BJP ತನ್ನಲ್ಲೇ ಉಳಿಸಿಕೊಳ್ಳಲು ಬಯಸಿದ ಪ್ರಬಲ, ಪ್ರಮುಖ ಖಾತೆಗಳಿವು !!
BJP: ಲೋಕಸಭಾ ಚುನಾವಣೆಯ(Lokasabha Election) ಫಲಿತಾಂಶ ಹೊರಬಂದ ಬಳಿಕ ಬಿಜೆಪಿ(BJP) ತನ್ನ NDA ಮಿತ್ರಪಕ್ಷಗಳೊಂದಿಗೆ ಸಭೆ ನಡೆಸಿ, ಬೆಂಬಲ ಪಡೆದು ಸರ್ಕಾರ ರಚನೆಗೆ ಮುಂದಾಗಿದೆ. ಜೂ. 8 ಕ್ಕೆ ನರೇಂದ್ರ ಮೋದಿ(Narendra Modi) ಯವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ನಡುವೆ ಮಿತ್ರ ಪಕ್ಷಗಳು ಪ್ರಬಲ ಖಾತೆಗಳಿಗೆ ಡಿಮ್ಯಾಂಡ್ ಮಾಡಿವೆ ಎನ್ನಲಾಗಿದ್ದು, ಬಿಜೆಪಿ ಮಾತ್ರ ತಾನು ಈ ಖಾತೆಗಳನ್ನು ಬಿಟ್ಟುಕೊಡುವುದಿಲ್ಲ ಎಂದಿದೆಯಂತೆ.
ಹೌದು, ನರೇಂದ್ರ ಮೋದಿಯವರು ಜೂನ್ 8ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದು ಅವರೊಂದಿಗೆ ಸಂಪುಟ ಸಚಿವರೂ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಮೊದಲು ಮಿತ್ರ ಪಕ್ಷಗಳಿಗೂ ಖಾತೆ ಹಂಚಿಕೆ ಮಾಡಬೇಕಿದೆ. ಆದರೆ ಬಿಹಾರ ಸಿಎಂ ನಿತೀಶ್ ಕುಮಾರ್(Nithish Kumar) ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು(Chandrababu Naidu) ಕಿಂಗ್ ಮೇಕರ್ ಆಗಿದ್ದು, ಪ್ರಬಲ ಖಾತೆಗಳನ್ನ ತಮಗೆ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಹಾಗಿದ್ರೆ ಬಿಜೆಪಿ ಇಟ್ಟುಕೊಳ್ಳಲು ಬಯಸಿದ ಹಾಗೂ ಮಿತ್ರ ಪಕ್ಷಗಳಿಗೆ ನೀಡಲು ಮುಂದಾದ ಖಾತೆಗಳು ಯಾವುವು ಎಂದು ತಿಳಿಯೋಣ ಬನ್ನಿ.
ಬಿಜೆಪಿ ಉಳಿಸಿಕೊಳ್ಳಲು ಬಯಸಿದ ಕ್ಷೇತ್ರಗಳು:
NDA ಕೂಟದಲ್ಲಿ 240 ಸ್ಥಾನಗಳನ್ನು ಪಡೆದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯು ರಸ್ತೆ ಅಭಿವೃದ್ಧಿ, ರೈಲ್ವೆ ಇಲಾಖೆ, ಮೂಲಸೌಕರ್ಯ ಅಭಿವೃದ್ಧಿ ಕಲ್ಯಾಣ, ಕೃಷಿ ಇಲಾಖೆಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಬಗ್ಗೆ ಮಾತನಾಡಿದೆಯಂತೆ. ಇದರ ಜೊತೆಯಲ್ಲಿ ಸ್ಪೀಕರ್ ಸ್ಥಾನವೂ ಸೇರಿದಂತೆ ಹಣಕಾಸು, ರಕ್ಷಣೆ, ಗೃಹ ಸೇರಿದಂತೆ ಪ್ರಮುಖ ಎಲ್ಲಾ ಖಾತೆಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಮಿತ್ರಪಕ್ಷಗಳಿಗೆ ನೀಡಲು ಬಯಸಿದ್ದು:
ಮಿತ್ರಪಕ್ಷಗಳಾದ ಟಿಡಿಪಿಗೆ ವಿಮಾನಯಾನ, ಕಬ್ಬಿಣ ಮತ್ತು ಉಕ್ಕು ಇಲಾಖೆ ನೀಡುವ ಸಾಧ್ಯತೆಗಳಿವೆ. ಶಿವಸೇನೆಗೆ ಬೃಹತ್ ಕೈಗಾರಿಕೆ, ಜೆಡಿಯುಗೆ ಗ್ರಾಮೀಣ ಮತ್ತು ಪಂಚಾಯತ್ ಅಭಿವೃದ್ಧ ಖಾತೆಗಳು ಸಿಗುವ ಸಾಧ್ಯತೆಗಳಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇನ್ನು ಕರ್ನಾಟಕದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗುವ ಸಾಧ್ಯತೆಗಳಿವೆ.
ಮಿತ್ರ ಪಕ್ಷಗಳು ಇಟ್ಟ ಬೇಡಿಕೆ?
* ಟಿಡಿಪಿ - ನಾಲ್ಕು ಖಾತೆಗಳು
* ಜೆಡಿಯು - ರೈಲ್ವೆ ಸೇರಿದಂತೆ ಮೂರು ಖಾತೆಗಳು
* ಶಿವಸೇನೆ- ಒಂದು ಸಂಪುಟ ದರ್ಜೆ ಹಾಗೂ ಎರಡು ರಾಜ್ಯ ಖಾತೆಗಳು
* ಲೋಕಜನಶಕ್ತಿ - ಒಂದು ಸಂಪುಟ ದರ್ಜೆ ಹಾಗೂ ಒಂದು ರಾಜ್ಯ ಖಾತೆ
* ಎಚ್‌ಎಎಂಎಸ್ - ಸಂಪುಟ ದರ್ಜೆ ಖಾತೆ
* ಜೆಡಿಎಸ್ - ಕೃಷಿ ಖಾತೆ
ಇದನ್ನೂ ಓದಿ: NDA: ಬಿಜೆಪಿಗೆ 11 ಪಕ್ಷೇತರರ ಬೆಂಬಲ - 303 ಆದ NDA ಬಲ !!