Thalapathy Vijay: 14 ವರ್ಷಗಳ ಬಳಿಕ ಕೇರಳಕ್ಕೆ ಬಂದ ದಳಪತಿ ವಿಜಯ್; ಕಾರಿನ ಗ್ಲಾಸ್ ಪುಡಿ ಪುಡಿ
Thalapathy Vijay: ವೆಂಕಟ್ ಪ್ರಭು ನಿರ್ದೇಶನದ ದಳಪತಿ ವಿಜಯ್ ಅವರು ಚಿತ್ರ ಗ್ರೇಟೆಸ್ಟ್ ಆಫ್ ಆಲ್ ಟೈಮ್ (ಗೋಟ್) ಸಿನಿಮಾ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆಂದು ನಟ ಕೇರಳಕ್ಕೆ ಭೇಟಿ ನೀಡಿದ್ದಾರೆ. 14 ವರ್ಷಗಳ ಬಳಿಕ ಅವರು ಕೇರಳ ರಾಜ್ಯಕ್ಕೆ ಮರಳಿದ್ದು, ವಿಜಯ್ ಪ್ರಯಾಣ ಮಾಡುತ್ತಿದ್ದ ಕಾರಿಗೆ ಅಭಿಮಾನಿಗಳಿಂದ ಹಾನಿಯಾಗಿದೆ. ಕಾರಿನ ಗ್ಲಾಸ್ ಪುಡಿ ಪುಡಿಯಾಗಿದೆ.
ಒಂದು ವಾರ ನಟ ವಿಜಯ್ ಅವರು ಸಿನಿಮಾ ಚಿತ್ರೀಕರಣಕ್ಕೆಂದು ಕೇರಳದಲ್ಲಿ ಇರಲಿದ್ದಾರೆ ಎನ್ನಲಾಗಿದೆ. ನಟ ಬರುವ ವಿಷಯ ತಿಳಿದು ಅಭಿಮಾನಿಗಳು ನಟನಿಗಾಗಿ ಕಾದಿದ್ದರು. ಪೊಲೀಸರು ಮಹತ್ವದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರಿಗೆ ಆಗಿಲ್ಲ. ಅಷ್ಟಾದರೂ ಅಭಿಮಾನಿಗಳ ಕಾರಿನ ಗ್ಲಾಸನ್ನು ಪುಡಿ ಪುಡಿ ಮಾಡಿದ್ದಾರೆ.
“ಗೋಟ್’ ನಿರ್ಮಾಣದ ಕೊನೆಯ ಹಂತದಲ್ಲಿದೆ. ಚೆನ್ನೈ, ಥೈಲ್ಯಾಂಡ್, ಹೈದರಾಬಾದ್ ಮತ್ತು ಪಾಂಡಿಚೇರಿಯಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರ ಬಿಡುಗಡೆಯ ದಿನಾಂಕ ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗಲಿದೆ.
Thalapathy Vijay Car-ரா இது 😱 எப்படி சல்லி சல்லியா நொறுக்கிருக்காங்க பாருங்க 😮
Full Video - https://t.co/mJLcPY59BJ #ThalapathyVijay #Vijay #VIJAYStormHitsKerala #Kerala #KeralaThalapathyFans #KeralaWelcomesThalapathy #KeralaWelcomesVIJAY #TVK #TVKParty pic.twitter.com/zoWRaLJ3qu
— Little Talks (@LittletalksYt) March 19, 2024