Veerappan: ಕಾಡುಗಳ್ಳ ವೀರಪ್ಪನ್ ಕೊಂದಿದ್ದ ಎನ್‌ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ವೆಲ್ಲಾದುರೈ ಸಸ್ಪೆಂಡ್!
Veerappan: ಕಾಡುಗಳ್ಳ ವೀರಪ್ಪನ್ ಕೊಂದಿದ್ದ ಎನ್‌ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ವೆಲ್ಲಾದುರೈ ಸಸ್ಪೆಂಡ್ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಹೌದು, ಕಾಡುಗಳ್ಳ ವೀರಪ್ಪನ್‌ನನ್ನು (Veerappan) ಹೊಡೆದುರುಳಿಸಿದ ವಿಶೇಷ ಕಾರ್ಯಪಡೆಯಲ್ಲಿ ತಮಿಳುನಾಡು (Tamil Nadu) ಪೊಲೀಸ್ ಹೆಚ್ಚುವರಿ ಅಧೀಕ್ಷಕ ಎಸ್ ವೆಲ್ಲಾದುರೈ (S Velladurai) ಅವರ ನಿವೃತ್ತಿಗೆ ಒಂದು ದಿನ ಮೊದಲು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಪೂರ್ವ ಮುಂಗಾರು ಗಾಳಿ-ಮಳೆ ಆರಂಭವಾದ ಬೆನ್ನಲ್ಲೇ ಮೆಸ್ಕಾಂಗೆ 9.63 ಕೋ.ರೂ.ಗೂ ಅಧಿಕ ನಷ್ಟ
ಈಗಾಗಲೇ ಎನ್‌ಕೌಂಟರ್ ಸ್ಪೆಷಲಿಸ್ಟ್ (Encounter Specialist) ಎಂದೇ ಖ್ಯಾತರಾಗಿದ್ದ ವೆಲ್ಲಾದುರೈ ಅವರನ್ನು ತಮಿಳುನಾಡು ಗೃಹ ಇಲಾಖೆ ಗುರುವಾರ ಅಮಾನತುಗೊಳಿಸಿದೆ. ಮೂಲಗಳ ಪ್ರಕಾರ, 2013ರಲ್ಲಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ‘ಕೊಕ್ಕಿ’ ಕುಮಾರ್ ಅಲಿಯಾಸ್ ರಾಮು ಎಂಬಾತನ ಲಾಕಪ್ ಡೆತ್ ಪ್ರಕರಣದಲ್ಲಿ ವೆಲ್ಲಾದುರೈ ಭಾಗಿಯಾಗಿದ್ದರು ಎಂದು ಆರೋಪಿಸಿ ಅಮಾನತುಗೊಳಿಸಲಾಗಿತ್ತು.
ಆದರೆ ವೆಲ್ಲಾದುರೈ ಅಮಾನತು ಆಗಿರುವ ಹಿನ್ನೆಲೆ ಅಪಾರ ವಿರೋಧ ವ್ಯಕ್ತವಾದ ಕಾರಣ ಶುಕ್ರವಾರದ ನಂತರದ ಆದೇಶದಲ್ಲಿ ಇಲಾಖೆ ಕೆಲವು ಷರತ್ತುಗಳಿಗೆ ಒಳಪಟ್ಟು ದಂಡ ವಿಧಿಸಿ ನಿವೃತ್ತಿ ಅಮಾನತು ಹಿಂಪಡೆದಿದೆ. ಹೌದು, ವೆಲ್ಲಾದುರೈ ಅವರ ನಿವೃತ್ತಿ ಫಂಡ್‌ನಲ್ಲಿ 5 ಲಕ್ಷ ರೂ. ಕಡಿತಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: RTC Correction : ರೈತರೇ, ಪಹಣಿಯಲ್ಲಿ ತಪ್ಪುಗಳಿವೆಯೇ? ತಿದ್ದುಪಡಿ ಮಾಡುವ ಬಗ್ಗೆ ಇಲ್ಲಿದೆ ಮಾಹಿತಿ !!