For the best experience, open
https://m.hosakannada.com
on your mobile browser.
Advertisement

Taj Mahal: ತಾಜ್​ಮಹಲ್​ ನ್ನು ಶಿವ ದೇವಾಲಯವೆಂದು ಕರೆದು ಗಂಗಾಜಲ ಸಿಂಪಡಿಸಲು ಮುಂದಾದ ಮಹಿಳೆ?

11:36 AM Jul 30, 2024 IST | ಕಾವ್ಯ ವಾಣಿ
UpdateAt: 11:36 AM Jul 30, 2024 IST
taj mahal  ತಾಜ್​ಮಹಲ್​ ನ್ನು ಶಿವ ದೇವಾಲಯವೆಂದು ಕರೆದು ಗಂಗಾಜಲ ಸಿಂಪಡಿಸಲು ಮುಂದಾದ ಮಹಿಳೆ
Advertisement

Taj Mahal: ವಿಶ್ವದ ಏಳು ಅದ್ಭುತಗಳಲ್ಲಿ ಹೆಸರಾಗಿರುವ ತಾಜ್ ಮಹಲ್ ಉತ್ತರ ಪ್ರದೇಶದ ಆಗ್ರಾದ ಯಮುನಾ ನದಿಯ ದಡದಲ್ಲಿರುವ ದಂತ-ಬಿಳಿ ಅಮೃತಶಿಲೆಯ ಸಮಾಧಿಯಾಗಿದೆ. ಕ್ರಿ.ಶ. 1631 ರಲ್ಲಿ ಐದನೇ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲ್ ಸಮಾಧಿಯನ್ನು ಇರಿಸಲು ಐಕಾನಿಕ್ ಸ್ಮಾರಕವನ್ನು ಕಟ್ಟಿಸಿದ್ದ ಎಂದು ಇತಿಹಾಸ ಹೇಳುತ್ತದೆ.

Advertisement

ಆದ್ರೆ ಮಹಿಳೆಯೊಬ್ಬರು ತಾಜ್​ಮಹಲ್​ನ್ನು (Taj Mahal)  ಶಿವನ ದೇವಾಲಯವೆಂದು ಹೇಳಿಕೊಂಡು, ಗಂಗಾಜಲವನ್ನು ಸಿಂಪಡಿಸಲು ಹೋಗಿ ವಿವಾದ ಹುಟ್ಟುಹಾಕಿದ್ದಾರೆ. ಈ ಮಹಿಳೆ ಕನ್ವರ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ನಂತರ ಗಂಗಾ ನದಿಯ ಪವಿತ್ರ ಜಲವನ್ನು ತೆಗೆದುಕೊಂಡು ಬಂದು ತಾಜ್​ಮಹಲ್​ಗೆ ಸಿಂಪಡಿಸಲು ಮುಂದಾಗಿದ್ದರು.

ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮೀನು ರಾಥೋಡ್ ಎಂಬ ಮಹಿಳೆ ತಾಜ್​ಮಹಲ್​ನ್ನು ಶಿವನಿಗೆ ಸಮರ್ಪಿತವಾದ ದೇವಾಲಯ ಎಂದು ಕರೆದು ಅದಕ್ಕೆ ಸಿಂಪಡಿಸಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ ಆ ಸಮಯದಲ್ಲಿ ಭದ್ರತೆಗೆಂದು ನಿಯೋಜಿಸಲಾಗಿದ್ದ ತಾಜ್ ಸುರಕ್ಷಾ ಪೊಲೀಸರು ಅವರನ್ನು ತಡೆದಿದ್ದಾರೆ. ಸ್ವಲ್ಪ ಸಮಯದ ನಂತರ, ರಾಜೇಶ್ವರ ದೇವಸ್ಥಾನದಲ್ಲಿ ಗಂಗಾಜಲವನ್ನು ಅರ್ಪಿಸಿದ್ದಾರೆ ಎಂದು ಎಸಿಪಿ ಸೈಯದ್ ಅರೀಬ್ ಅಹ್ಮದ್ ತಿಳಿಸಿದ್ದಾರೆ.

Advertisement

ತಾಜ್​ಮಹಲ್​ ಅನ್ನು ತೇಜೋ ಮಹಾಲಯ ಎಂದು ಅವರು ಉದ್ಘರಿಸಿದ್ದು, ಇದು ಶಿವನಿಗೆ ಸಮರ್ಪಿತವಾಗಿ ದೇವಾಯಲವಾಗಿದ್ದು, ಗಂಗಾಜಲ ಸಿಂಪಡಿಸಬೇಕಿದೆ ಎಂದು ಹೇಳಿದ್ದಾರೆ.

Advertisement
Advertisement
Advertisement