ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Congress Guarantees : ರಾಜ್ಯ ಸರ್ಕಾರದ ಈ 3 ಗ್ಯಾರಂಟಿ ಯೋಜನೆಗಳು ರದ್ದು ?!

Congress Guarantees : ಈಗ ಈ ಗ್ಯಾರಂಟಿಗಳಲ್ಲಿ ಮೂರು ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಎಂಬ ಸುದ್ದಿ ಎಂದು ಸದ್ದು ಮಾಡುತ್ತಿದೆ
12:27 PM Mar 26, 2024 IST | ಸುದರ್ಶನ್
UpdateAt: 12:37 PM Mar 26, 2024 IST
Advertisement

Congress Guarantees : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ತಾನು ಮಾತು ಕೊಟ್ಟಂತೆ ಐದು ಗ್ಯಾರಂಟಿಗಳನ್ನು(Congress Guarantees ) ಜಾರಿಗೊಳಿಸಿದೆ. ಆದರೆ ಈಗ ಈ ಗ್ಯಾರಂಟಿಗಳಲ್ಲಿ ಮೂರು ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಎಂಬ ಸುದ್ದಿ ಎಂದು ಸದ್ದು ಮಾಡುತ್ತಿದೆ.

Advertisement

ಇದನ್ನೂ ಓದಿ: Crime News: ದತ್ತು ಪಡೆದ ಬಾಲಕಿಯನ್ನು ಅತ್ಯಾಚಾರಿ ಮಾಡಿ ಕೊಲೆಗೈದ ಪೋಷಕರು

ಹೌದು ಮುಂಬರುವ ಲೋಕಸಭಾ ಚುನಾವಣೆಯ(Parliament Election)ಪ್ರಯುಕ್ತ ಈ 5 ಗ್ಯಾರಂಟಿಗಳಲ್ಲಿ ಮೂರು ಯೋಜನೆಗಳು ರದ್ದಾಗಬಹುದು ಎಂದು ಮೂಲಗಳು ತಿಳಿಸಿವೆ. ಯಾಕೆಂದರೆ ಕಾಂಗ್ರೆಸ್ ಸರ್ಕಾರವು ನೀಡುತ್ತಿರುವಂತಹ ಯೋಜನೆಗಳಿಂದಾಗಿ ಈಗಾಗಲೇ ಬಜೆಟ್ ನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಜೊತೆಗೆ ಸರ್ಕಾರದ ವೆಚ್ಚವು ಹೆಚ್ಚಾಗಿದ್ದು ಸರ್ಕಾರವು ಘೋಷಿಸಿರುವ 5 ಗ್ಯಾರಂಟಿಗಳ ಸಲುವಾಗಿ 3,27,747 ಕೋಟಿಯಷ್ಟು ವೆಚ್ಚ ಹೆಚ್ಚುವರಿ ಆಗಿದೆಯಂತೆ.

Advertisement

ಇದನ್ನೂ ಓದಿ: D K Shivakumar: ಮೇಕೆದಾಟು ವಿಚಾರದಲ್ಲಿ ದೇವೇಗೌಡರ ನಿಲುವನ್ನು ಬೆಂಬಲಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಪ್ರಸ್ತುತದಲ್ಲಿ ರಾಜ್ಯದ ಆಡಳಿತದಲ್ಲಿರುವ ಕಾಂಗ್ರೆಸ್(Congress)ಪಕ್ಷವು ತನ್ನ 5 ಗ್ಯಾರಂಟಿಗಳ ನಿಮಿತ್ತವಾಗಿ ವಾರ್ಷಿಕವಾಗಿ ಒಂದು ಬಡ ಕುಟುಂಬಕ್ಕೆ 50 ರಿಂದ 55 ಸಾವಿರದಷ್ಟು ಆರ್ಥಿಕ ಸೌಲಭ್ಯವನ್ನು ಒದಗಿಸುವುದರ ಮೂಲಕ, ಆರ್ಥಿಕ ಸಬಲತೆಯನ್ನು ಸಾಧಿಸಲು ಮುಂದಾಗಿದೆ. ಇದರಿಂದ ಅನೇಕ ಬಡವರಿಗೆ ಅನುಕೂಲವಾಗುತ್ತಿದೆ.

ಇನ್ನು ಈ ಬಾರಿ ನಡೆಯಲಿರುವಂತಹ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿಸಿದಂತಹ ಮಟ್ಟದಲ್ಲಿ ಗೆಲುವನ್ನು ಸಾಧಿಸದೆ ಹೋದರೆ ಈ ಎಲ್ಲ ಯೋಜನೆಗಳು ಸ್ಥಗಿತಗೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ. ಇದಾಗಲೇ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಸಿದ್ದರಾಮಯ್ಯ(CM Siddaramaiah)ರಾಜೀನಾಮೆ ಕೊಡಬೇಕು ಎಂಬ ಸುದ್ದಿ ಕೂಡ ವೈರಲ್ ಆಗುತ್ತಿದೆ. ಇದು ನಿಜವಾದರೆ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಬಹುದು. ಯಾಕೆಂದರೆ ಸಿದ್ದರಾಮಯ್ಯ ಅವರಂತೆ ಸಮರ್ಥವಾಗಿ ಅಧಿಕಾರ ನಡೆಸುವವರು ಯಾರೂ ಇಲ್ಲ ಎಂಬ ವಿಚಾರಗಳೂ ಹರಿದಾಡುತ್ತಿವೆ.

ಒಂದು ವೇಳೆ ಇದು ನಿಜವಾಗಿ, ಕಾಂಗ್ರೆಸ್ ಕಡಿ ಸೀಟ್ ಪಡೆದು ಬಿಜೆಪಿ ಮೇಲುಗೈ ಸಾಧಿಸಿದರೆ ಹಲವಾರು ಬದಲಾವಣೆಗಳು ಆಗುವುದಂತೂ ನಿಶ್ಚಯವಾಗಿದೆ. ಅಂತೆಯೇ ಐದು ಗ್ಯಾರಂಟಿಗಳ ಸ್ಥಗಿತತೆ ಕೂಡ ಉಂಟಾಗುವ ಸಾಧ್ಯತೆಗಳಿವೆ. ಆದರೆ ಇದರಲ್ಲಿ ಅನ್ನಭಾಗ್ಯ ರೋಜನೆ ಚಾಲ್ತಿಯಲ್ಲಿದ್ದು ಅಕ್ಕಿಯನ್ನೇ ವಿತರಿಸುವ ರೂಪದಲ್ಲಿ ಮುಂದುವರೆಯಲಿದೆ. ಇದನ್ನು ಬಿಟ್ಟರೆ ಗೃಹಜೋತಿ (Gruha Jyothi), ಗೃಹಲಕ್ಷ್ಮಿ (Gruha Lakshmi), ಯುವನಿಧಿ (Yuva Nidhi) ಯೋಜನೆಗಳು ಸ್ಥಗಿತಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement