Education Board: ಬೋರ್ಡ್ ಪರೀಕ್ಷೆಗೆ ಪರ್ಮಿಷನ್ ಸಿಕ್ಕ ತಕ್ಷಣ ಮತ್ತೊಂದು ಹೊಸ ಮಾರ್ಗಸೂಚಿ ಹೊರಡಿಸಿದ ಶಿಕ್ಷಣ ಇಲಾಖೆ!!
Education Board : ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಸಮ್ಮತಿ ನೀಡುತ್ತಿದ್ದಂತೆ ಶಿಕ್ಷಣ ಇಲಾಖೆಯು(Education Board)2024-25ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ನಿರ್ವಹಣೆ ಕುರಿತು ಮಾರ್ಗಸೂಚಿ ಮಾಡಲಾಗಿದೆ.
ಹೌದು, ಈ ಹಿಂದೆ ಶಾಲಾ 2024-25ನೇ ಶೈಕ್ಷಣಿಕ ಸಾಲಿಗೆ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು 4 ರಿಂದ 9 ನೇ ತರಗತಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ಹಾಗೂ 1 ರಿಂದ 10 ನೇ ತರಗತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ದಿನಚರಿಗಳನ್ನು ಮುದ್ರಿಸಿ, ಸರಬರಾಜು ಮಾಡಲು ಉಲ್ಲೇಖಿತ ಸುತ್ತೋಲೆಯಲ್ಲಿ SATS ತಂತ್ರಾಂಶದ ಮೂಲಕ ಬೇಡಿಕೆಯನ್ನು ಸಲ್ಲಿಸಲು ತಿಳಿಸಲಾಗಿತ್ತು . ಇದೀಗ ಶಾಲೆಗಳಿಂದ ದಾಖಲಿಸಿರುವ ಬೇಡಿಕೆಯನ್ವಯ ಸಂಬಂಧ ಶಾಲೆಗಳಿಗೆ ವಿತರಿಸುವ ಕುರಿತು ಈ ಕೆಳಗೆ ಮಾರ್ಗದರ್ಶನ ನೀಡಿದ್ದು ಸೂಕ್ತ ಕ್ರಮವಹಿಸಲು ತಿಳಿಸಿದೆ.
ಇದನ್ನೂ ಓದಿ: ಮನೆ ತೆರಿಗೆಯ ಬಗ್ಗೆ ಗೊತ್ತು, ‘ ಮೊಲೆ ‘ ತೆರಿಗೆಯ ಬಗ್ಗೆ ಕೇಳಿದ್ದೀರಾ ?
ಮಾರ್ಗಸೂಚಿಯಲ್ಲಿ ಉಲ್ಲೇಖ ಮಾಡಿರುವ ಮಾಹಿತಿಗಳು ಹೀಗಿವೆ-
ಪಠ್ಯಪುಸ್ತಕಗಳ ಕೊರತೆ/ ವ್ಯತ್ಯಯಗಳಿಗೆ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಜವಾಬ್ದಾರರಾಗಿರುತ್ತಾರೆ.
ನೇರವಾಗಿ ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಸರಬರಾಜಾಗುವ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳಗಳನ್ನು SATS ತಂತ್ರಾಂಶದಲ್ಲಿನ ಬೇಡಿಕೆ ಹಾಗೂ ವಿತರಣಾ ಪಟ್ಟಿಯ ಪಕಾರಸರಬರಾಜಾಗಿರುವ ಬಗ್ಗೆ ಪರಿಶೀಲಿಸಿಕೊಂಡು ಸ್ವೀಕರಿಸುವುದು.
2. ತಾಲ್ಲೂಕು ಪಠ್ಯಪುಸ್ತಕ ಗೋದಾಮಿನಲ್ಲಿ ಪಠ್ಯವುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ದಾಸ್ತಾನು
ನಿರ್ವಹಣೆ:- ಹಿಂದಿನ ಸಾಲಿನಿಂದ ಉಳಿಕೆಯಾಗಿರುವ ಪಠ್ಯವುಸ್ತಕಗಳಲ್ಲಿ 2024-25ನೇ ಸಾಲಿಗೆ ಕೇವಲ 60 ಶೀರ್ಷಿಕೆಗಳು ಮಾತ್ರ ಉಪಯುಕ್ತವಾಗಿದ್ದು, ಆ ಶೀರ್ಷಿಕೆಗಳ ಅಂಕಿ ಅಂಶಗಳನ್ನು ಮಾತ್ರ ಈಗಾಗಲೇ SATS ತಂತ್ರಾಂಶದಲ್ಲಿ stock entry ಯಲ್ಲಿ ದಾಖಲಿಸಲಾಗಿದೆ. ಹೊಸ ಪಠ್ಯಪುಸ್ತಕಗಳನ್ನು ದಾಸ್ತಾನಿಗೆ ತೆಗೆದುಕೊಳ್ಳುವ ಮೊದಲು SATS ಪುಕಾರ ಉಳಿಕೆಯಿರುವ ಉಪಯುಕ್ತ 60 ಶೀರ್ಷಿಕೆಗಳ ಪಠ್ಯಪುಸ್ತಕಗಳನ್ನು ಆರಂಭಿಕ ಶಿಲ್ಕು, ಎಂದು ಪರಿಗಣಿಸಿ, ಖಚಿತಪಡಿಸಿಕೊಂಡ ನಂತರ ಹೊಸ ದಾಸ್ತಾನಿನ ಅಂಕಿ ಅಂಶಗಳನ್ನು update ಮಾಡಿಕೊಂಡು ದಾಸ್ತಾನು ವಹಿಯಲ್ಲಿ ನಮೂದಿಸಿಕೊಳ್ಳಬೇಕು.
Interesting Facts: ಪಕ್ಷಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತಾಗ ಕರೆಂಟ್ ಹೊಡೆಯದಿರಲು ಕಾರಣವೇನು?
2024-25ನೇ ಶೈಕ್ಷಣಿಕ ಸಾಲಿಗೆ ಮುದ್ರಕರಿಂದ ಸರಬರಾಜಾಗುವ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳಗಳನ್ನು ಆಯಾ ದಿನವೇ ಡಿ.ಸಿ.ಗಳ ಅನ್ವಯ ದಾಸ್ತಾನು ವಹಿಯಲ್ಲಿ ನಮೂದಿಸಬೇಕು ಹಾಗೂ SATS ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. (ಶೀರ್ಷಿಕೆವಾರು) ಹಾಗೂ ಸ್ವೀಕೃತಿ ದಿನಾಂಕವನ್ನು ಸಹ ಕಡ್ಡಾಯವಾಗಿ ನಮೂದಿಸುವುದು.
2024-25ನೇ ಸಾಲಿಗೆ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 1ರಿಂದ 10 ನೇ ತರಗತಿಯ ಎಲ್ಲಾ ಶೀರ್ಷಿಕೆಗಳನ್ನು ಭಾಗ-1 ಮತ್ತೆ ಭಾಗ-2 ಎಂದು ವಿಂಗಡಿಸಲಾಗಿದೆ. 2024-25ನೇ ಸಾಲಿಗೆ ಕನ್ನಡ ಪ್ರಥಮ, ದ್ವಿತೀಯ, ತೃತೀಯ ಭಾಷಾ ಪಠ್ಯಪುಸ್ತಕಗಳು ಹಾಗೂ ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಪರಿಷ್ಕರಣೆಯಾಗಿವೆ. ಕನ್ನಡ ಭಾಷಾ ಅಧಿನಿಯಮದ ಪ್ರಕಾರ 2024-25ನೇ ಸಾಲಿನಿಂದ 8ನೇ ತರಗತಿಗೆ ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕಗಳು ಇರುವುದಿಲ್ಲ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2024-25ನೇ ಸಾಲಿಗೆ ಸರಬರಾಜಾಗುವ ಸದರಿ ಪಠ್ಯಪುಸ್ತಕಗಳನ್ನು ಮಾತ್ರ ವಿತರಿಸತಕ್ಕದ್ದು ಹಾಗೂ 60 ಶೀರ್ಷಿಕೆಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಹಳೆಯ ಪಠ್ಯಪುಸ್ತಕಗಳನ್ನು ಯಾವುದೇ ಕಾರಣಕ್ಕೂ ವಿತರಿಸುವಂತಿಲ್ಲ. ಈ ಕಛೇರಿಯ ಸುತ್ತೋಲೆ ಮತ್ತು ದಾಸ್ತಾನು ಹಾಗೂ ವಿತರಣಾ ವಹಿಯನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಬೇಕು (ಉಚಿತ ಮತ್ತು ಮಾರಾಟ ಪ್ರತ್ಯೇಕವಾಗಿ) ಪಠ್ಯವುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ದಾಸ್ತಾನಿಗೆ ತೆಗೆದುಕೊಂಡಿರುವ ಬಗ್ಗೆ ಆಗಿಂದಾಗ್ಗೆ ಪರಿಶೀಲಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ದೃಢೀಕರಣದೊಂದಿಗೆ ಭೌತಿಕವಾಗಿ ಪಠ್ಯಪುಸ್ತಕಗಳನ್ನು ಪರಿಶೀಲಿಸಿಕೊಂಡು ಖಾತರಿಪಡಿಸಿಕೊಳ್ಳುವುದು.
ಅತಿವೃಷ್ಟಿ/ಅನಾವೃಷ್ಟಿ ಇತ್ಯಾದಿ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಅವಘಡಗಳಿಗೆ ಪೂರ್ವಭಾವಿಯಾಗಿ ಮುನ್ನೆಚ್ಚರಿಕೆ ಕ್ರಮವಹಿಸಿ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ಸಂರಕ್ಷಿಸಿಡುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.
ಇದನ್ನೂ ಓದಿ: Board Exam: 5, 8, 9ನೇ ತರಗತಿ ಬೋರ್ಡ್ ಪರೀಕ್ಷೆಯ ಹೊಸ ವೇಳಾಪಟ್ಟಿ ಪ್ರಕಟ