Delhi Police: ಮೋದಿ ಪ್ರಮಾಣವಚನ ವೇಳೆ ಹಿಂದೆ ಓಡಾಡಿದ ನಿಗೂಢ ಪ್ರಾಣಿ ಸಾಕು ಬೆಕ್ಕು - ಸ್ಪಷ್ಟೀಕರಣ ಕೊಟ್ಟ ದೆಹಲಿ ಪೋಲೀಸ್ !!
Delhi Police: ಪ್ರಮಾಣವಚನ ಕಾರ್ಯಕ್ರಮದ ವೇಳೆ ವೇದಿಕೆಯ ಹಿಂಬಾಗದಲ್ಲಿ ನಿಗೂಢ ಪ್ರಾಣಿಯೊಂದು ಓಡಾಡುತ್ತಿರುವ ದೃಶ್ಯ ಸೆರೆಯಾಗಿದ್ದು ನೆಟ್ಟಿಗರನ್ನು ಬೆಚ್ಚಿಬೀಳಿಸಿ, ಸಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಕೊನೆಗೂ ದೆಹಲಿ ಪೋಲಿಸರು(Delhi Police)ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು ಆ ನಿಗೂಢವಾದ ಪ್ರಾಣಿ ಯಾವುದೆಂದು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಪ್ರತಿಯೊಬ್ಬ ಪ್ರಯಾಣಿಕರಿಗೆ ಬಂಪರ್ ಗುಡ್ ನ್ಯೂಸ್!
ಹೌದು, ಜೂನ್ 9ರಂದು ದೆಹಲಿಯ(Delhi) ರಾಷ್ಟ್ರಪತಿ ಭವನದ(Rastrapati Bhavan) ಎದುರು ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದ ವೇಳೆ ವೇದಿಕೆಯ ಹಿಂಬಾಗದಲ್ಲಿ ಕಂಡು ಬಂದ ಪ್ರಾಣಿ, ಸಾಮಾನ್ಯ ಮನೆಯ ಬೆಕ್ಕು ಎಂದು ದೆಹಲಿ ಪೊಲೀಸರು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅದು ಚಿರತೆ, ನಿಗೂಢ ಪ್ರಾಣಿ ಎಂದೆಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ಸುದ್ದಿಯನ್ನು ಅವರು ಅಲ್ಲಗಳೆದಿದ್ದಾರೆ.
ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಪೋಸ್ಟ್ ಹಾಕಿರುವ ದೆಹಲಿ ಪೋಲೀಸರು 'ಕೆಲವು ಮಾಧ್ಯಮ ವಾಹಿನಿಗಳು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರದ ವೇಳೆ ಈ ಪ್ರಾಣಿಯನ್ನು ಸೆರೆ ಹಿಡಿದಿದ್ದವು, ಇದೊಂದು ಕಾಡುಪ್ರಾಣಿ ಇರಬಹುದು ಎಂದು ಅವರೆಲ್ಲ ಶಂಕಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಸಮಾರಂಭದ ವೇಳೆ ಅಲ್ಲಿ ಕಾಡುಪ್ರಾಣಿಗಳು ನುಗ್ಗುವುದು ಅಸಾಧ್ಯ. ಇಂತಹ ಆಧಾರ ರಹಿತ ವದಂತಿಗಳನ್ನು ನಂಬಬೇಡಿ. ವಾಹಿನಿಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ಈ ಸುದ್ದಿ ನಿಜವಲ್ಲ, ಕ್ಯಾಮರಾದಲ್ಲಿ ಸೆರೆಹಿಡಿಯಲಾದ ಪ್ರಾಣಿ ಮನೆಯ ಬೆಕ್ಕು. ದಯವಿಟ್ಟು ಇಂತಹ ಕ್ಷುಲ್ಲಕ ವದಂತಿಗಳಿಗೆ ನಂಬಬೇಡಿ " ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಏನಿದು ಘಟನೆ?
ನರೇಂದ್ರ ಮೋದಿ (PM Narendra Modi) ಅವರು ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ (Prime minister) ಜೂನ್ 9 ರಂದು ಪ್ರಮಾಣ ವಚನ (Oath taking) ಸ್ವೀಕಾರಿಸಿದರು. ಈ ಕಾರ್ಯಕ್ರಮದಲ್ಲಿ ದುರ್ಗಾ ದಾಸ್ ಪ್ರಮಾಣ ವಚನ ಸ್ವೀಕರಿಸಿ ಏಳುತ್ತಿದ್ದಾಗ ಹಿನ್ನೆಲೆಯಲ್ಲಿ ಯಾವುದೋ ನಿಗೂಢವಾದ ಪ್ರಾಣಿಯೊಂದು ಸಂಚಾರ ನಡೆಸಿದೆ. ಮೋಲ್ನೋಟಕ್ಕೆ ಇದು ಚಿರತೆಯಂತೆ(leopord) ಕಂಡುಬಂದಿತ್ತು. ಸಮಾರಂಭದ ವಿಡಿಯೋದಲ್ಲಿ ಇದು ಕಂಡುಬಂದಿದ್ದು, ವಿಡಿಯೋ ವೈರಲ್ (viral video) ಆಗುತ್ತಿದ್ದಂತೆ ಇದೀಗ ಎಲ್ಲರ ಆಶ್ಚರ್ಯ, ಆತಂಕಗಳಿಗೆ ಕಾರಣವಾಗಿತ್ತು.