Relationship: ನಿಮ್ಮವಳನ್ನು ಮೂಡ್‌ಗೆ ತರಲು ಸಂಗಾತಿಯಾದ ನೀವು ಮಾಡಬೇಕಾಗಿರುವುದು ಇಷ್ಟೇ!
Relationship: ಪ್ರಣಯ ಮತ್ತು ಲೈಂಗಿಕ ಆಕರ್ಷಣೆ ಪ್ರತಿ ಹೆಣ್ಣಿಗೂ ವಿಭಿನ್ನವಾಗಿರುತ್ತದೆ. ಹಾಗಾಗಿ ನಿಮ್ಮವಳನ್ನು ಮೂಡ್‌ಗೆ ತರಲು ಸಂಗಾತಿಯಾದ ನೀವು ಮಾಡಬೇಕಾಗಿರುವುದು ಇಷ್ಟೇ!
ಇದನ್ನೂ ಓದಿ: Adhar Card ಇದ್ದವರು ಮೊದಲು ಈ ಅಪ್ಡೇಟ್ ಮಾಡಿಕೊಳ್ಳಿ! ಇಲ್ಲಿದೆ ಫುಲ್ ಡೀಟೇಲ್ಸ್
ಮುಖ್ಯವಾಗಿ ಪುರುಷರಿಗೆ ಪತ್ನಿಯನ್ನು ಮೂಡ್‌ಗೆ ತರುವಲ್ಲಿ ಬಹಳ ತಪ್ಪು ತಿಳಿವಳಿಕೆಗಳಿವೆ. ಅಂದರೆ 6 ಪ್ಯಾಕ್, ಸ್ಟೈಲ್ ಲುಕ್ಸ್, ಅಥವಾ ಡ್ರೆಸ್ಸ್ ಸೆನ್ಸ್, ಲೈಂಗಿಕ ಕೌಶಲಗಳು ಇತ್ಯಾದಿ. ಆದ್ರೆ ಕೆಲವು ಮಹಿಳೆ ಮುಂದೆ ಇದು ಯಾವುದು ಕೆಲಸ ಮಾಡುವುದಿಲ್ಲ. ಬದಲಿಗೆ ಈ ವಿಷಯಗಳತ್ತ ಗಮನ ಹರಿಸಿ.
ಇದನ್ನೂ ಓದಿ: Ali Asgar on Kapil Sharma Show: ಕಪಿಲ್ ಶರ್ಮಾ ಅವರ ಹೊಸ ಶೋಗೆ ಅಲಿ ಅಸ್ಗರ್ ಸೇರ್ಪಡೆ?
ಒಬ್ಬ ಮಹಿಳೆಗೆ ಮಾದಕವಾದದ್ದು ಇನ್ನೊಬ್ಬ ಮಹಿಳೆಗೆ ಆಗದಿರಬಹುದು. ಆದಾಗ್ಯೂ, ಸ್ತ್ರೀ ಸಂಗಾತಿಯನ್ನು ಆಕರ್ಷಿಸಲು ಮತ್ತು ಸಂತೋಷಪಡಿಸಲು ಇನ್ನೂ ಕೆಲವು ಸಾಮಾನ್ಯ ನಿಯಮಗಳಿವೆ. ಹೌದು, ಮಹಿಳೆಯರನ್ನು ಟರ್ನ್ ಆನ್ ಮಾಡುವುದು ಸುಲಭ ಆದರೂ ಅವರು ದೈಹಿಕ ಮಿಲನಕ್ಕೆ ಪೂರ್ವದಲ್ಲಿ ಮಾನಸಿಕ ಮಿಲನ ಬಯಸುತ್ತಾರೆ. ಆಕೆಯ ಭಾವನಾತ್ಮಕ ಅಗತ್ಯಗಳು ಪೂರೈಕೆಯಾದರೆ ಖಂಡಿತಾ ಆಕೆ ನಿಮ್ಮತ್ತ ಸೆಳೆಯಲ್ಪಡುತ್ತಾಳೆ. ಆಕೆಗೆ ವಿಶೇಷ ಭಾವನೆ ಮೂಡಿಸಲು ಅವರೊಂದಿಗಿನ ಸಂಬಂಧದಲ್ಲಿ (Relationship) ನೀವು ಮಾಡಬಹುದಾದ ಕೆಲವು ಅತ್ಯುತ್ತಮ ಸೆಕ್ಸಿಯೆಸ್ಟ್ ವಿಷಯಗಳು ಇಲ್ಲಿವೆ. ಮುಖ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ನೂರಾರು ಮಹಿಳೆಯರು ನೀಡಿದ ಅನುಭವ ಉತ್ತರ ಇಲ್ಲಿ ನಿಮಗಿದೆ.
ಒಬ್ಬ ಮಹಿಳೆಗೆ ತನ್ನ ಗಂಡ ಕೆಲಸಗಳಲ್ಲಿ ಸಹಾಯ ಮಾಡುತ್ತಾ, ಪತ್ನಿಯ ಕಷ್ಟದ ಕೆಲಸ ಕಡಿಮೆ ಮಾಡುವ ಮನಸ್ಥಿತಿ ಹೊಂದಿದ್ದರೆ ಸಾಕು.
ಇನ್ನು ಆತ ತಮ್ಮ ಸಂಬಂಧದ ಬಗ್ಗೆ ಆಗಾಗ ತನ್ನ ಸಂತೋಷ ವ್ಯಕ್ತಪಡಿಸಬೇಕು. ತನ್ನ ತಂದೆ ತಾಯಿ ಕುಟುಂಬವನ್ನು ಚೆನ್ನಾಗಿ ನಡೆಸಿಕೊಳ್ಳಬೇಕು, ಅವರ ಬಗ್ಗೆ ಒಳ್ಳೆಯ ಮಾತಾಡಬೇಕು- ಅಷ್ಟಾದರೆ ಎಷ್ಟು ಬಾರಿ ಬೇಕಾದರೂ ಆತನ ತೋಳಲ್ಲಿ ಕಳೆದು ಹೋಗುವ ಬಯಕೆಯಾಗುತ್ತದೆ.
ಮತ್ತೊಬ್ಬ ಮಹಿಳೆ ಪ್ರಕಾರ, ಆಕೆಗೆ ಪತಿಯಾದವನು ಕೆಲಸದಲ್ಲಿರುವಾಗ ಮಧ್ಯದಲ್ಲಿ ಬಂದು 'ಐ ಲವ್ಯೂ, ನೀನು ತುಂಬಾ ಚೆಂದ ಕಾಣ್ತಿದ್ದಿ, ನೀನು ನನಗೆ ಸಿಕ್ಕಿದ್ದು ಅದೃಷ್ಟ' ಮುಂತಾದ ನಿಜವಾದ ಮೆಚ್ಚುಗೆಗಳನ್ನು ಆಗಾಗ ವ್ಯಕ್ತಪಡಿಸಿದರೆ ಆಕೆ ಆತನಿಗೆ ಕಳೆದೇ ಹೋಗುತ್ತಾಳೆ.
ಇನ್ನೊಬ್ಬ ಮಹಿಳೆ ಕೊಟ್ಟ ಉತ್ತರ ಹೀಗಿದೆ- ಪತಿ ಪ್ರತಿ ದಿನ ಆಕೆಯೊಂದಿಗೆ ಮನಸ್ಸು ಬಿಚ್ಚಿ ಮಾತಾಡುತ್ತಿದ್ದರೆ, ಎಲ್ಲ ಸಮಯವೂ ನೀನು ಅಗತ್ಯ, ನೀನು ಇಷ್ಟ ಎಂಬ ಮನೋಭಾವ ತೋರಿಸುತ್ತಿರಬೇಕು.
ಮತ್ತೊಂದು ಕಾಮೆಂಟ್ ಹೀಗಿದೆ- ಮಕ್ಕಳನ್ನು ನೋಡಿಕೊಳ್ಳುವಲ್ಲಿ ಸಹಾಯ ಮಾಡುವುದು. ಆಗಾಗ ಬಂದು ಹಿಂದಿನಿಂದ ತಬ್ಬುವುದು, ಹಣೆ ಮೇಲೆ ಹೂ ಮುತ್ತು ಕೊಡುವುದು- ಇವೆಲ್ಲವೂ ನಿಯಮಿತವಾಗಿದ್ದರೆ ಆತ ಬೇರೆ ತಂತ್ರಗಳ ಮೊರೆ ಹೋಗುವುದೇ ಬೇಡ.
ಮುಖ್ಯವಾಗಿ ಯಾರೊಬ್ಬರೂ 6 ಪ್ಯಾಕ್ ಅಥವಾ ಆತನ ಲುಕ್ಸ್ ಬಗ್ಗೆ ಒಂದು ಮಾತೂ ಅಭಿಪ್ರಾಯ ಕೊಡಲಿಲ್ಲ ಯಾಕೆಂದರೆ ಆಕೆಯ ಭಾವನಾತ್ಮಕ ಅಗತ್ಯಗಳು ಪೂರೈಕೆಯಾದರೆ ಖಂಡಿತಾ ಆಕೆ ನಿಮ್ಮ ತೋಳಿನಲ್ಲಿ ಬಂಧಿಯಾಗದೆ ಇರಲು ಸಾಧ್ಯವಿಲ್ಲ.