Tomato Price Hike: ದಿಢೀರ್ ಏರಿಕೆ ಕಂಡ ಟೊಮೆಟೋ ಬೆಲೆ - 1 ಕೆಜಿಗೆ 80 ರೂ !!
Tomato Price Hike: ಕಳೆದ ವರ್ಷ 100 ರೂ ಗಡಿ ದಾಟಿ ಎಲ್ಲರಿಗೂ ಕೊಳ್ಳುವಾಗಲೇ ಕೈ ಸುಡುವಂತೆ ಮಾಡಿದ್ದ 'ಕೆಂಪು ಸುಂದರಿ' ಟಮೋಟೋ ದರ ಇದೀಗ ಮತ್ತೆ ದಿಢೀರ್ ಎಂದು ಏರಿಕೆ ಕಂಡಿದೆ.
RSS: ಲೋಕ ಸಮರದಲ್ಲಿ ಗರ್ವಭಂಗ - ಬಿಜೆಪಿಗೆ ಟಾಂಗ್ ಕೊಟ್ಟ RSS ಸಂಚಾಲಕ ಮೋಹನ್ ಭಾಗವತ್ !!
ಹಸಿರು ತರಕಾರಿ, ಸೊಪ್ಪು, ಬೀನ್ಸ್(Beens) ಗಳ ರೇಟ್ ಒಮ್ಮೆಲೇ ಏರಿತ್ತು. ಆದರೀಗ ಈ ಬೆನ್ನಲ್ಲೇ ಬಳಿಕ ಮಾರುಕಟ್ಟೆಗಳಲ್ಲಿ ಟೊಮೆಟೋ ದರ(Tomato Price Hike) ಮತ್ತೆ ಹೆಚ್ಚಳ ಕಂಡಿದ್ದು, ಮಂಗಳವಾರ (Tuesday)ಕೆಜಿಗೆ ಗರಿಷ್ಠ ₹ 80 ನಂತೆ ಮಾರಾಟವಾಗಿದೆ.
ಹೌದು, ಬೆಂಗಳೂರು ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ ಸೇರಿದಂತೆ ಹಲವು ಕಡೆಗಳಲ್ಲಿ ಟೊಮೇಟೊ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ 40ರೂ ಇದ್ದ ಟಮೋಟೋ ರೇಟ್ ಇದೀಗ 80ಕ್ಕೆ ಏರಿದೆ. ಎರಡು ಹಾಗೂ ಮೂರನೇ ದರ್ಜೆಯ ಟೊಮೆಟೋ ಕ್ರಮವಾಗಿ ₹ 50, ₹ 40 ಕ್ಕೆ ದೊರಕುತ್ತಿದೆ. ದಿನಬಳಕೆಯ ಟೊಮೆಟೋ ಬೆಲೆಯೇರಿಕೆ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಸದ್ಯದಲ್ಲೇ 100ರೂ ಗಡಿ ದಾಟುವುದು ಕೂಡ ಪಕ್ಕಾ ಎನ್ನಲಾಗುತ್ತಿದೆ.
ಬೆಲೆ ಏರಿಕೆಗೆ ಕಾರಣ?
ನಾನಾ ಭಾಗಗಳಿಂದ ಬರುತ್ತಿದ್ದ ಟೊಮೇಟೊ ರಪ್ತು ಕಡಿಮೆ ಆಗಿದ್ದು ಈ ಪರಿಣಾಮ ಟೊಮೇಟೊ ದರ ಏರಿಕೆಗೆ ಮುಖ್ಯ ಕಾರಣವಾಗಿದೆ. ಅಲ್ಲದೆ ಮಳೆ ಹಾಗೂ ರೋಗಬಾಧೆ ಕಾರಣದಿಂದ ಮಾರುಕಟ್ಟೆಗೆ ಪೂರೈಕೆ ಗಣನೀಯವಾಗಿ ಕುಸಿದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.