತನ್ನನು ಕೊಲ್ಲಲು ತಾನೇ ಸುಪಾರಿ ಕೊಡೋಕೆ ಸ್ವಲ್ಪ ಧಮ್ ಕೂಡಾ ಬೇಕು. ಹಾಗಿರುವಾಗ ಇಲ್ಲೊಬ್ಬಳು  ಸುಪ್ರಸಿದ್ಧ ನಟಿ (Hollywood Actress) ತನ್ನನ್ನೇ ಕೊಲ್ಲೋಕೆ ಸುಪಾರಿ ಕೊಟ್ಟಿದ್ದಳಂತೆ!
01:58 PM Aug 01, 2024 IST | ಕಾವ್ಯ ವಾಣಿ
UpdateAt: 01:58 PM Aug 01, 2024 IST
Advertisement

Hollywood Actress: ತನ್ನನು ಕೊಲ್ಲಲು ತಾನೇ ಸುಪಾರಿ ಕೊಡೋಕೆ ಸ್ವಲ್ಪ ಧಮ್ ಕೂಡಾ ಬೇಕು. ಹಾಗಿರುವಾಗ ಇಲ್ಲೊಬ್ಬಳು  ಸುಪ್ರಸಿದ್ಧ ನಟಿ (Hollywood Actress) ತನ್ನನ್ನೇ ಕೊಲ್ಲೋಕೆ ಸುಪಾರಿ ಕೊಟ್ಟಿದ್ದಳಂತೆ! ಹೌದು,  ನಟಿ ಏಂಜಲೀನಾ ಜೋಲೀ, ಜೀವನದಲ್ಲಿ ಕಷ್ಟಕರ ಸವಾಲುಗಳನ್ನು ಎದುರಿಸಲು ಸಾಧ್ಯ ಆಗದೆ  ಅಂಥ ಒಂದು ಸನ್ನಿವೇಶದಲ್ಲಿ ಆಕೆ ತನ್ನನ್ನೇ ಕೊಲ್ಲಲು ತಾನೇ ಹಿಟ್‌ಮ್ಯಾನ್‌ಗೆ ಸುಪಾರಿ ಕೊಟ್ಟ ವಿಚಾರವನ್ನು ಸ್ವತಃ ಆಕೆಯೇ ಬಹಿರಂಗ ಪಡಿಸಿದ್ದಾಳೆ. ಹೌದು, ಏಂಜಲಿನಾ ಜೋಲಿ ತನ್ನ ಜೀವನವನ್ನು ಕೊನೆಗೊಳಿಸಲು ಸುಪಾರಿ ಕಿಲ್ಲರ್ ಅನ್ನು ನೇಮಿಸಿಕೊಂಡಿದ್ದೆ ಎಂದು ನಟಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾಳೆ.

Advertisement

ಸಂದರ್ಶನವೊಂದರಲ್ಲಿ ಜೋಲೀ ತನ್ನ ಇಪ್ಪತ್ತರ ಹರೆಯದ ಆರಂಭದಲ್ಲಿ, ತಾನು ತೀವ್ರ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸಿದ್ದು, 22 ನೇ ವಯಸ್ಸಿನಲ್ಲಿ, ಬದುಕು ಸಾಕು, ತನ್ನನ್ನು ಯಾರಾದರೂ ಕೊಲ್ಲಬೇಕು ಎಂದು ಯೋಚನೆ ಮಾಡಿದ್ದಲ್ಲದೆ, ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ತಾನು ದುಃಖ ನೀಡಿದ್ದೇನೆ ಎಂಬುದು ಅವಳ ಭಾವನೆಯಾಗಿತ್ತು.  ಈ ದುಃಖಗಳಿಂದ ಹೊರ ಬರಲು ತನ್ನನ್ನು ಕೊಲ್ಲಲು ಯಾರನ್ನಾದರೂ ನೇಮಿಸಿಕೊಳ್ಳಬೇಕು ಎಂದುಕೊಂಡಳು.

ಆಕೆಗೆ ನ್ಯೂಯಾರ್ಕ್‌ನಲ್ಲಿ ಸುಪಾರಿ ಕೊಲೆಗಾರರನ್ನು ಹುಡುಕುವುದು ಅಷ್ಟು ಕಷ್ಟವೇನಿಲ್ಲ. ಅಂತೆಯೇ ಸುಪಾರಿ ಕಿಲ್ಲರ್ ಒಬ್ಬನನ್ನು ಹುಡುಕಿಕೊಂಡಳು. ಆತನಿಗೆ ದುಡ್ಡು ಕೂಡ ಕೊಟ್ಟಳು. ಅವನು ಸುಪಾರಿ ಕೊಲೆಗಾರ ಆಗಿರುವಂತೆ ಸಭ್ಯನೂ ಆಗಿದ್ದ. ನಿನ್ನ ತೀರ್ಮಾನ ಸರಿಯಲ್ಲ ಅನಿಸಿದರೆ ವಾಪಸ್ ಪಡೆಯಲು ಇನ್ನೂ ನಿನಗೆ ಟೈಮಿದೆ ಎಂದ. ಅವಳಿಗೆ ಅವನು ಎರಡು ತಿಂಗಳ ಟೈಮ್ ನೀಡಿದ. ಆದರೆ ಆಕೆ ಖಚಿತವಾಗಿದ್ದಳು. ಎಲ್ಲ ಪ್ಲಾನ್ ಮಾಡಿದ್ದಳು. ಇದೊಂದು ಆಕಸ್ಮಿಕ ಎಂದು ತಿಳಿಯುವಂತೆ ಯೋಜನೆ ಹಾಕಿದ್ದಳು. ಅಕೌಂಟ್‌ನಿಂದ ಸ್ವಲ್ಪ ಸ್ವಲ್ಪವೇ ಹಣವನ್ನು ವಿತ್‌ಡ್ರಾ ಮಾಡಿದ್ದಳು. ತನ್ನ ಸಾವು ಒಂದು ದರೋಡೆಯಂತೆ ಕಾಣುವಂತೆ ಯೋಜನೆ ರೂಪಿಸಿದ್ದಳು. ಯಾಕೆಂದರೆ ತಾನು ಆತ್ಮಹತ್ಯೆ ಮಾಡಿಕೊಂಡದ್ದು ಎಂದು ತಿಳಿದರೆ ತನ್ನ ಕುಟುಂಬಕ್ಕೆ ತುಂಬಾ ವೇದನೆಯಾಗಬಹುದು ಎಂದು ಭಾವಿಸಿದ್ದಳು.

Advertisement

ಆದರೆ ಸ್ವಲ್ಪವೇ ದಿನಗಳಲ್ಲಿ ಅವಳ ಜೀವನದಲ್ಲಿ ಒಳ್ಳೆಯ ಅವಕಾಶಗಳು ಬರತೊಡಗಿದವು. ಸಿನಿಮಾದಲ್ಲಿ ಖ್ಯಾತಿ ಬಂತು. ಖಿನ್ನತೆ ಕಡಿಮೆಯಾಯಿತು. ಕೂಡಲೇ ಆಕೆ ಮನಸ್ಸು ಬದಲಾಯಿಸಿದಳು. ಸುಪಾರಿ ವಾಪಸ್ ಪಡೆದಳು. ಆದರೆ ಸುಪಾರಿ ಕೊಲೆಗಾರನಿಗೆ ಸುಪಾರಿ ವಾಪಸ್ ಪಡೆಯಲು ಹೆಚ್ಚು ಹಣ ಕೊಡಬೇಕಾಯಿತು!

ಆದ್ದರಿಂದ ಜೋಲಿ ಪ್ರಕಾರ, ನಿಮ್ಮ ಹತ್ತಿರದವರು ಯಾರಾದರೂ ಖಿನ್ನತೆ ಅನುಭವಿಸುತ್ತಿದ್ದರೆ, ಆತ್ಮಹತ್ಯೆಯ ಯೋಚನೆಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದರೆ, ನೀವು ಖಂಡಿತವಾಗಿಯೂ  ಕಾಳಜಿವಹಿಸುವ ಅಗತ್ಯವಿದೆ. ಅವರ ಆಲೋಚನೆಗಳು ನಂಬಲಾಗದಷ್ಟು ದುಃಖಕರ ಮತ್ತು ಅಗಾಧವಾಗಿರಬಹುದು. ಅಂತಹ ನಿರ್ಣಾಯಕ ಕ್ಷಣದಲ್ಲಿ ನಿಮ್ಮ ಪ್ರತಿಕ್ರಿಯೆಯು ಅವರಿಗೆ ಪ್ರಮುಖವಾಗಿರುತ್ತದೆ. ಅಂಥ ಹೊತ್ತಿನಲ್ಲಿ ಅವರಿಗೆ ಅಗತ್ಯವಿರುವ ಸಹಾಯ ಮತ್ತು ಬೆಂಬಲ ನೀಡುವ ಮೂಲಕ ಆ  ವ್ಯಕ್ತಿಯನ್ನು ಉಳಿಸಿಕೊಳ್ಳಬಹುದು ಎನ್ನುತ್ತಾಳೆ ಜೋಲಿ.

Related News

Advertisement
Advertisement