For the best experience, open
https://m.hosakannada.com
on your mobile browser.
Advertisement

New Year Rules: ಹೊಸ ವರ್ಷಕ್ಕೆ​ ಬಿಗಿ ಬಂದೋ ಬಸ್ತ್​! ರೂಲ್ಸ್​ ಫಾಲೋ ಮಾಡಿಲ್ಲ ಅಂದ್ರೆ ಮುಗೀತು ಕಥೆ

12:04 PM Dec 26, 2023 IST | ಹೊಸ ಕನ್ನಡ
UpdateAt: 12:04 PM Dec 26, 2023 IST
new year rules  ಹೊಸ ವರ್ಷಕ್ಕೆ​ ಬಿಗಿ ಬಂದೋ ಬಸ್ತ್​  ರೂಲ್ಸ್​ ಫಾಲೋ ಮಾಡಿಲ್ಲ ಅಂದ್ರೆ ಮುಗೀತು ಕಥೆ
Advertisement

ಹೊಸ ವರ್ಷದ ಆಚರಣೆ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸರಿಂ‌ದ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಅವು ಏನೆಲ್ಲಾ ಎಂದು ತಿಳಿಯಿರಿ. ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಯಂತೆ ಎಚ್ಚರಿಕೆಯನ್ನು ನೀಡಲಾಗಿದ್ದು, ಜನಸಂದಣಿ ಜಾಗದಲ್ಲಿ ಬಂದೋಬಸ್ತ್ ಪಿಕೇಟಿಂಗ್ ಪಾಯಿಂಟ್ ಗಳ ನೇಮಕ ಮಾಡಿದ್ದಾರೆ.

Advertisement

ಸ್ಟಾರ್ ಹೋಟೆಲ್, ಪಬ್ , ಕ್ಲಬ್ ಗಳ ಏರಿಯಾದಲ್ಲೊ ಬಂದೋಬಸ್ತ್ ಪಾಯಿಂಟ್ ಗಳ ನಿಯೋಜನೆ ಮಾಡಲಾಗಿದೆ. ಬ್ರಿಗೇಡ್, ಎಂಜಿ ರಸ್ತೆಯಲ್ಲಿ 3 ಸಾವಿರ ಪೊಲೀಸರನ್ನು ನಿಯೋಜಿಸಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಸೇಫ್ ಟೀಂ ಐಲ್ಯಾಂಡ್ ಗಳನ್ನು ಕೂಡ ನಿರ್ಮಾಣ ಮಾಡಿದ್ದಾರೆ.

ಮಕ್ಕಳು ಕಾಣೆಯಾದರೆ ಕಳುವು ಬಗ್ಗೆ ಮಾಹಿತಿ ನೀಡಲು ಪೊಲೀಸ್ ಕಿಯೋಸ್ಕ್ ಗಳನ್ನು ಇಡಲಾಗಿದೆ. ಸೂಕ್ತ ಕಣ್ಗಾವಲು ಪ್ರದೇಶದಲ್ಲಿ ವಾಚ್ ಟವರ್ ಗಳ ನಿರ್ಮಾಣ, ಬೈನಾಕುಲರ್ ಮೂಲಕ ವೀಕ್ಷಣೆಯನ್ನು ಮಾಡಲಾಗುತ್ತದೆ.

Advertisement

ಉಳಿದಂತೆ ಇಂದಿರಾನಗರ ಹಾಗೂ ಕೋರಮಂಗಲದಲ್ಲೂ ಹೆಚ್ಚಿನ ಪೊಲೀಸರ ನಿಯೋಜಿಸಲಾಗಿದೆ. ಡ್ರಗ್ ಫೆಡ್ಲರ್ ಗಳ ಮೇಲೆ ಪೊಲೀಸರು ತೀವ್ರ ನಿಗಾ ಇಡಲಾಗುತ್ತದೆಯಂತೆ. ಯಾವುದೇ ಕಾರಣಕ್ಕೂ ಡ್ರಗ್ಸ್ ಸೇವನೆ ಮಾಡೋಕೆ ಬಿಡಲ್ಲ ಎಂದು ಕಠಿಣವಾಗಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಫೆಡ್ಲರ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗ್ತಾ ಇದೆ.

ಅನಧಿಕೃತವಾಗಿ ಎಣ್ಣೆ ಶೇಖರಣೆ ಮಾಡೋದು, ಬ್ಲಾಕ್ ನಲ್ಲಿ ಮಾರಾಟ ಮಾಡೋಕೆ ಮೇಲೆ ನಿಗಾ ಇಡಲಾಗುತ್ತದೆ. ರೌಡಿಗಳ ಮೇಲೆಯೂ ಹದ್ದಿನ ಕಣ್ಣಿಡಲಾಗಿದೆ. ಡ್ರಂಕ್ ಅಂಡ್ ಟ್ರೈವ್ ಮೇಲೆಯೂ ಈಗಾಗಲೇ ಕಾರ್ಯಾಚರಣೆ ಮಾಡಲಾಗ್ತಾ ಇದೆ.

ಇದನ್ನು ಓದಿ: Food Tips: ಈ ಒಂದು ನ್ಯಾಕ್ ನಿಮ್ಮಲ್ಲಿದ್ದರೆ ಸಾಕು, ಉತ್ತಮವಾದ ಚಿಕನ್- ಮಟನ್ ಖರೀದಿಸಬಹುದು !!

ಇನ್ನು ಪ್ರಮುಖ ಸ್ಥಳದಲ್ಲಿ ಡ್ರೋನ್ ಕ್ಯಾಮರಾಗಳನ್ನು ಬಳಸಲಾಗ್ತಾ ಇದೆ. ಸುಮಾರು 10 ಸಾವಿರ ಕ್ಕೂ ಹೆಚ್ಚು ಪೊಲೀಸರನ್ನು ನಗರದಾದ್ಯಂತ ನಿಯೋಜನೆ ಮಾಡಲಾಗಿದೆ. ಈಗಾಗಲೇ 8 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆಯನ್ನು‌ ಮಾಡಲಾಗಿದೆ. ಉಳಿದಂತೆ ಹೋಂ ಗಾರ್ಡ್ ಗಳನ್ನು ಸಹ ನಿಯೋಜನೆ ಮಾಡಲಾಗುತ್ತೆ.

ಡಿ.31 ರಾತ್ರಿ 11 ಗಂಟೆಯಿಂದ ಎಲ್ಲಾ ಫ್ಲೈಓವರ್ ಗಳು ಬಂದ್ ಆಗಲಿದೆ!

ಹೆಚ್ಚುವರಿ ಪೊಲೀಸ್ ಆಯುಕ್ತರು - 2, ಜಂಟಿ ಪೊಲೀಸ್ ಆಯುಕ್ತರು - 1, ಡಿಸಿಪಿ - 15, ಎಸಿಪಿ - 45, ಇನ್ಸ್ಪೆಕ್ಟರ್ ಗಳು - 160, ಸಬ್ ಇನ್ಸ್ಪೆಕ್ಟರ್ ಗಳು - 600, ಎಎಸ್ಐ - 600, ಎಚ್ ಸಿ - 1800, ಪಿಸಿ ಗಳು - 5200 ಇಷ್ಟು ಪೊಲೀಸ್​ನ್ನು ಆಯೋಜಿಸಲಾಗಿದೆ.

ರಾತ್ರಿ ಒಂದು ಗಂಟೆವರೆಗೂ ಮಾತ್ರ ಸೆಲೆಬ್ರೇಷನ್ ಗೆ ಅವಕಾಶವನ್ನು ಕೊಡಲಾಗಿದೆ. ಒಂದು ಗಂಟೆಗೆ ಎಲ್ಲವನ್ನು ಕ್ಲೋಸ್ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಹೋಟೆಲ್ ಬಾರ್ ಪಬ್ ಎಲ್ಲವೂ ಕ್ಲೋಸ್ ಮಾಡಬೇಕು ಎಂದು ಹೇಳಿದ್ದಾರೆ. ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿಕೆ ನೀಡಿದ್ದಾರೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೋ ಫ್ಲೈ ಓವರ್ ಮಾತ್ರ ಓಪನ್ ಇರುತ್ತದೆ. ಉಳಿದಂತೆ ಎಲ್ಲಾ ಫ್ಲೈ ಓವರ್ ಗಳು ಬಂದ್ ಆಗಲಿದೆ. ಮಾಲ್‌ನಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರ್ತಾರೆ ಅಂತ ಸುದ್ದಿ ಇದೆ. ಹೀಗಾಗಿ ಎಲ್ಲಾ ಮಾಲ್ ಗಳ ಬಳಿಯೂ ಪೊಲೀಸರ ನಿಯೋಜನೆ ಮಾಡಲಾಗುತ್ತೆ. 48 ನಾಕಾಬಂದಿಗಳನ್ನ ಮಾಡಲಾಗಿದೆ. ವೀಲಿಂಗ್ ಹಾಗೂ ಡ್ರ್ಯಾಗ್ ರೇಸಿಂಗ್ ಕಡಿವಾಣಕ್ಕೆ ರೆಡಿ ಆಗಿದ್ದೀವಿ. 48 ಕಡೆಗಳಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತೆ. ರಾತ್ರಿ 11 ರಿಂದ ಬೆಳಿಗ್ಗೆ 6 ಗಂಟೆವರೆಗೂ ಫ್ಲೈ ಓವರ್ ಗಳು ಕ್ಲೋಸ್ ಆಗಿರುತ್ತೆ. ಸಂಚಾರಿ ಕಮೀಷನರ್ ಅನುಚೇತ್ ಹೇಳಿಕೆ.

Advertisement
Advertisement
Advertisement