For the best experience, open
https://m.hosakannada.com
on your mobile browser.
Advertisement

Free LPG Cylinder: ಪ್ರತೀ ಮನೆಗೆ ವರ್ಷಕ್ಕೆ 3 ಉಚಿತ LPG ಸಿಲಿಂಡರ್ ಘೋಷಿಸಿದ ರಾಜ್ಯ ಸರ್ಕಾರ !!

Free LPG Cylinder: ಮಹರಾಷ್ಟ್ರ ಸರ್ಕಾರವು ಇಂದು ತನ್ನ ಬಜೆಟ್ ಮಂಡಿಸಿದ್ದು, ಇದರಲ್ಲಿ ತನ್ನ ರಾಜ್ಯದ ಜನರಿಗೆ ಹಲವು ಬಂಪರ್ ಘೋಷಣೆ ಮಾಡಿದೆ.
05:36 PM Jun 28, 2024 IST | ಸುದರ್ಶನ್
UpdateAt: 05:36 PM Jun 28, 2024 IST
free lpg cylinder  ಪ್ರತೀ ಮನೆಗೆ ವರ್ಷಕ್ಕೆ 3 ಉಚಿತ lpg ಸಿಲಿಂಡರ್ ಘೋಷಿಸಿದ ರಾಜ್ಯ ಸರ್ಕಾರ
Advertisement

Free LPG Cylinder: ಮಹರಾಷ್ಟ್ರ ಸರ್ಕಾರವು ಇಂದು ತನ್ನ ಬಜೆಟ್ ಮಂಡಿಸಿದ್ದು, ಇದರಲ್ಲಿ ತನ್ನ ರಾಜ್ಯದ ಜನರಿಗೆ ಹಲವು ಬಂಪರ್ ಘೋಷಣೆ ಮಾಡಿದೆ. ಇದರಲ್ಲಿ ಮುಖ್ಯವಾಗಿ ಪ್ರತೀ ಮನೆಗೂ ವರ್ಷಕ್ಕೆ 3 ಉಚಿತ ಸಿಲಿಂಡರ್(Free LPG Cylinder) ಕೊಡುವುದಾಗಿ ಹೇಳಿದೆ.

Advertisement

ಹೌದು, ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ(Maharastra)ದಲ್ಲಿ ಭಾರೀ ಹಿನ್ನಡೆ ಕಂಡಿದ್ದ ಎನ್​ಡಿಎ ಮೈತ್ರಿಕೂಟ(NDA) ಸರ್ಕಾರ ಈ ಬಾರಿಯ ರಾಜ್ಯ ಬಜೆಟ್​ನಲ್ಲಿ ಜನಪ್ರಿಯ ಸ್ಕೀಮ್​ಗಳಿಗೆ ಶರಣಾಗಿದೆ. ಇದರಲ್ಲಿ ಹಲವು ಉಚಿತ ಕೊಡುಗೆಗಳನ್ನು ನೀಡಿದ್ದಾರೆ.

Breast Cancer: ಸ್ತನ ಕ್ಯಾನ್ಸರ್‌ನ ಲಕ್ಷಣವೇನು? ಈ ವಿಷಯವನ್ನು ನಿರ್ಲಕ್ಷ್ಯ ಮಾಡಿದರೆ ಸಾವು ಖಚಿತ

Advertisement

ಉಚಿತ ಸಿಲಿಂಡರ್ ಘೋಷಣೆ:
ಪ್ರತೀ ಮನೆಗೂ ವರ್ಷಕ್ಕೆ 3 ಉಚಿತ ಸಿಲಿಂಡರ್ ಕೊಡುವುದಾಗಿ. ಅದರಲ್ಲೂ ಒಂದು ಕುಟುಂಬದಲ್ಲಿ 5 ಮಂದಿ ಇದ್ದರೆ ಅಂತಹ ಕುಟುಂಬಗಳಿಗೆ ಮೊದಲ ಪ್ರಾಮುಖ್ಯತೆ ಸಿಗುತ್ತದೆ ಎನ್ನಲಾಗಿದೆ. ಇದು ಅವಿಭಕ್ತ ಕುಟುಂಬಕ್ಕೂ ಪ್ರೇರಣೆಯಾದಂತಿದೆ.

ಗೃಹಲಕ್ಷ್ಮೀ ಮಾದರಿಯಲ್ಲೆ ಹೊಸ ಯೋಜನೆ:
ಕರ್ನಾಟಕದ ಗೃಹಲಕ್ಷ್ಮೀ ಯೋಜನೆ ಮಾದರಿಯಲ್ಲಿ ಮಹಾರಾಷ್ಟ್ರದಲ್ಲೂ ಮಹಿಳೆಯರಿಗೆ ಸರ್ಕಾರ ಮಾಸಿಕ ಸಹಾಯಧನ ಒದಗಿಸಲು ಘೋಷಿಸಿದೆ. 21 ವರ್ಷದಿಂದ 60 ವರ್ಷದವರೆಗಿನ ವಯಸ್ಸಿನ ಮಹಿಳೆಯರಿಗೆ ಮಾಸಿಕವಾಗಿ 1,500 ರೂ ನೀಡುವುದಾಗಿ ಸರ್ಕಾರ ಘೋಷಿಸಿದೆ.

ಇತರ ಪ್ರಮುಖ ಘೋಷಣೆಗಳು:
ಮಹಾರಾಷ್ಟ್ರದ ಹತ್ತಿ ಮತ್ತು ಸೋಯಾಬೀನ್ ಬೆಳೆಗಳಿಗೆ ಪ್ರತೀ ಹೆಕ್ಟೇರ್​ಗೆ 5,000 ರೂ ಬೋನಸ್ ಹಣವನ್ನು ರೈತರಿಗೆ ನೀಡಲಾಗುತ್ತದೆ. ಹಾಲು ಉತ್ಪಾದಕ ರೈತರಿಗೆ ಜುಲೈ 1ರ ಬಳಿಕ ಪ್ರತೀ ಲೀಟರ್ ಹಾಲಿಗೆ 5 ರೂ ಹೆಚ್ಚುವರಿ ಬೋನಸ್ ಕೊಡಲಾಗುತ್ತದೆ. ಪ್ರಾಣಿಗಳ ದಾಳಿಯಿಂದ ಮೃತ ಪಡುವ ವ್ಯಕ್ತಿಗಳ ಸಂಬಂಧಿಕರಿಗೆ ನೀಡಲಾಗುವ ಪರಿಹಾರ ಹಣವನ್ನು 20 ಲಕ್ಷ ರೂನಿಂದ 25 ಲಕ್ಷ ರೂಗೆ ಏರಿಸಲಾಗಿದೆ.

NEET UG 2024 ಮರು ಪರೀಕ್ಷೆ ರಿಸಲ್ಟ್ ನಂತರ ಒಟ್ಟಾರೆ ರ್ಯಾಂಕಿಂಗ್ ಏನಾಗುತ್ತೆ ? ರಾಂಕ್ ಎಷ್ಟು ಉತ್ತಮ ಆಗುತ್ತೆ ಅನ್ನೋ ಸ್ಪಷ್ಟ ಮಾಹಿತಿ !

Advertisement
Advertisement
Advertisement